April 28, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಬಡ ಕುಟುಂಬಗಳಿಗೆ ಮಾರ್ಚ 22ರಿಂದ ಉಚಿತವಾಗಿ ಆರೋಗ್ಯ ರಕ್ಷಾ ಕರ್ನಾಟಕ ಹೆಲ್ತ್ ಕಾರ್ಡ್ ಗಳ ವಿತರಣೆ

ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಬಡ ಕುಟುಂಬಗಳಿಗೆ ಮಾರ್ಚ 22ರಿಂದ ಉಚಿತವಾಗಿ ಆರೋಗ್ಯ ರಕ್ಷಾ ಕರ್ನಾಟಕ ಹೆಲ್ತ್ ಕಾರ್ಡ್ ಗಳ ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷೆ ಮಹಾದೇವಿ ನಂಜುAಡ ಪ್ರಕಟಣೆ ತಿಳಿಸಿದ್ದಾರೆ.

ಕೆ.ಆರ್.ಪೇಟೆ ಪುರಸಭೆಯ ವ್ಯಾಪ್ತಿಯಲ್ಲಿನ ಕುಟುಂಬಗಳಿಗೆ ಮಾರ್ಚಿ 22ರ ಮಂಗಳವಾರದಿAದ ಕರ್ನಾಟಕ ಆರೋಗ್ಯ ರಕ್ಷಾ ಕಾರ್ಡ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನಸಾಮಾನ್ಯರು ಆರೋಗ್ಯರಕ್ಷಾ ಕರ್ನಾಟಕ ಯೋಜನೆಯ ಕಾರ್ಡುಗಳನ್ನು ಮಾಡಿಸಿಕೊಂಡು ಆರೋಗ್ಯ ಸಂವರ್ಧನೆಗೆ ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು ..

ಅವರು ಪುರಸಭೆಯ ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಸದಸ್ಯರೊಂದಿಗೆ ಸಂವಾದ ನಡೆಸಿ ಮಾತನಾಡಿದರು..

ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯ 17 ವಾರ್ಡುಗಳು ಹಾಗೂ ಹೊಸಹೊಳಲು ಭಾಗದ 06 ವಾರ್ಡುಗಳಲ್ಲಿರುವ ಅಂಗನವಾಡಿ ಕಟ್ಟಡಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಆರೋಗ್ಯ ರಕ್ಷಾ ಕಾರ್ಡುಗಳನ್ನು ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ವಾರ್ಡಿನ ಸದಸ್ಯರ ಸಹಕಾರದಿಂದ ಶೇ.100ಕ್ಕೆ 100ರಷ್ಟು ಪ್ರಮಾಣದಲ್ಲಿ ಕುಟುಂಬಗಳಿಗೆ ಆರೋಗ್ಯ ರಕ್ಷಾ ಕರ್ನಾಟಕ ಯೋಜನೆಯ ಹೆಲ್ತ್ ಕಾರ್ಡುಗಳನ್ನು ಮಾಡಿಸಿಕೊಡಲು ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲರೂ ಕೈಜೋಡಿಸಿ ಸಹಕಾರ ನೀಡುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಾದೇವಿ ಮನವಿ ಮಾಡಿದರು.

ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ರವಿಕುಮಾರ್ ಮಾತನಾಡಿ ಕೆ.ಆರ್.ಪೇಟೆ ತಾಲ್ಲೂಕಿನ 6 ಹೋಬಳಿಗಳ ಪೈಕಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಡುಗಳನ್ನು ತಯಾರಿಸಿ ಉಚಿತವಾಗಿ ವಿತರಿಸಲಾಗುತ್ತಿದೆ. ಪಟ್ಟಣದ ವ್ಯಾಪ್ತಿಯಲ್ಲಿಯೂ ಕನಿಷ್ಠ 25 ಸಾವಿರ ಕುಟುಂಬಗಳಿಗೆ ಆರೋಗ್ಯ ರಕ್ಷಾ ಕಾರ್ಡುಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ರವಿಕುಮಾರ್ ತಿಳಿಸಿದರು..

ತಹಶೀಲ್ದಾರ್ ಎಂ.ವಿ.ರೂಪ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ 05 ಲಕ್ಷರೂಗಳವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷ ರೂಗಳವರೆಗೆ ಉಚಿತವಾಗಿ ನಾಡಿನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುವುದರಿಂದ ಶ್ರೀ ಸಾಮಾನ್ಯರು ಹೆಲ್ತ್ ಕಾರ್ಡುಗಳನ್ನು ಕಡ್ಡಾಯವಾಗಿ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಗಾಯತ್ರಿಸುಬ್ಬಣ್ಣ, ಮುಖ್ಯಾಧಿಕಾರಿ ಕುಮಾರ್, ಸದಸ್ಯರಾದ ಲೋಕೇಶ್, ಪ್ರೇಮಕುಮಾರ್, ರವೀಂದ್ರಬಾಬು, ಗಿರೀಶ್, ಪ್ರವೀಣ್, ಪ್ರಮೋದ್, ಡಾ.ರಾಜೇಶ್, ಕೆ.ಆರ್.ನೀಲಕಂಠ, ಯಶಸ್ವಿನಿಮಂಜುನಾಥ್, ಇಂದ್ರಾಣಿ, ಉಮೇಶ್, ಹಾಫಿಜುಲ್ಲಾಷರೀಫ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: