May 4, 2024

Bhavana Tv

Its Your Channel

ಪುರಾಣ ಪ್ರಸಿದ್ಧವಾದ ಶ್ರೀ ಆಂಜನೇಯಸ್ವಾಮಿಯ ವೈಭವದ ಬ್ರಹ್ಮರಥೋತ್ಸವ, ಮುಗಿಲು ಮುಟ್ಟಿದ ಸಂಭ್ರಮ

ಕೃಷ್ಣರಾಜಪೇಟೆ ತಾಲ್ಲೂಕಿನ ಸಾಂಸ್ಕೃತಿಕ ಗ್ರಾಮವಾಗಿರುವ ಮಡವಿನಕೋಡಿಯಲ್ಲಿ ಗ್ರಾಮರಕ್ಷಕ ಶ್ರೀ ಆಂಜನೇಯಸ್ವಾಮಿಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿoದ ಅದ್ದೂರಿಯಾಗಿ ನಡೆಯಿತು ..

ಮಡವಿನಕೋಡಿ ಗ್ರಾಮದ ಮುಖಂಡ ಎಂ.ಬಿ.ಹರೀಶ್, ಸಮಾಜಸೇವಕ ವಿಜಯ್ ರಾಮೇಗೌಡ ಶ್ರೀ ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು..

ಆಂಜನೇಯಸ್ವಾಮಿ ದೇವಾಲಯದ ಮೈದಾನದಿಂದ ಆರಂಭವಾದ ಶ್ರೀ ರಥದ ಮೆರವಣಿಗೆಯು ಗ್ರಾಮದ ಮುಖ್ಯರಸ್ತೆಯಲ್ಲಿ ಸಾಗಿ ಗ್ರಾಮದ ಮಧ್ಯದ ನಿಗಧಿತ ತಿರುವು ರಸ್ತೆಯಲ್ಲಿ ಬಂದು ನಿಂತಿತು..
ಜಾನಪದ ಕಲಾತಂಡಗಳ ವೈಭವವು ರಥೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿತ್ತು..

ಸಮಾಜಸೇವಕ ಮಿತ್ರಪೌಂಡೇಶನ್ ವ್ಯವಸ್ಥಾಪಕರಾದ ವಿಜಯ್ ರಾಮೇಗೌಡ ಮಾತನಾಡಿ ಹಬ್ಬ ಹರಿದಿನಗಳು ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಜಾತ್ರೆ ರಥೋತ್ಸವದ ಹೆಸರಿನಲ್ಲಿ ಎಲ್ಲಾ ವರ್ಗಗಳ ಜನರು ಒಂದಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಭಾಗವಹಿಸಿದಾಗ ಪರಸ್ಪರ ಪ್ರೀತಿವಿಶ್ವಾಸ ವೃದ್ಧಿಸಿ ಸಹಬಾಳ್ವೆ ಹಾಗೂ ಅನ್ಯೋನ್ಯತೆಗೆ ಸಹಕಾರಿಯಾಗುತ್ತದೆ ಎಂದರು..
ಗ್ರಾಮದ ಮುಖಂಡರಾದ ಪ್ರವೀಣ್, ಗಂಗಾಧರ, ದೇವರಾಜು ಮತ್ತಿತರರು ರಥೋತ್ಸವದ ನೇತೃತ್ವ ವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: