May 10, 2024

Bhavana Tv

Its Your Channel

ವರ್ಗಾವಣೆಗೊಂಡ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸೇವಾ ನಿವೃತ್ತಿಹೊಂದಿದ ಪಟ್ಟಣ ಠಾಣೆ ಕ್ರೈಂ ವಿಭಾಗದ ಸಬ್ ಇನ್ಸ್ ಪೆಕ್ಟರ್ ತೊಳಜನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವರ್ಗಾವಣೆಗೊಂಡ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸೇವಾ ನಿವೃತ್ತಿಹೊಂದಿದ ಪಟ್ಟಣ ಠಾಣೆ ಕ್ರೈಂ ವಿಭಾಗದ ಸಬ್ ಇನ್ಸ್ ಪೆಕ್ಟರ್ ತೊಳಜನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ನೀಡಿ ಮಾತನಾಡಿದರು….

ಪೋಲಿಸರ ಬಗ್ಗೆ ಸಾರ್ವಜನಿಕರಲ್ಲಿ ಇರುವ ಭಯ, ಅಸಹನೆಯನ್ನು ದೂರಮಾಡುವ ನಿಟ್ಟಿನಲ್ಲಿ ಪೋಲಿಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು . ಸರ್ಕಾರಿ ಕೆಲಸದಲ್ಲಿ ವರ್ಗಾವಣೆಯೆಂಬುದು ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಆದರೆ ನಾವು ಕೆಲಸ ಮಾಡಿದ ಸ್ಥಳದಲ್ಲಿ ನಾವು ಕಾರ್ಯನಿರ್ವಹಿಸಿದ ರೀತಿ, ಬದ್ಧತೆ, ಉತ್ತಮವಾದ ಕಾನೂನು ಸುವ್ಯವಸ್ಥೆಯ ಪಾಲನೆ ಮುಖ್ಯವಾಗುತ್ತದೆ. ಆದ್ದರಿಂದ ಯಾವುದೋ ಒತ್ತಡ, ಆಮಿಷಕ್ಕೆ ಒಳಗಾಗಿ ನಾವು ಮಾಡುವ ವೃತ್ತಿಗೆ ದ್ರೋಹ ಮಾಡಬಾರದು, ಜನಸ್ನೇಹಿ ಆಡಳಿತದಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದ ಡಿವೈಎಸ್ ಪಿ ನವೀನ್ ಕುಮಾರ್ ವರ್ಗಾವಣೆಗೊಂಡ ಸುಧಾಕರ್ ಮತ್ತು ಸೇವಾನಿವೃತ್ತಿಹೊಂದಿದ ತೊಳಜನಾಯಕ್ ಅವರನ್ನು ಅಭಿನಂದಿಸಿ ಗೌರವಿಸಿದರು .

ಪೋಲಿಸ್ ಇಲಾಖೆಯಲ್ಲಿ ವರ್ಗಾವಣೆಯು ನಿಗಧಿತವಾದ ಪ್ರಕ್ರಿಯೆಯಾಗಿದೆ, ಆದರೆ ನಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೇ ನಾವು ಸರ್ಕಾರದಿಂದ ಪಡೆಯುವ ಸರ್ಕಾರ ನೀಡುವ ಸಂಬಳದ ಹಣಕ್ಕೆ ಮೋಸಮಾಡದೇ ಬದ್ಧತೆಯಿಂದ ಕೆಲಸ ಮಾಡಬೇಕು, ಪೋಲಿಸ್ ಜನಸ್ನೇಹಿಯಾಗಬೇಕು ಎಂದು ನಾಗಮಂಗಲ ಉಪವಿಭಾಗದ ಡಿವೈಎಸ್ ಪಿ ನವೀನಕುಮಾರ್ ಹೇಳಿದರು …

ನೂತನವಾಗಿ ಕೆ.ಆರ್.ಪೇಟೆ ತಾಲೂಕಿಗೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡು ಆಗಮಿಸಿದ ದೀಪಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷ್ಣರಾಜಪೇಟೆ ತಾಲೂಕಿನಿಂದ ವರ್ಗಾವಣೆಗೊಂಡ ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್ ಮಾತನಾಡಿ ಎರಡು ವರ್ಷಗಳ ಕಾಲ ಕೆ.ಆರ್.ಪೇಟೆಯಲ್ಲಿ ಕೆಲಸ ಮಾಡಿ ಮೂರು ಚುನಾವಣೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಪೋಲಿಸ್ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ ಆದ್ದರಿಂದ ಸಂತೋಷದಿAದ ಬೇರೆಡೆಗೆ ತೆರಳುತ್ತಿದ್ದೇನೆ, ನನ್ನ ಸೇವಾ ಅವಧಿಯಲ್ಲಿ ಸಿಬ್ಬಂಧಿಗಳ ಮನಸ್ಸಿಗೆ ನೋವು ಉಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು ..

ಸೇವೆಯಿಂದ ನಿವೃತ್ತರಾದ ಸಬ್ ಇನ್ಸ್ ಪೆಕ್ಟರ್ ತೊಳಜನಾಯಕ್ ಹಾಡು ಹಾಡಿ ರಂಜಿಸಿದರಲ್ಲದೇ ನನ್ನ ಪೋಲಿಸ್ ವೃತ್ತಿಜೀವನದಲ್ಲಿ ಕೆಲಸ ಮಾಡಿದ ರೀತಿ ಸಮಾಧಾನ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರ ಆಪ್ತಸಹಾಯಕ ದಯಾನಂದ, ಯುವಮುಖಂಡ ಮಾಮಪ್ರವೀಣ್, ಪ್ರೇಮಾಬಾಯಿ ತೊಳಜನಾಯಕ್, ಪಟ್ಟಣ ಠಾಣೆ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಗ್ರಾಮಾಂತರ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಸುರೇಶ್, ಕಿಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಮತ್ತು ಹೊಸಹೊಳಲು ಗ್ರಾಮದ ದಲಿತಮುಖಂಡ ಸುರೇಶ್ ಭಾವಗೀತೆಗಳನ್ನು ಹಾಡಿ ರಂಜಿಸಿದರು ..
ಎಎಸ್ ಐ ಸುರೇಂದ್ರನಾಥ್, ಮುಖ್ಯಪೇದೆಗಳಾದ ಬಸವರಾಜು, ನಾಗರಾಜು, ಚಂದ್ರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣ, ಗ್ರಾಮಾಂತರ ಹಾಗೂ ಕಿಕ್ಕೇರಿ ಪೋಲಿಸ್ ಠಾಣೆಯ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: