May 19, 2024

Bhavana Tv

Its Your Channel

ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತವು ಆಯೋಜಿಸಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ಅರ್ಥಪೂರ್ಣವಾಗಿ ಸಡಗರ ಸಂಭ್ರಮದಿAದ ಅದ್ದೂರಿಯಾಗಿ ನಡೆಯಿತು …

ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಎಂ. ಶಿವಮೂರ್ತಿ ಅವರು ಆರೋಹಣ ಮಾಡಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಕನ್ನಡ ಧ್ವಜಾರೋಹಣ ಮಾಡಿದರು..

ಕನ್ನಡಿಗರು ಕನ್ನಡ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡ ಭಾಷೆಯನ್ನು ಗೌರವಿಸಿ ಪ್ರೀತಿಸಿ ಆರಾಧಿಸಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಕನ್ನಡ ಭಾಷೆಯು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಕಲಿಯಲು ಅತ್ಯಂತ ಸುಲಭವಾಗಿದ್ದು ಸುಂದರವಾಗಿದೆ. ಕನ್ನಡದ ನೆಲದಲ್ಲಿ ವಾಸಿಸುವ ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು. ವಿದ್ಯಾರ್ಥಿಗಳು ಆಂಗ್ಲಮಾಧ್ಯಮದ ವ್ಯಾಮೋಹದಿಂದ ಹೊರಬಂದು ಮಾತೃಭಾಷೆಯಾದ ಕನ್ನಡವನ್ನು ಶ್ರದ್ಧೆಯಿಂದ ಕಲಿತು ಸಾಧನೆ ಮಾಡಬೇಕು ಎಂದು ತಹಶೀಲ್ದಾರ್ ಶಿವಮೂರ್ತಿ ಕರೆ ನೀಡಿದರು ..

ಜಿಲ್ಲಾ ಪಂಚಾಯತಿ ಮಾಜಿಸದಸ್ಯ ರಾಮದಾಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಸಭೆಯಲ್ಲಿ ಮಾತನಾಡಿದರು…

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಡಾ.ವಿರೂಪಾಕ್ಷ ರಾಜಯೋಗಿ, ಸಾವಯವ ಕೃಷಿಕರಾದ ಬಸವನಹಳ್ಳಿ ಬಸವರಾಜು, ರಂಗಭೂಮಿ ಕಲಾವಿದರಾದ ಚಿಕ್ಕಗಾಡಿಗನಹಳ್ಳಿ ರೇಣುಕಾ, ಪೂವನಹಳ್ಳಿ ಪಿ.ಜೆ.ವೆಂಕಟರಾಮು, ಚಟ್ಟೇನಹಳ್ಳಿ ನಾಗರಾಜು, ಜನಮೆಚ್ಚಿದ ವಿಜ್ಞಾನ ಶಿಕ್ಷಕಿ ವನಿತಾ, ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ, ಸ್ಯಾಕ್ಸಾಫೋನ್ ವಾಧಕಿ ಹೊಸಹೊಳಲು ಯಶಸ್ವಿನಿ, ಕರವೇ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ತಜ್ಞವೈದ್ಯರಾದ ಡಾ.ಶ್ರೀಕಾಂತ್, ಅಂತರಾಷ್ಟ್ರೀಯ ಯೋಗಪಟು ಅಲ್ಲಮಪ್ರಭು ಮತ್ತು ಸುಗಮಸಂಗೀತ ಗಾಯಕ ಬಳ್ಳೇಕೆರೆ ಹೇಮಚಂದ್ರ ಅವರನ್ನು ತಾಲ್ಲೂಕು ಆಡಳಿತದ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಫಲತಾಂಬೂಲದೊAದಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು..

ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ಆವರಣದಿಂದ ರಾಜ್ಯೋತ್ಸವ ಕಾರ್ಯಕ್ರಮ ನಡೆದ ತಾಲ್ಲೂಕು ಕ್ರೀಡಾಂಗಣದವರೆಗೆ ಸಾಂಸ್ಕೃತಿಕ ಕಲಾತಂಡಗಳು, ಸ್ತಬ್ಧಚಿತ್ರಗಳು, ಬ್ಯಾಂಡ್ ಸೆಟ್ ನೊಂದಿಗೆ ತಾಯಿ ರಾಜರಾಜೇಶ್ವರಿ ತಾಯಿ ಕನ್ನಡಾಂಭೆಯ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ಅಲಂಕರಿಸಿಕೊAಡು ಮುಖ್ಯರಸ್ತೆಯಲ್ಲಿ ವರ್ಣರಂಜಿತ ಮೆರವಣಿಗೆ ನಡೆಸಲಾಯಿತು.. ಆಶೀರ್ವಾದ ಶಾಲೆ, ಕಾಟೇಜ್ ಶಾಲೆ, ದಕ್ಷಿಣಶಾಲೆ, ಕೆಪಿಎಸ್ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ಪ್ರದರ್ಶಿಸಿದ ಆಕರ್ಷಕ ನೃತ್ಯವು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ರಂಜಿಸಿತು…

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಕೆ.ಎಸ್.ಸಂತೋಷ್, ಶಾಮಿಯಾನ ತಿಮ್ಮೇಗೌಡ, ಗಿರೀಶ್, ಹೆಚ್.ಆರ್.ಲೋಕೇಶ್, ಬಿಇಓ ಬಸವರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಸಿಡಿಪಿಓ ದೇವಕುಮಾರ್, ಅಬ್ಕಾರಿ ನಿರೀಕ್ಷಕಿ ಭವ್ಯ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎನ್.ಚಂದ್ರಶೇಖರ್, ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ. ದೀಪಕ್, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪದ್ಮೇಶ್, ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಮಹೇಶ್, ಹೇಮಾವತಿ ಜಲಾಶಯ ಯೋಜನೆಯ ನಂ.೦೫ ವಿಭಾಗದ ಎಇಇ ಈರಣ್ಣ, ನಂ.೨೦ ವಿಭಾಗದ ಎಇಇ ರಂಗಸ್ವಾಮಿ, ಸಹಾಯಕ ಎಂಜಿನಿಯರ್ ನಾಯಕ್, ದೊರೆಸ್ವಾಮಿ, ಎಲೆಕೆರೆ ರವಿ, ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ, ಪುರಸಭೆ ಮುಖ್ಯಾಧಿಕಾರಿ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ನಮ್ಮನ್ನು ಅಗಲಿದ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾ???ಕುಮಾರ್ ನಿಧನಕ್ಕೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: