April 27, 2024

Bhavana Tv

Its Your Channel

ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಣ್ಮನ ಸೆಳೆಯುತ್ತಿರುವ ತ್ರಿವೇಣಿ ಸಂಗಮ, ಕೈ ಬೀಸಿ ಕರೆಯುತ್ತಿರುವ ಅಪೂರ್ವ ಜಲರಾಶಿ

ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಪುರ, ಸಂಗಾಪುರ ಗ್ರಾಮದ ಸಮೀಪದಲ್ಲಿರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಜಲಸಾಗರದ ವೈಭವ. ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಕೈ ಬೀಸಿ ಕರೆಯುತ್ತಿರುವ ಅಪೂರ್ವ ಜಲರಾಶಿ, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿರುವ ವಿಶಾಲವಾದ ತ್ರಿವೇಣಿ ಸಂಗಮದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ರಮ್ಯರಮಣೀಯ ದೃಶ್ಯ ಕಾವ್ಯ ಕಣ್ಣಿಗೆ ಹಬ್ಬವಾಗಿದೆ

ಕೃಷ್ಣರಾಜಸಾಗರ ಜಲಾಶಯವು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ-ಅಂಬಿಗರಹಳ್ಳಿ-ಸAಗಾಪುರ ಗ್ರಾಮಗಳ ಪಕ್ಕದಲ್ಲಿ ಇರುವ ಹೇಮಾವತಿ, ಕಾವೇರಿ, ಮತ್ತು ಲಕ್ಷ್ಮಣತೀರ್ಥ ಮೂರು ನದಿಗಳು ಒಂದಾಗಿ ಸೇರುವ ಪವಿತ್ರವಾದ ತ್ರಿವೇಣಿ ಸಂಗಮವು ನಯನ ಮನೋಹರವಾದ
ದೃಶ್ಯವು ನಿರ್ಮಾಣವಾಗಿದ್ದು, ವಿಶಾಲವಾದ ಜಲಸಾಗರದ ಸೌಂದರ್ಯವನ್ನು ಆಹ್ವಾದಿಸಲು ಎರಡು ಕಣ್ಣುಗಳು ಸಾಲದಾಗಿವೆ.

ಕೃಷ್ಣರಾಜಪೇಟೆ ತಾಲ್ಲೂಕಿನ ತ್ರಿವಳಿ ಗ್ರಾಮಗಳಾದ ಪುರ-ಅಂಬಿಗರಹಳ್ಳಿ-ಸAಗಾಪುರ ಗ್ರಾಮಗಳ ಪಕ್ಕದಲ್ಲಿಯೇ ಇರುವ ಪವಿತ್ರ ತ್ರಿವೇಣಿ ಸಂಗಮವು ಜಲರಾಶಿಯ ಸೌಂದರ್ಯದಿAದ ಕಂಗೋಳಿಸುತ್ತಿದೆ. ಕಳೆದ ಎಂಟು ವರ್ಷಗಳ ಹಿಂದೆ ನಡೆದಿದ್ದ ಮಹಾಕುಂಭ ಮೇಳದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ತ್ರಿವೇಣಿ ಸಂಗಮದಲ್ಲಿ ಮಿಂದು ಕುಂಭಮೇಳದ ಸಂಭ್ರಮಾಚರಣೆಗೆ ವಿಶೇಷ ಅರ್ಥವನ್ನು ನೀಡಿದ್ದರು.

ಕೃಷ್ಣರಾಜಸಾಗರ ಜಲಾಶಯವು ಭರ್ತಿಯಾಗಲು ಕೇವಲ ಎರಡು ಅಡಿ ಭಾಕಿ ಇರುವ ಈ ಸಂದರ್ಭದಲ್ಲಿ ಪವಿತ್ರವಾದ ಸಂಗಮೇಶ್ವರ ಸ್ವಾಮಿ ಕ್ಷೇತ್ರಕ್ಕೆ ಹೊಂದಿಕೊAಡAತಿರುವ ಸಂಗಮ ಕ್ಷೇತ್ರವು ಹತ್ತಾರು ಕಿ.ಮೀ. ವಿಸ್ತೀರ್ಣದಲ್ಲಿ ಹರಡಿರುವ ಜಲರಾಶಿಗೆ ವಿಶೇಷವಾದ ರಂಗು ಬಂದಿದೆ.

ಪ್ರಕೃತಿಯ ರಮ್ಯ ರಮಣೀಯ ಜಯರಾಶಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹಾಗೂ ಪ್ರಕೃತಿ ಪ್ರೇಮಿಗಳಿಗೆ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಲು ಇದು ಸುಸಮಯವಾಗಿದೆ. ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಬಾಲಕ ಮಹದೇಶ್ವರರು ಪವಾಢ ಮಾಡಿದ ಸವಿನೆನಪಿಗಾಗಿ ನಿರ್ಮಾಣವಾಗುತ್ತಿರುವ ಭವ್ಯ ದೇವಾಲಯದ ಕಾಮಗಾರಿಯು ಭರದಿಂದ ಸಾಗಿದೆ.

ದೇವಾಲಯದ ಗೋಪುರದ ಕಾಮಗಾರಿಯನ್ನು ತಮಿಳುನಾಡಿನ ಮಧುರೈನ ಶಿಲ್ಪಿಗಳು ತಮ್ಮ ಕೈಚಳಕದ ಮೂಲಕ ಸುಂದರವಾಗಿ ನಿರ್ಮಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡರ ನೇತೃತ್ವದಲ್ಲಿ ಮಹದೇಶ್ವರರ ದೇವಾಲಯವು ವಾಸ್ತುಬದ್ಧವಾಗಿ ಸುಂದರವಾಗಿ ನಿರ್ಮಾಣವಾಗುತ್ತಿದೆ. ದಕ್ಷಿಣ ಭಾರತದಲ್ಲಿಯೇ ಅಪರೂಪದ್ದಾಗಿರುವ ಕಾವೇರಿ, ಹೇಮಾವತಿ, ಮತ್ತು ಲಕ್ಷ್ಮಣತೀರ್ಥ ಮೂರು ನದಿಗಳು ಜೀವಂತವಾಗಿ ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಒಂದೆಡೆ ಸೇರುವ ಪವಿತ್ರ ತ್ರಿವೇಣಿ ಸಂಗಮವು ಇಂದಿಗೂ ಕೂಡಾ ಪ್ರಚಾರಕ್ಕೆ ಬರದೇ ಜನಮಾನಸಕ್ಕೆ ತಲುಪದೇ ಇಂದಿಗೂ ಕಗ್ಗತ್ತಲಿನಲ್ಲಿಯೇ ಉಳಿದಿದೆ. ದಿನವಹಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಹೋಗುವ ಅದ್ಭುತವಾದ ಪ್ರವಾಸಿ ಕೇಂದ್ರವಾಗಿ ಪುಣ್ಯಕ್ಷೇತ್ರವಾಗಬೇಕಾಗಿದ್ದ ಸಂಗಮ ಕ್ಷೇತ್ರವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದ್ದು, ಪ್ರವಾಸಿಗರನ್ನು ಸೆಳೆಯಲು ಸಂಪೂರ್ಣವಾಗಿ ವಿಫಲವಾಗಿದೆ.

ಪವಿತ್ರ ತ್ರಿವೇಣಿ ಸಂಗಮಕ್ಕೆ ಭಕ್ತರು ಹಾಗೂ ಯಾತ್ರಾರ್ಥಿಗಳು ಬಂದು ಹೋಗಲು ಅನುಕೂಲವಾಗುವಂತೆ ಸುಸಜ್ಜಿತವಾದ ರಸ್ತೆ, ಕುಡಿಯುವ ನೀರು, ಸಾರಿಗೆ ಸೌಲಭ್ಯ, ಯಾತ್ರಿಭವನ ಸೇರಿದಂತೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ದಿಕ್ಕಿನಲ್ಲಿ ರಾಜ್ಯದ ಪ್ರವಾಸೋದ್ಯಮ ಸಚಿವರ ಮೇಲೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯುವ ಜನ ಸಬಲೀಕರಣ, ಕ್ರೀಡೆ, ಹಾಗೂ ರೇಷ್ಮೆ ಸಚಿವರಾದ ಕ್ಷೇತ್ರದ ಶಾಸಕ ಡಾ.ನಾರಾಯಣಗೌಡ ಒತ್ತಡಹಾಕಿ ತ್ರಿವೇಣಿ ಸಂಗಮಕ್ಕೆ ಕಾಯಕಲ್ಪ ನೀಡಲು ಮುಂದಾಗಬೇಕಿದೆ. ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿರುವ ತ್ರಿವೇಣಿ ಸಂಗಮ ಕ್ಷೇತ್ರಕ್ಕೂ ಸಮಗ್ರವಾಗಿ ಅಭಿವೃದ್ಧಿಯಾಗಿ ರಾಜ್ಯದ ಪ್ರವಾಸೋದ್ಯಮ ಭೂಪಟದಲ್ಲಿ ಮಹತ್ವದ ಸ್ಥಾನವನ್ನು ಪಡೆಯುವ ದಿಕ್ಕಿನಲ್ಲಿ ಪ್ರವಾಸೋದ್ಯಮ
ಇಲಾಖೆಯ ಅಧಿಕಾರಿಗಳು ಮುಂದಾಗಿ ಕ್ರಿಯಾಯೋಜನೆಯನ್ನು ರೂಪಿಸಿ ತುರ್ತಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಿ ತ್ರಿವೇಣಿ ಸಂಗಮಕ್ಕೆ ಪ್ರವಾಸೋದ್ಯಮ ಸ್ಪರ್ಶವನ್ನು ನೀಡಲು ಮುಂದಾಗಬೇಕು. ಕತ್ತಲಿನಲ್ಲಿರುವ ತ್ರಿವೇಣಿ ಸಂಗಮವು ನಾಡಿನ ಜನತೆಯ ಕಣ್ಣಿಗೆ ಕಾಣುವಂತಾಗಬೇಕು, ಪವಿತ್ರ ತ್ರಿವೇಣಿ ಸಂಗಮವು ಯಾತ್ರಾ ಸ್ಥಳವಾಗಿ ಅಭಿವೃದ್ಧಿಯಾಗಬೇಕು ಎಂಬುದು ಈ ಭಾಗದ ಜನತೆಯ ಹತ್ತಾರು ವರ್ಷಗಳ ಕನಸಾಗಿದೆ. ಈ ಕನಸು ನನಸಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ತ್ರಿವೇಣಿ ಸಂಗಮ ಅಭಿವೃದ್ಧಿಯ ಹೋರಾಟ ಸಮಿತಿಯ ಸಂಚಾಲಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ನಿರೀಕ್ಷೆಯಲ್ಲಿದ್ದಾರೆ.

ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ಮೂರು ನದಿಗಳು ಜೀವಂತವಾಗಿ ಒಂದಾಗಿ ಸೇರುವ ಅಪರೂಪದ ಪವಿತ್ರ ಪುಣ್ಯ ಕ್ಷೇತ್ರವು ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಇರುವುದು ಹೆಮ್ಮೆಯ ವಿಚಾರವಾಗಿದೆ.

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸಿದರೆ ಅಪರೂಪದ ಈ ಪುಣ್ಯ ಸ್ಥಳವು ದೇಶದಲ್ಲಿಯೇ ಪ್ರಖ್ಯಾತಿ ಹೊಂದಲಿದೆ. ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡ ಅವರು ತ್ರಿವೇಣಿ ಸಂಗಮದ ಸಮಗ್ರವಾದ ಅಭಿವೃದ್ಧಿಯ ಕನಸು ಹೊತ್ತಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಸಚಿವರನ್ನು ಶ್ರೀಕ್ಷೇತ್ರಕ್ಕೆ ಕರೆಸಿ ತ್ರಿವೇಣಿ ಸಂಗಮದ ಪರಿಚಯ ಮಾಡಿಸಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸದ್ಯದಲ್ಲಿಯೇ ತ್ರಿವೇಣಿ ಸಂಗಮದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಅನುಷ್ಠಾನವಾಗಿ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳು ದೊರೆಯುವ ವಿಶ್ವಾಸವಿದೆ.


ಎಂ.ಶಿವಮೂರ್ತಿ,ತಹಶೀಲ್ದಾರ್, ಕೃಷ್ಣರಾಜಪೇಟೆ. ಬಾಲಕ ಮಹದೇಶ್ವರರು ಉತ್ತರ ದೇಶದಿಂದ ಬಂದಾಗ ಶ್ರೀ ಕ್ಷೇತ್ರದಲ್ಲಿನ ಕಾವೇರಿ ನದಿಯನ್ನು ದಾಟಿ ಕಪ್ಪಡಿ ಕ್ಷೇತ್ರಕ್ಕೆ ಹೋಗಲು ಅಂಬಿಗರನ್ನು ಹರಿಗೋಲಿನಲ್ಲಿ ನದಿದಾಟಿಸಲು ಕೋರಿದಾಗ ಅಂಬಿಗರು ಹಣ ನೀಡದಿದ್ದರೆ ಹರಿಗೋಲಿನಲ್ಲಿ ನದಿ ದಾಟಿಸಲು ಸಾಧ್ಯವಿಲ್ಲ ಎಂದಾಗ ಅಂಬಿಗರಿಗೆ ಶಾಪನೀಡಿದ ಬಾಲಕ ಮಹದೇಶ್ವರರು ತಾವು ಹೊದ್ದಿದ್ದ ಕೆಂಪುವಸ್ತ್ರವನ್ನೇ ನೀರಮೇಲೆ ಹಾಸಿ ತೆಪ್ಪಮಾಡಿಕೊಂಡು ನದಿದಾಟಿದ ಬಗ್ಗೆ ಜನಪದರು ತಮ್ಮ ಹಾಡಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡ ಅಂಬಿಗರು ಮಹದೇಶ್ವರರನ್ನು ಬೇಡಿಕೊಂಡಾಗ ತೆಪ್ಪವನ್ನು ಪುನರ್‌ಸೃಷ್ಠಿಸಿಕೊಟ್ಟು ತಪ್ಪನ್ನು ಕ್ಷಮಿಸಿದ ಬಗ್ಗೆ ಕಥೆಗಳಿವೆ. ಬಾಲಕ ಮಹದೇಶ್ವರರು ಬಾಲ್ಯದಲ್ಲಿ ಪವಾಡಮಾಡಿದ ಸಂಗಮ ಕ್ಷೇತ್ರದಲ್ಲಿ ಭವ್ಯವಾದ ಮಹದೇಶ್ವರರ ದೇವಾಲಯವನ್ನು ನಿರ್ಮಿಸಿ ಮಹದೇಶ್ವರರ ಪವಾಡದ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಶ್ರದ್ಧಾಭಕ್ತಿಯಿಂದ ಮಾಡಲಾಗುತ್ತಿದೆ.

ಡಾ.ಅಂಚಿ.ಸಣ್ಣಸ್ವಾಮೀಗೌಡ, ತ್ರಿವೇಣಿ ಸಂಗಮ ಅಭಿವೃದ್ಧಿಯ ಹೋರಾಟವಸಮಿತಿಯ ಸಂಚಾಲಕ
ದೇಶದಲ್ಲಿಯೇ ಅಪರೂಪದ್ದಾಗಿರುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಾನು ಮೊದಲ ಭಾರಿಗೆ ಶಾಸಕನಾಗಿದ್ದಾಗ ಪವಿತ್ರ ಕುಂಭಮೇಳವನ್ನು ನಡೆಸಿ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ತ್ರಿವೇಣಿ ಸಂಗಮವನ್ನು ನಾಡಿಗೆ ಪರಿಚಯಮಾಡಿಕೊಡುವ ಕೆಲಸವನ್ನು ಮಾಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕುಂಭ ಮೇಳದ ಆಚರಣೆಗೆ ಅಡ್ಡಿಯುಂಟಾಗಿತ್ತು, ಪ್ರಸ್ತುತ ಕೋವಿಡ್ ಸೊಂಕಿನ ಪ್ರಮಾಣವು ಇಳಿಮುಖ ಆಗುತ್ತಿರುವುದರಿಂದ ಸದ್ಯದಲ್ಲಿಯೇ ಈ ಭಾಗದ ಮುಖಂಡರ ಸಭೆ ಕರೆದು ಕುಂಭ ಮೇಳ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು. ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭಕ್ತಾಧಿಗಳು ಮತ್ತು ಯಾತ್ರಾರ್ಥಿಗಳು ಆಗಮಿಸಲು ಅನುಕೂಲವಾಗುವಂತೆ ಸುಸಜ್ಜಿತವಾದ ರಸ್ತೆ, ಯಾತ್ರಿನಿವಾಸ ಭವನ, ಕುಡಿಯುವ ನೀರು ಸೇರಿದಂತೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ತ್ರಿವೇಣಿ ಸಂಗಮಕ್ಕೆ ಯಾತ್ರಾರ್ಥಿಗಳನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ವಿಶೇಷ ವರದಿ…ಕೆ.ಆರ್.ನೀಲಕಂಠ,
ಕೃಷ್ಣರಾಜಪೇಟೆ

error: