April 27, 2024

Bhavana Tv

Its Your Channel

ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ, ೩ ಎಲೆಕ್ಟ್ರಾನಿಕ್ ತೂಕದ ಯಂತ್ರ ವಶ

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ, ೦೩ ಎಲೆಕ್ಟ್ರಾನಿಕ್ ತೂಕದಯಂತ್ರಗಳು ವಶಕ್ಕೆ.. ಮೂವರು ವರ್ತಕರಿಗೆ ದಂಡ ವಿಧಿಸಿದ ಕಾರ್ಯದರ್ಶಿ ಸತೀಶ್..ಎಪಿಎಂಸಿ ಕಾರ್ಯದರ್ಶಿ ಸತೀಶ್ ಕಾರ್ಯಕ್ಕೆ ರೈತರ ಶ್ಲಾಘನೆ ..

ಕೆ.ಆರ್.ಪೇಟೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ರೈತರನ್ನು ವಂಚಿಸುತ್ತಿದ್ದ ಮೂವರು ವರ್ತಕರ ತೂಕದ ಎಲೆಕ್ಟ್ರಾನಿಕ್ ಯಂತ್ರಗಳನ್ನು ವಶಪಡಿಸಿಕೊಂಡಿರುವ ಕಾರ್ಯದರ್ಶಿ ಸತೀಶ್ ರೈತರಿಗೆ ಮೋಸ ಮಾಡಿ ಸಿಕ್ಕಿಬಿದ್ದಿರುವ ವರ್ತಕರಿಗೆ ದಂಡ ವಿಧಿಸಿ ವರ್ತಕರಿಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ…

ಇಂದು ಬೆಳಿಗ್ಗೆ ರೈತರಿಂದ ಅಡಿಕೆ ಖರೀದಿ ಮಾಡುತ್ತಿದ್ದ ವರ್ತಕರು ರೈತರಿಗೆ ತೂಕದಲ್ಲಿ ವಂಚನೆ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಂಡ ಕರವೇ ಪದವೀಧರ ಘಟಕದ ತಾಲ್ಲೂಕು ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನಕುಮಾರ್ ಕಾರ್ಯದರ್ಶಿ ಸತೀಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಅಕ್ರಮ ವ್ಯವಹಾರವನ್ನು ಬಯಲು ಮಾಡಿ ವರ್ತಕರೊಂದಿಗೆ ವಾಗ್ಯುದ್ಧ ನಡೆಸಿ ಎಚ್ಚರಿಕೆ ನೀಡಿದರು..

ಎಲೆಕ್ಟ್ರಾನಿಕ್ ತೂಕದ ಯಂತ್ರಗಳಲ್ಲಿ ಅಗಲವಾದ ಹಿಡಿಕೆಗಳನ್ನು ಅಳವಡಿಸಿ, ರೈತರು ಮಾರಾಟ ಮಾಡಲು ಮಾರುಕಟ್ಟೆಗೆ ತರುವ ಅಡಿಕೆ ಮತ್ತು ತೆಂಗಿನಕಾಯಿಯನ್ನು ತೂಕ ಮಾಡುವಾಗ ನಿಖರವಾಗಿ ತೂಕ ಮಾಡದೇ ತೂಕದಲ್ಲಿ ಕಡಿಮೆ ಬರುವಂತೆ ಮಾಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ದೂರು ಈ ಹಿಂದಿನಿAದಲೂ ಕೇಳಿ ಬಂದಿತ್ತು.

ಕಳೆದ ವಾರವಷ್ಟೇ ತೆಂಗಿನಕಾಯಿ ತೂಕದಲ್ಲಿ ವರ್ತಕರು ನೂರಾರು ರೈತರಿಗೆ ವಂಚನೆ ಮಾಡಿದ್ದು ಖಾತ್ರಿಯಾದ ಹಿನ್ನೆಲೆಯಲ್ಲಿ ರೈತರಿಗೆ ಮೋಸ ಮಾಡಿದ್ದ ವರ್ತಕ ಖರೀದಿ ಮಾಡಿದ್ದ ೫ ಟನ್ ತೆಂಗಿನಕಾಯನ್ನು ವಶಪಡಿಸಿಕೊಂಡು ಧರ್ಮಸ್ಥಳದ ಅಡುಗೆ ಪ್ರಸಾದಕ್ಕೆ ಉಚಿತವಾಗಿ ಕಳಿಸಿಕೊಡಲಾಗಿತ್ತು. ಇಂದು ಅಡಿಕೆ ಖರೀದಿಯಲ್ಲಿ ರೈತರು ತಂದ ಅಡಿಕೆ ಕಾಯಿಯ ಮೂಟೆಗಳನ್ನು ತೂಕದಲ್ಲಿ ಕಡಿಮೆ ಲೆಕ್ಕನೀಡಿ ಮೋಸ ಮಾಡಿದ್ದ ಮೂವರು ವರ್ತಕರಿಗೆ ದಂಢ ವಿಧಿಸಿ ಎಚ್ಚರಿಕೆ ನೀಡಿದ ಎಪಿಎಂಸಿ ಕಾರ್ಯದರ್ಶಿ ಸತೀಶ್ ರೈತರಿಗೆ ಮೋಸ ಮಾಡಿದ್ದ ಮೂವರು ವರ್ತಕರ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸಮಿತಿಯ ವತಿಯಿಂದ ವಶಪಡಿಸಿಕೊಂಡು, ದಂಢ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಯಿತು…

ಎಪಿಎಂಸಿ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ಮಾಡಿ ಸಮಿತಿಯ ವತಿಯಿಂದಲೇ ೨೫ ಬ್ರಾಂಡೆಡ್ ಕಂಪನಿಯ ಗುಣಮಟ್ಟದ ತೂಕದ ಯಂತ್ರಗಳನ್ನು ಖರೀದಿ ಮಾಡಿಸಿ ವರ್ತಕರಿಗೆ ನೀಡಿ ನಿಖರವಾಗಿ ತೂಕ ಮಾಡಿಸಿ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಸತೀಶ್ ಪತ್ರಕರ್ತರಿಗೆ ತಿಳಿಸಿದರು..

ವರ್ತಕರ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಎಪಿಎಂಸಿ ಮಾಜಿಅಧ್ಯಕ್ಷ ನಾಗರಾಜೇಗೌಡ, ನಿರ್ದೇಶಕರಾದ ಅಕ್ಕಿಹೆಬ್ಬಾಳು ನಾಗಣ್ಣ, ಕರವೇ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು..

error: