May 12, 2024

Bhavana Tv

Its Your Channel

ನಾಗಮಂಗಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜೆ.ವೈ.ಮಂಜುನಾಥ್ ತಂಡಕ್ಕೆ ಗೆಲುವು.

ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ೦೮ ಪುರುಷರ ಮತ್ತು ೦೪ ಮಹಿಳಾ ಸ್ಥಾನಗಳು ಸೇರಿ ಎಲ್ಲಾ ೧೨ ಸ್ಥಾನಗಳಲ್ಲೂ ಜೆ.ವೈ.ಮಂಜುನಾಥ್ ತಂಡ ಗೆಲುವು ಸಾಧಿಸುವ ಮೂಲಕ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಹಾಲಿ ಅಧ್ಯಕ್ಷ ಸಿ.ಜೆ.ಕುಮಾರ್ ಬಣವನ್ನು ಮಣಿಸಿದೆ.

ಪಟ್ಟಣದ ಸುಗ್ರೀವಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತೆರೆಯಲಾಗಿದ್ದ ೦೨ ಮತಕೇಂದ್ರಗಳಲ್ಲಿ ಮತದಾನದ ಅರ್ಹತೆ ಪಡೆಯಲಾಗಿದ್ದ ೫೯೨ ಶಿಕ್ಷಕ/ಕಿಯರ ಪೈಕಿ ೫೮೭ ಮತಗಳು ಚಲಾವಣೆಯಾಗಿದ್ದವು. ಡಿ.೧೫ ರ ಬೆಳಿಗ್ಗೆ ೧೦ ರಿಂದ ಸಂಜೆ ೦೪ ರವರೆಗೆ ನಡೆದ ಮತದಾನ ಕೋವಿಡ್ ನಿಯಮಾನುಸಾರ ಶಾಂತಿಯುತವಾಗಿತ್ತು.

ಸAಜೆ ೦೬ ಕ್ಕೆ ಪ್ರಾರಂಭವಾದ ಮತಗಳ ಎಣಿಕೆ, ೦೪ ಟೇಬಲ್ ಗಳಲ್ಲಿ ೦೬ ಸುತ್ತುಗಳಲ್ಲಿ ಮುಗಿಯಿತು. ರಾತ್ರಿ ೮.೩೦ ರ ಸುಮಾರಿಗೆ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ಫಲಿತಾಂಶ ಪ್ರಕಟಿಸಿದರು. ಫಲಿತಾಂಶದ ಮುನ್ಸೂಚನೆ ದೊರೆಯುತ್ತಿದ್ದಂತೆ ಜೆ.ವೈ.ಎಂ. ಬಣದ ಶಿಕ್ಷಕರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಫಲಿತಾಂಶದ ನಂತರ ಮಾತನಾಡಿದ ತಂಡದ ನಾಯಕ ಜೆ.ವೈ.ಮಂಜುನಾಥ್, ಈ ಗೆಲುವು ಕೇವಲ ನನ್ನ ಬಣದ ಶಿಕ್ಷಕರ ಗೆಲುವಲ್ಲ. ಸತ್ಯಕ್ಕೆ ಮತ್ತು ಪ್ರಮಾಣಿಕತೆಗೆ ಸಿಕ್ಕಿರುವ ಜಯ. ಚುನಾವಣೆಗೂ ಮುನ್ನ ವಿರೋಧಿ ತಂಡದ ನಾಯಕರು ನಮ್ಮ ಮೇಲೆ ಮಾಡಲಾದ ಸುಳ್ಳು ಆರೋಪಗಳಿಗೆ ಶಿಕ್ಷಕರು ತಕ್ಕ ಉತ್ತರ ನೀಡಿದ್ದಾರೆ. ಏನೇ ಇರಲಿ ಶಿಕ್ಷಕರ ಆಶೋತ್ತರಗಳ ಈಡೇರಿಕೆಯ ಜತೆಗೆ ಶಿಕ್ಷಕ ವೃತ್ತಿಯ ಗೌರವ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದು ನಮ್ಮ ಗುರಿ. ಚಲಾವಣೆಯಾಗಿರುವ ೫೯೨ ಮತಗಳಲ್ಲಿ ನನಗೆ ಮತಚಲಾಯಿಸಿರುವ ೪೫೩ ಶಿಕ್ಷಕರಿಗೂ ನನ್ನ ಹೃನ್ಮನ ತುಂಬಿದ ಧನ್ಯವಾದಗಳು. ಶಿಕ್ಷಕರು ನಮ್ಮ ಮೇಲಿಟ್ಟಿರುವ ಭರವಸೆಗೆ ಚ್ಯೂತಿಯಾಗದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.

ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಬಿಇಒ ಜಗದೀಶ್, ಚುನಾವಣೆ ಎಂಬುದು ಶಿಕ್ಷಕರ ಸಂಘಟನೆಗಷ್ಠೆ ಸೀಮಿತವಾಗಿರಲಿ. ಮಕ್ಕಳ ಶ್ರೇಯೋಭಿವೃದ್ದಿಯ ಕನಸು ನಿಮ್ಮ ಮೂಲಕ ನನಸಾಗಿಸುವ ನಿಟ್ಟಿನಲ್ಲಿ ನಿಮ್ಮ ಕರ್ತವ್ಯವಿರಲಿ. ೫ ವರ್ಷಗಳ ಅವಧಿಗೆ ನಡೆದ ಈ ಚುನಾವಣೆಯ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮನ್ಯ. ನಿರ್ವಹಿಸುವ ಕರ್ತವ್ಯ ಆತ್ಮಸಾಕ್ಷಿಗೆ ಪೂರಕವಗಿರಲಿ ಎಂದರು.

ಒಟ್ಟರೆ ಶಿಕ್ಷಕರಿಗೂ ಮತದಾನದ ಅರಿವು ಅತ್ಯವಶ್ಯಕ ಎಂಬುದಕ್ಕೆ ತಿರಸ್ಕೃತಗೊಂಡಿರುವ ೩೬ ಮತಗಳೇ ಜೀವಂತ ಸಾಕ್ಷಿಯಾದುದಂತು ನಿಜ. ಕಳೆದ ಮೂರ್ನಾಲ್ಕು ದಿನಗಳಿಂದ ಆರೋಪ- ಪ್ರತ್ಯಾರೋಪಗಳ ನಡುವೆ ಶಾಂತಿಯುತವಾಗಿ ಮುಗಿದ ಚುನಾವಣೆಯ ನಂತರವಾದರೂ ತಮ್ಮ ತಮ್ಮ ಕರ್ತವ್ಯ ನಿಷ್ಠೆಯತ್ತ ಸಾಗುವ ಮೂಲಕ ಶಿಕ್ಷಕರ ಗೌರವಕ್ಕೆ ಹಿನ್ನಡೆಯಾಗದಿರಲಿ.

error: