May 19, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಕೆ.ರಾಮೇಗೌಡ ರವರಿಂದ ಬಿರುಸಿನ ಪ್ರಚಾರ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕನ್ನಡ ಚಳವಳಿ ಹೋರಾಟಗಾರ ಸಿ.ಕೆ.ರಾಮೇಗೌಡ ಅವರಿಂದ ಕೆ.ಆರ್.ಪೇಟೆಯಲ್ಲಿ ಬಿರುಸಿನ ಪ್ರಚಾರ,

ಕೆ.ಆರ್.ಪೇಟೆ: ನವೆಂಬರ್ ೨೧ ರಂದು ನಡೆಯಲಿರುವ ರಾಜ್ಯದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕನ್ನಡ ಚಳವಳಿ ಹೋರಾಟಗಾರ ಸಿ.ಕೆ.ರಾಮೇಗೌಡ ಅವರು ಇಂದು ಕೃಷ್ಣರಾಜಪೇಟೆ ಪಟ್ಟಣ ಹಾಗೂ ತಾಲ್ಲೂಕಿನ ಕಿಕ್ಕೇರಿ ಮತ್ತು ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು..

ಸರ್ವಜನಾಂಗದ ಅಭಿವೃದ್ಧಿಯ ಬಂಧು, ಸಮಾನತೆಯ ಹರಿಕಾರ ಮೈಸೂರು ಅರಸರಾದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಸಮಸ್ತ ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿದೆ. ಕನ್ನಡವನ್ನು ಕಟ್ಟುವ, ಕನ್ನಡಿಗರ ಹಿತವನ್ನು ಕಾಪಾಡುವ ಕನ್ನಡಿಗರ ಪ್ರಾತಿನಿಧಿಕ ಅಭಿಮಾನದ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಸಮಸ್ತ ಕನ್ನಡಿಗರ ಶಕ್ತಿಕೇಂದ್ರವಾಗಿ, ಕನ್ನಡಿಗರ ಧ್ವನಿಯಾಗಿಸುವ ಧಿಕ್ಕಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ತಮಗೆ ಒಂದು ಅವಕಾಶ ನೀಡಿ ಹರಸಬೇಕು ಎಂದು ಕೈಮುಗಿದು ಮನವಿ ಮಾಡಿದ ರಾಮೇಗೌಡ ಉತ್ತರ, ದಕ್ಷಿಣ ಕರ್ನಾಟಕ ಎಂಬ ಬೇಧಬಾವವಿಲ್ಲದಂತೆ ನಾಡಿನ ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಕನ್ನಡವನ್ನು ಕಟ್ಟುವ ಸಾಮರ್ಥ್ಯವು ತಮಗಿರುವುದರಿಂದ ಒಂದು ಅವಕಾಶ ನೀಡಿ ಕನ್ನಡಮ್ಮನ ತೇರನ್ನು ಎಳೆಯಲು ಅವಕಾಶ ಮಾಡಿಕೊಡಿ, ಒಬ್ಬ ಸಾಮಾನ್ಯ ಕನ್ನಡದ ಕಟ್ಟಾಳಿನಂತೆ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಿ ತಮ್ಮ ಸಾಮರ್ಥ್ಯವನ್ನು ಸಾಧಿಸಿ ತೋರಿಸುವುದಾಗಿ ತಿಳಿಸಿದ ಗೌಡರು ತಾವು ಪ್ರಚಾರಕ್ಕೆ ಹೋದಕಡೆಯಲ್ಲೆಲ್ಲಾ ಉತ್ತಮವಾದ ಜನಬೆಂಬಲವು ವ್ಯಕ್ತವಾಗುತ್ತಿದೆ. ಸಾಹಿತ್ಯ ಸಂಘಟಕರಾದ ಬರಗೂರುರಾಮಚಂದ್ರಪ್ಪ, ಪ್ರೊ.ಬಿ.ಜಯಪ್ರಕಾಶಗೌಡ, ಸರಜೂಕಾಟ್ಕರ್ ಸೇರಿದಂತೆ ಅತಿರಥ ಮಹಾರಥರು ತಮ್ಮ ಬೆಂಬಲಕ್ಕೆ ನಿಂತಿರುವುದರಿAದ ತಮ್ಮ ಆಯ್ಕೆಯು ನಿಶ್ಚಿತವಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕನ್ನಡದ ಕೆಲಸ ಮಾಡಿರುವ ತಮಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು…

ಸಿ.ಕೆ.ರಾಮೇಗೌಡ ಅವರ ಜೊತೆ ಪ್ರಚಾರ ಹಾಗೂ ಮತಯಾಚನೆ ಸಂದರ್ಭದಲ್ಲಿ ಯುವ ಬರಹಗಾರರ ಒಕ್ಕೂಟದ ಅಧ್ಯಕ್ಷ ಸತೀಶ್ ಜವರೇಗೌಡ, ಕೆ.ಆರ್.ಪೇಟೆ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕಸಾಪ ಮಾಜಿಅಧ್ಯಕ್ಷರಾದ ಕೆ.ಕಾಳೇಗೌಡ, ಡಾ.ಕೆ.ಆರ್.ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ರೈತ ನಾಯಕರಾದ ಕೆಂಪೂಗೌಡ, ಮರುವನಹಳ್ಳಿ ಶಂಕರ್, ಮಂದಗೆರೆ ಜಯರಾಂ, ವಿಠಲಾಪುರ ಜಯರಾಂ, ಯುವಸಾಹಿತಿ ಮಹಮದ್ ಅಜರುದ್ಧೀನ್, ಮರುಕನಹಳ್ಳಿ ಸಹನಾ ಮತ್ತಿತರರು ಭಾಗವಹಿಸಿದ್ದರು…

ವರದಿ:
ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ
,

error: