May 4, 2024

Bhavana Tv

Its Your Channel

ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರ ಸಂಘಗಳ ಮಹಾಮಂಡಳದ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೃಷ್ಣರಾಜಪೇಟೆ :- ಜೀವ ಜಲವಾದ ನೀರು ಅಮೂಲ್ಯವಾದದ್ದಾಗಿದ್ದು ರೈತ ಬಾಂಧವರು ಹಿತವಾಗಿ ಮಿತವಾಗಿ ನೀರನ್ನು ಬಳಸಿಕೊಂಡು ನಾಲೆಯ ಕೊನೆಯ ಭಾಗದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೂ ಸರಾಗವಾಗಿ ನೀರು ಹರಿದುಹೋಗುವಂತೆ ಸಹಕಾರ ತತ್ವದ ಅಡಿಯಲ್ಲಿ ಬೇಸಾಯ ಮಾಡಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬೇಕು ಎಂದು ಮೈಸೂರಿನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ(ಕಾಡ)ದ ಅಧ್ಯಕ್ಷರಾದ ಶಿವಲಿಂಗಯ್ಯ ಕರೆ ನೀಡಿದರು ..

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಜಲಾಶಯ ಯೋಜನೆಯ ನಂ.೩ ವಿಭಾಗ ಕಛೇರಿಯ ಆವರಣದಲ್ಲಿ ನಡೆದ ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರ ಸಂಘಗಳ ಮಹಾಮಂಡಳದ ೨೦೨೦-೨೧ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು…

ರೈತ ಬಾಂಧವರು ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ಸಹಕಾರ ತತ್ವದ ಅಡಿಯಲ್ಲಿ ಬೇಸಾಯ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಾಲಸೌಲಭ್ಯವನ್ನು ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ರೈತರ ಬೇಸಾಯಕ್ಕೆ ಅಗತ್ಯವಾಗಿ ಬೇಕಾದ ನೀರನ್ನು ರೈತಬಾಂಧವರು ಪೋಲು ಮಾಡಿ ವ್ಯರ್ಥಮಾಡದೇ ತಮ್ಮ ಬೆಳೆಗೆ ಸಾಕಾಗುವಷ್ಟು ನೀರನ್ನು ಮಾತ್ರ ಬಳಸಿಕೊಂಡು, ಹೆಚ್ಚುವರಿಯಾದ ನೀರನ್ನು ಪಕ್ಕದ ಜಮೀನಿನ ಮೂಲಕ ನಾಲೆಯ ಕೊನೆಯ ಭಾಗದ ಜಮೀನಿಗೂ ಹರಿದುಹೋಗುವಂತೆ ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಿ ಅತ್ಯಧಿಕ ಇಳುವರಿಯನ್ನು ಪಡೆದುಕೊಂಡು ಬೇಸಾಯದ ನಷ್ಠದಿಂದ ಹೊರಬಂದು ಕೃಷಿಯನ್ನು ಲಾಭದಾಯಕ ಉಧ್ಯಮವನ್ನಾಗಿಸಿಕೊಳ್ಳಬೇಕು ಎಂದು ಕಾಡಾ ಅಧ್ಯಕ್ಷ ಶಿವಲಿಂಗಯ್ಯ ಮನವಿ ಮಾಡಿದರು …

ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಆರ್.ಎ.ನಾಗಣ್ಣ ಮಾತನಾಡಿ ರೈತರ ಸಮಗ್ರವಾದ ಅಭ್ಯುದಯಕ್ಕೆ ಕಾರಣವಾಗಿರುವ ಸಹಕಾರ ಸೂತ್ರವನ್ನು ರೈತಬಾಂಧವರು ನೀರಿನ ಸಮಗ್ರವಾದ ಬಳಕೆಯಲ್ಲಿಯೂ ಅಳವಡಿಸಿಕೊಳ್ಳುವ ಮೂಲಕ ನೀರಿಗಾಗಿ ಗಲಾಟೆ ಗದ್ದಲ ಮಾಡಿಕೊಳ್ಳುವುದರಿಂದ ಹೊರಬಂದು ಪರಸ್ಪರ ಪ್ರೀತಿವಿಶ್ವಾಸದಿಂದ ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸದೇ ಸಾವಯವ ಕೃಷಿಪದ್ಧತಿಯಲ್ಲಿ ಬೇಸಾಯ ಮಾಡಿ ಹೆಚ್ಚಿನ ಲಾಭಗಳಿಸುವ ಜೊತೆಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಮುಂದಾಗಬೇಕು ಎಂದು ನಾಗಣ್ಣ ಕರೆ ನೀಡಿದರು…

ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಚನ್ನರಾಯಪಟ್ಟಣದ ಹಡೇನಹಳ್ಳಿ ಲವಣ್ಣ, ಕಾಡಾ ಸಂಸ್ಥೆಯ ಆಡಳಿತಾಧಿಕಾರಿ ದಿವಾಕರನಾಯಕ್, ಮಹಾಮಂಡಳದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ.ಕುಮಾರ್, ಸಹಕಾರ್ಯದರ್ಶಿ ಕೆ.ಎನ್.ಲಕ್ಷ್ಮೀಶ ಸಭೆಯಲ್ಲಿ ಮಾತನಾಡಿದರು..

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಅಮೃತಿ ರಾಜಶೇಖರ್, ಕಣಿವೇಕೊಪ್ಪಲು ಮರೀಗೌಡ, ಪಟ್ಟಣಗೆರೆ ಸಿದ್ದೇಗೌಡ, ಕೆ.ಮಲ್ಲೇನಹಳ್ಳಿ ಪ್ರಕಾಶ್, ಬಸರಾಳು ನಿಂಗರಾಜು, ಹಂಗರಮುದ್ದನಹಳ್ಳಿ ಶಿವಪ್ಪ, ಮಡವಿನಕೋಡಿ ಮಹೇಶ್, ಸಂಕನಹಳ್ಳಿ ಮಲ್ಲೇಗೌಡ, ತಂದ್ರೇ ಮಾರ್ಕಂಡೇಗೌಡ, ಮುದುಗುಪ್ಪೆ ಯೋಗೇಂದ್ರ, ಕರ್ಪೂರವಳ್ಳಿ ರಾಜೇಗೌಡ, ಕೆ.ಕಾಳೇನಹಳ್ಳಿ ಭೈರೇಗೌಡ, ಹಾನಗಲ್ಲು ವಿಷ್ಣುವರ್ಧನ, ಅಣ್ಣೇಚಾಕನಹಳ್ಳಿ ಬಿ.ಕೆ.ಹೊನ್ನೇಗೌಡ, ದೊಡ್ಡಹಳ್ಳಿ ಮಾದೇಗೌಡ, ಗೊರೂರಿನ ಸೂಪರಿಂಟೆAಡೆAಟ್ ಎಂಜಿನಿಯರ್ ಯೋಗೇಶ್, ಚನ್ನರಾಯಪಟ್ಟಣ ಎಸ್.ಇ ಮಂಜುನಾಥ್, ತುಮಕೂರು ಹೇಮಾವತಿ ಜಲಾಶಯ ಯೋಜನೆಯ ಎಸ್.ಇ ವರದಯ್ಯ, ಕಾಡಾ ಭೂ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಧಾಕೃಷ್ಣ ಮತ್ತು ಹೇಮಾವತಿ ಅಚ್ಚುಕಟ್ಟು ಭಾಗದ ಪ್ರಗತಿಪರ ರೈತರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.

ವರದಿ.
ಡಾ.ಕೆ.ಆರ್.ನೀಲಕಂಠ.ಕೃಷ್ಣರಾಜಪೇಟೆ.ಮoಡ್ಯ

error: