May 8, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಸಡಗರ ಸಂಭ್ರಮದಿAದ ಕನ್ನಡಿಗರ ನುಡಿಹಬ್ಬ ೬೬ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು .. ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಮಾಡಿ ಕನ್ನಡ ಧ್ವಜಾರೋಹಣ ಮಾಡಿದ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುAಡ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್ ಮತ್ತು ಪುರಸಭೆ ಸದಸ್ಯರು ಹಾಗೂ ಸಿಬ್ಬಂಧಿಗಳಿAದ ಭುವನೇಶ್ವರಿ ತಾಯಿಯ ಫೋಟೋಗೆ ಪುಷ್ಪಾರ್ಚನೆಸಲ್ಲಿಸದರು

ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ಶ್ರದ್ಧಾ ಭಕ್ತಿಯಿಂದ ಹಾಡಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೀತನಮನ ಸಲ್ಲಿಸಿದ ಪುರಸಭೆ ಸದಸ್ಯರು ಮತ್ತು ಸಿಬ್ಬಂಧಿಗಳು..

ಕನ್ನಡಿಗರು ಕನ್ನಡ ನಾಡುನುಡಿ ಹಾಗೂ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ತಾಯಿ ಭಾಷೆಯ ಬಗ್ಗೆ ವಿಶೇಷವಾಗಿ ಪ್ರೀತಿಯನ್ನು ಬೆಳೆಸಿಕೊಂಡು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಅಧ್ಯಕ್ಷೆ ಮಹಾದೇವಿನಂಜುAಡ ಮನವಿ ಮಾಡಿದರು..

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪುರಸಭೆ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಸದಸ್ಯರಾದ ಹೆಚ್.ಆರ್.ಲೋಕೇಶ್, ಕೆ.ಆರ್.ರವೀಂದ್ರಬಾಬೂ, ಹೆಚ್.ಡಿ.ಅಶೋಕ, ಶಾಮಿಯಾನ ತಿಮ್ಮೇಗೌಡ, ಗಿರೀಶ್, ಪಂಕಜಾ, ಡಿ.ಪ್ರೇಮಕುಮಾರ್, ಹೆಚ್.ಎನ್.ಪ್ರವೀಣ್, ಮುಖಂಡರಾದ ನಂಜುAಡ, ಶ್ರೀನಿವಾಸಕೇಸರಿ, ದೇವರಾಜು, ವಿಶ್ವನಾಥ್, ಉಮೇಶ್, ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾ, ವ್ಯವಸ್ಥಾಪಕ ಸೋಮಶೇಖರ್, ಪೌರಕಾರ್ಮಿಕರ ಮೇಸ್ತ್ರಿ ಮಂಟೇಮAಜು, ಆರೋಗ್ಯ ಪರಿವೀಕ್ಷಕ ಅಶೋಕ ಮತ್ತು ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ ,
ಕೃಷ್ಣರಾಜಪೇಟೆ , ಮಂಡ್ಯ

error: