May 4, 2024

Bhavana Tv

Its Your Channel

ಶೀಳನೆರೆ ಗ್ರಾಮ ಪಂಚಾಯತಿ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮ ಪಂಚಾಯತಿ ಕಾರ್ಯಾಲಯದ ನೂತನ ಕಟ್ಟಡ, ಡಿಜಿಟಲ್ ಗ್ರಂಥಾಲಯ, ಗ್ರಾಮ ಒನ್ ಸೌಲಭ್ಯಗಳ ವಿತರಣಾ ಕೇಂದ್ರ ಹಾಗೂ ತ್ಯಾಜ್ಯ ಸಂಸ್ಕರಣಾ ಶೆಡ್ ಅನ್ನು ಲೋಕಾರ್ಪಣೆಗೊಳಿಸಿದ ಸಚಿವ ಡಾ.ನಾರಾಯಣಗೌಡ.
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿಸಿದ್ಧೇಶ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಕಾರ್ಯಗಳನ್ನು ಸಚಿವರು ಉದ್ಘಾಟಿಸಿದರು

ಶೀಳನೆರೆ ಗ್ರಾಮ ಪಂಚಾಯತಿಯ ಜನಪರವಾದ ಆಡಳಿತ ಹಾಗೂ ಕಾರ್ಯದಕ್ಷತೆಯನ್ನು ಮುಕ್ತಕಂಠದಿAದ ಶ್ಲಾಘಿಸಿದ ಸಚಿವ ನಾರಾಯಣಗೌಡ…

ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ಸರ್ಕಾರವು ಗ್ರಾಮಾಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿರುವ ಜನಪರವಾದ ಸರ್ಕಾರವಾಗಿದೆ. ಕಳೆದ ಉಪ ಚುನಾವಣೆಯಲ್ಲಿ ತಾಲ್ಲೂಕಿನ ಜನತೆಗೆ ಕೊಟ್ಟ ಭರವಸೆಗಳನ್ನು ಅಭಿವೃದ್ಧಿ ಕೆಲಸಗಳ ಮೂಲಕ ಈಡೇರಿಸುತ್ತಿದ್ದೇನೆ…
ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ, ರೇಷ್ಮೆ ಹಾಗೂ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ..

ನನಗೆ ಸಚಿವನೆಂಬ ಅಹಂ ಇಲ್ಲ, ಏಕೆಂದರೆ ನಾನು ಜನತೆಯ ವಿನಮ್ರ ಸೇವಕನಾಗಿದ್ದೇನೆ.. ಸಮಾಜ ಸೇವಕನಾಗಿ ಕೆಲಸ ಮಾಡುತ್ತಿದ್ದ ನಾನು ಜನಪ್ರತಿನಿಧಿಗಳ ಟೀಕೆ ಟಿಪ್ಪಣಿಗಳಿಂದ ಮನನೊಂದು ರಾಜಕಾರಣಕ್ಕೆ ಬಂದೆ.ತಾಲ್ಲೂಕಿನ ಜನತೆ ಒಂದಲ್ಲಾ ಎರಡಲ್ಲಾ ಸತತವಾಗಿ ಮೂರು ಅವಧಿಗೆ ಶಾಸಕನನ್ನಾಗಿ ಆಯ್ಕೆ ಮಾಡಿ ನನ್ನ ಜೀವನದಲ್ಲಿಯೇ ಮರೆಯಲಾಗದ ಉಡುಗೊರೆ ನೀಡಿದ್ದಾರೆ..

ಬರಪೀಡಿತ ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ಕೆರೆ ಕಟ್ಟೆಗಳನ್ನು ಹೇಮಾವತಿ ನದಿಯ ನೀರಿನಿಂದ ತುಂಬಿಸುವ 265 ಕೋಟಿ ರೂಪಾಯಿಗಳ ವೆಚ್ಚದ ಕಟ್ಟಹಳ್ಳಿ ಏತನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ.ನನ್ನ ವಿರುದ್ಧ ಟೀಕೆ ಮಾಡುವ ಟೀಕಾಕಾರರಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತೇನೆ.. ಎಸ್.ಎಂ.ಲಿAಗಪ್ಪ ಅವರಂತಹ ಹಿರಿಯ ಸಹಕಾರಿ ಬಂಧುಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ಶೀಳನೆರೆಯ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ…ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬರಲು ನಮ್ಮ 17 ಶಾಸಕರ ಕೊಡುಗೆಯು ಅಪಾರವಾಗಿದೆ..ಸಚಿವ ನಾರಾಯಣಗೌಡ ಅಭಿಮತ…

ಕಾರ್ಯಕ್ರಮದಲ್ಲಿ ಮೂಡಾ ಮಾಜಿಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಭರತ್, ಗ್ರಾ.ಪಂ ಅಧ್ಯಕ್ಷೆ ಗಾಯತ್ರಿಸಿದ್ಧೇಶ್, ಉಪಾಧ್ಯಕ್ಷ ದಿಲೀಪ್, ಸದಸ್ಯರಾದ ಯುವರಾಜ್, ಎಸ್.ಕೆ.ಪ್ರಕಾಶ್, ಎಸ್.ಪಿ.ಸಿದ್ದೇಶ್, ಸೌಂದರ್ಯ, ಲಕ್ಷ್ಮೀ, ಮಂಜುಳಾ, ಇಓ ಚಂದ್ರಶೇಖರ್, ಪಿಡಿಓ ಟಿ.ನಾಗರತ್ನ, ಜಿಪಂ ಎಂಜಿನಿಯರಿAಗ್ ಉಪವಿಭಾಗದ ಎಇಇ ಲಕ್ಷ್ಮೀಕಾಂತ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: