May 6, 2024

Bhavana Tv

Its Your Channel

ಕೋವಿಡ್ ೩ನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಿಸಿದ್ದ ಹೇಮಗಿರಿ ಜಾತ್ರೆ ಹಾಗೂ ರಥೋತ್ಸವಕ್ಕೆ ತಾಲ್ಲೂಕು ಆಡಳಿತ ಸಮ್ಮತಿಸಿದೆ

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಬೆಟ್ಟಕ್ಕೆ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಗಳು ಬಂದು ತಲುಪಿವೆ, ಭೃಗು ಮಹರ್ಷಿಗಳ ತಪೋಭೂಮಿಯಾಗಿರುವ ಹೇಮಗಿರಿಯ ಕಲ್ಯಾಣವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಎದುರಾಗಿದ್ದ ಆತಂಕ ದೂರವಾಗಿದೆ.
ಪುರಾಣ ಪ್ರಸಿದ್ಧವಾದ ಹೇಮಗಿರಿ ಜಾತ್ರೆಯ ರಥೋತ್ಸವ ಹಾಗೂ ತೆಪ್ಪೋತ್ಸವಕ್ಕೆ ಎದುರಾಗಿದ್ದ ಆತಂಕವನ್ನು ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಯುವಜನಸಬಲೀಕರಣ ಸಚಿವ ಡಾ.ನಾರಾಯಣಗೌಡರು ದೂರಮಾಡಿದ್ದಾರೆ.
ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಭಕ್ತರು ಹಾಗೂ ಬಂಡಿಹೊಳೆ ಸುತ್ತಮುತ್ತಲಿನ ಗ್ರಾಮಸ್ಥರ ಆಗ್ರಹಕ್ಕೆ ಮಣಿದ ತಾಲ್ಲೂಕು ಆಡಳಿತ ಜತ್ರೆಗೆ ಪರವಾನಿಗೆ ನೀಡಿದೆ
ಭೃಗು ಮಹರ್ಷಿಗಳ ತಪೋಭೂಮಿಯಾಗಿರುವ ಹೇಮಗಿರಿಯಲ್ಲಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮ ಈಗ ಭಕ್ತರಲ್ಲಿ ಮೂಡಿದೆ, ಫೆಬ್ರವರಿ ೮ ರಂದು ಬೆಳಿಗ್ಗೆ ೧೦.೩೦ಕ್ಕೆ ಬ್ರಹ್ಮರಥೋತ್ಸವ ನಡೆಯಲಿದ್ದು ಫೆಬ್ರವರಿ ೧೩ ರಂದು ರಾತ್ರಿ ೮.೩೦ಕ್ಕೆ ಬಣ್ಣ ಬಣ್ಣದ ವಿದ್ಯುದ್ಧೀಪಗಳಿಂದ ಅಲಂಕೃತವಾದ ಕೃತಕ ತೆಪ್ಪದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಫೆ.೮ ರಂದು ರಥೋತ್ಸವಕ್ಕೆ ನಾರಾಯಣಗೌಡ ದಂಪತಿಗಳು ಚಾಲನೆ ನೀಡಲಿದ್ದಾರೆ.
ರಾಸುಗಳಿಲ್ಲದೇ ಖಾಲಿ ಖಾಲಿಯಾಗಿ ಕೇವಲ ಮಿಠಾಯಿ ಅಂಗಡಿಗಳು, ಬೆಂಡು ಬತ್ತಾಸು, ಕಡ್ಲೆಪುರಿ, ಖರ್ಜೂರದ ಅಂಗಡಿಗಳು ಹಾಗೂ ಟೀ ಕ್ಯಾಂಟೀನುಗಳಿಗೆ ಮಾತ್ರ ಸೀಮಿತವಾಗಿದೆ, ರಥೋತ್ಸವಕ್ಕಾಗಿ ದೇವಾಲಯ ಹಾಗೂ ಮಂಟಪಗಳು ಸುಣ್ಣ ಬಣ್ಣದಿಂದ ಸಿಂಗಾರಗೊಳ್ಳುತ್ತಿದೆ,


ವರದಿ.ಡಾ.ಕೆ.ಆರ್.ನೀಲಕoಠ .
ಕೃಷ್ಣರಾಜಪೇಟೆ . ಮಂಡ್ಯ

error: