May 5, 2024

Bhavana Tv

Its Your Channel

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಪದ್ಮೇಶ್ ತಂಡದ ಅಭ್ಯರ್ಥಿಗಳ ಭರ್ಜರಿ ಗೆಲುವು

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಪದ್ಮೇಶ್ ತಂಡಕ್ಕೆ ವಿಜಯಮಾಲೆ ತೊಡಿಸಿ ಆಶೀರ್ವದಿಸಿದ ಶಿಕ್ಷಕ ವೃಂಧ. ೧೦ ವರ್ಷಗಳ ಶಿವರಾಮೇಗೌಡ ಬಣದ ಆಡಳಿತ ಅಂತ್ಯ.

ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಪದ್ಮೇಶ್ ತಂಡದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪದ್ಮೇಶ್ ತಂಡದ ೧೦ ನಿರ್ದೇಶಕರು ಭರ್ಜರಿ ಜಯಗಳಿಸಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷರಾದ ಸಿ.ಕೆ.ಶಿವರಾಮೇಗೌಡ ಬಣದಿಂದ ೧೬ ನಿರ್ದೇಶಕರ ಪೈಕಿ ಕೇವಲ ೦೬ ಜನರು ಆಯ್ಕೆಯಾಗಿದ್ದು ಹೀನಾಯವಾಗಿ ಸೋಲು ಅನುಭವಿಸಿದ್ದಾರೆ .

ಪವಿತ್ರ.ಡಿ.ಕೆ (೪೪೯), ವಾಣಿ.ಎಂ.ಎಲ್(೪೩೬). ಮೋಹನಕುಮಾರಿ(೪೧೫), ಇಂದ್ರಾಣಿ.ಎ.ಬಿ(೪೧೪)., ಸಂಧ್ಯಾರಾಣಿ(೪೧೦),
ಪದ್ಮೇಶ್(೪೮೩), ಪೂರ್ಣಚಂದ್ರತೇಜಸ್ವಿ(೪೫೮), ಎಲ್.ಎಸ್.ಧರ್ಮಪ್ಪ(೪೭೩), ಸಿ.ಕೆ.ಶಿವರಾಮೇಗೌಡ(೪೧೮), ಕ್ಷ್ಮಣಗೌಡ.ಸಿ.ಟಿ(೪೦೫), ಮಂಜು.ಜಿ.ಎಸ್(೪೦೩)., ಆರ್.ಎನ್.ಶ್ರೀಧರ(೪೦೨), ಎಸ್.ಕೆ.ರವಿಕುಮಾರ್(೪೨೨), ರಾಮಕೃಷ್ಣೇಗೌಡ(೩೬೬),
ದಿನೇಶ್(೩೮೩),ಮತ್ತು ಶಿವಲಿಂಗೇಗೌಡ(೩೬೦), ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಲಕ್ಷ್ಮೀಕಾಂತ್ ಫಲಿತಾಂಶವನ್ನು ಅಧಿಕೃತವಾಗಿ ರಾತ್ರಿ ೧೨.೩೦ಕ್ಕೆ ಪ್ರಕಟಿಸಿದ್ದಾರೆ.
ಲಾಟರಿ ಮೂಲಕ ಒಲಿದ ವಿಜಯಲಕ್ಷ್ಮಿ,ಶಿವಲಿಂಗೇಗೌಡ ಆಯ್ಕೆ. ಶಿಕ್ಷಕರಾದ ಕೆ.ಕೆ.ಶಿವಲಿಂಗೇಗೌಡ ಮತ್ತು ಜಿ.ಜಯರಾಮು ತಲಾ ೩೬೦ ಮತಗಳನ್ನು ಸಮನಾಗಿ ಪಡೆದಿದ್ದ ಹಿನ್ನೆಲೆಯಲ್ಲಿ ಪುರುಷ ಅಭ್ಯರ್ಥಿಗಳ ಆಯ್ಕೆಯ ಕೊನೆಯ ೧೧ನೇ ನಿರ್ದೇಶಕರಾಗಿ ಲಾಟರಿಯಲ್ಲಿ ಶಿವಲಿಂಗೇಗೌಡ ಆಯ್ಕೆಯಾದರು ..

ಶಿಕ್ಷಕರಾದ ಪದ್ಮೇಶ್ ತಂಡದ ಸದಸ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರಲ್ಲದೇ ತಮ್ಮ ಆಯ್ಕೆಗೆ ಕಾರಣರಾದ ಪ್ರಜ್ಞಾವಂತ ಶಿಕ್ಷಕರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ಡಾ.ಅಂಚಿ ಸಣ್ಣಸ್ವಾಮಿಗೌಡ ಅವರಿಗೆ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: