May 8, 2024

Bhavana Tv

Its Your Channel

ಕಾನೂನು ಅರಿವು ನೆರವು ಕಾರ್ಯಕ್ರಮ

ಕೆ.ಆರ್.ಪೇಟೆ: ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಡಿಕೊಂಡು ನ್ಯಾಯಾಲಯಕ್ಕೆ ಬಂದು ವ್ಯಾಜ್ಯ ಹೂಡಬೇಡಿ..ನಿಮ್ಮಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊAಡು ನೆಮ್ಮದಿಯ ಜೀವನ ನಡೆಸಿ ಎಂದು. ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಮೀರ್.ಪಿ ನಂಧ್ಯಾಲ್ ಕರೆ ನೀಡಿದರು ..

ದಯಮಾಡಿ ಸಣ್ಣಪುಟ್ಟ ಕಾರಣಗಳಿಗೆ ಕಿತ್ತಾಟ ಮಾಡಿಕೊಂಡು ಪೋಲಿಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಬೇಡಿ..ಸಣ್ಣಪುಟ್ಟ ವ್ಯಾಜ್ಯಗಳು ಹಾಗೂ ಜಗಳಗಳಿಗೆ ನಿಮ್ಮಲ್ಲಿಯೇ ರಾಜಿಪಂಚಾಯ್ತಿ ಮೂಲಕ ಬಗೆಹರಿಸಿಕೊಳ್ಳಿ ಗ್ರಾಮೀಣ ಜನರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸಿ ಎಂದು ಪಟ್ಟಣದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್.ಪಿ.ನಂಧ್ಯಾಲ್ ಕೈಮುಗಿದು ಮನವಿ ಮಾಡಿದರು..

ಅವರು ಇಂದು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಪ್ರಚಾರಾಂದೋಲನ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು…

ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಸಂವಿಧಾನವು ನಮಗೆ ವರವಾಗಿ ನೀಡಿರುವ ಕಾನೂನಿನ ಬಗ್ಗೆ ಶ್ರೀಸಾಮಾನ್ಯರು ಅರಿವಿನ ಜಾಗೃತಿಯನ್ನು ಬೆಳೆಸಿಕೊಂಡು ವ್ಯಾಜ್ಯಗಳು ಹಾಗೂ ಗಲಾಟೆ ಗದ್ದಲಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಮನವಿ ಮಾಡಿದ ನ್ಯಾಯಾಧೀಶರು ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಚೌಕಟ್ಟಿನ ನಡುವೆಯೇ ಜೀವನ ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಹೋದರರಂತೆ ಒಂದಾಗಿ ಬದುಕು ನಡೆಸಬೇಕು ಎಂದು ಕಿವಿ ಮಾತು ಹೇಳಿದರು. ಬಡವರು ಶ್ರೀಮಂತರು ಎಂಬ ಬೇಧಭಾವವಿಲ್ಲದಂತೆ ಎಲ್ಲರೂ ಸರಿಸಮನಾಗಿ ನ್ಯಾಯವನ್ನು ಪಡೆಯಲು ಕಾನೂನಿನ ಪರಿಮಿತಿಯಲ್ಲಿಯೇ ಅವಕಾಶ ಇರುವುದರಿಂದ ಕಾನೂನನ್ನು ಗೌರವಿಸಿ ಸಮಾಜದಲ್ಲಿ ಬದುಕಬೇಕು. ಬಡವರು ಹಾಗೂ ತುಳಿತಕ್ಕೊಳಗಾದ ಜನರು ಯಾವುದೇ ಶುಲ್ಕ ಪಾವತಿಸದೇ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿ ಉಚಿತವಾಗಿ ವಕೀಲರನ್ನು ನೇಮಿಸಿಕೊಂಡು ವಾದಮಂಡಿಸಿ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಹಿರಿಯ ವಕೀಲರಾದ ಬಿ.ಸಿ.ದಿನೇಶ್ ತೃತೀಯ ಲಿಂಗಿಗಳ ಸಾಮಾಜಿಕ ಸಮಸ್ಯೆಗಳು, ಕಾನೂನು ನೆರವು ಹಾಗೂ ಹೆಚ್.ಆರ್.ರಮ್ಯಾ ಕಾನೂನು ಸೇವಾ ಪ್ರಾಧಿಕಾರ ಕುರಿತು ಮಾತನಾಡಿ ಕಾನೂನಿನ ಬಗ್ಗೆ ಅರಿವಿನ ಜಾಗೃತಿ ಮೂಡಿಸಿದರು .

ಕೃಷ್ಣರಾಜಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಪ್ರಗತಿಪರ ರೈತಮಹಿಳೆ ಲಕ್ಷ್ಮೀದೇವಮ್ಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಪೂಜಾಶೆಟ್ಟಿ, ಬಸವರಾಜಪ್ಪ ತುಳಸಪ್ಪನಾಯಕ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್.ಇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಆರ್.ಮೋಹನ್, ಜಂಟಿ ಕಾರ್ಯದರ್ಶಿ ಅನ್ವೇಶ್, ಖಜಾಂಚಿ ಬಿ.ಕೆ.ಯೋಗೇಶ್, ಪದಾಧಿಕಾರಿಗಳಾದ ಎಂ.ವಿ.ಪ್ರಭಾಕರ್, ಹೆಚ್.ವಿ.ಆಶಾ, ಮಂಜುಳಾ, ಎಸ್.ಡಿ.ಸರೋಜಮ್ಮ, ವಕೀಲರ ಸಂಘದ ಮಾಜಿಅಧ್ಯಕ್ಷ ಹೆಚ್.ರವಿ, ಎಂ.ಎಲ್.ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಹಾಗೂ ಸಾರ್ವಜನಿಕರು ಕರಪತ್ರಗಳನ್ನು ವಿತರಿಸಿ ಕಾನೂನು ಅರಿವು ಕುರಿತ ಜಾಗೃತಿ ಜಾಥಾ ನಡೆಸಿ ಜನಸಾಮಾನ್ಯರಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದರು…

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ.

error: