May 4, 2024

Bhavana Tv

Its Your Channel

ಬಂಡಿಹೊಳೆ ಗ್ರಾಮದಲ್ಲಿ ತಹಶೀಲ್ದಾರ್ ರೂಪ ಗ್ರಾಮ ವಾಸ್ತವ್ಯ

ಕೃಷ್ಣರಾಜಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ತಹಶೀಲ್ದಾರ್ ರೂಪ ಗ್ರಾಮವಾಸ್ತವ್ಯ.. ಯಶಸ್ವಿಯಾಗಿ ನಡೆದ ಸರ್ಕಾರದ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ..

ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಸರ್ಕಾರದ ನಡೆ ಗ್ರಾಮಗಳ ಕಡೆಗೆ ಕಾರ್ಯಕ್ರಮ ಹಾಗೂ ತಹಶೀಲ್ದಾರ್ ರೂಪ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು …

ರಾಜ್ಯ ಸರ್ಕಾರದ ನಿರ್ದೇಶನದಂತೆ ಸರ್ಕಾರದ ವಿವಿಧ ಯೋಜನೆಗಳ ಫಲವನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ತೆರಳಿ ತಲುಪಿಸಲಾಗುತ್ತಿದೆ. ಗ್ರಾಮ ವಾಸ್ತವ್ಯ ಮಾಡಿ ಜನಸಾಮಾನ್ಯರ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡಿ ಸ್ಥಳದಲ್ಲೇ ಪರಿಹಾರವನ್ನು ದೊರಕಿಸಿಕೊಡಲಾಗುತ್ತಿದೆ ಎಂದು ತಿಳಿಸಿದ ತಹಶೀಲ್ದಾರ್ ರೂಪ ಶ್ರೀಸಾಮಾನ್ಯರು ಹಾಗೂ ರೈತ ಬಂಧುಗಳು ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಮ್ಮ ಕಛೇರಿಗೆ ನೇರವಾಗಿ ಆಗಮಿಸಿ ಮನವಿ ಸಲ್ಲಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊAಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಕಿವಿ ಮಾತು ಹೇಳಿದ ರೂಪ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಸಚಿವರಾದ ಡಾ.ನಾರಾಯಣಗೌಡರ ಆಶಯದಂತೆ ಜನಪರವಾಗಿ ಬದ್ಧತೆಯಿಂದ ತಾಲ್ಲೂಕು ಆಡಳಿತವು ಕೆಲಸ ಮಾಡುತ್ತಿದೆ. ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡದ ಅಧಿಕಾರಿಗಖ ಬಗ್ಗೆ ಹಾಗೂ ಲಂಚದ ಹಣಕ್ಕೆ ಒತ್ತಾಯಿಸುವವರ ಬಗ್ಗೆ ತಮಗೆ ದೂರು ನೀಡಬೇಕು ಎಂದು ರೂಪ ಮನವಿ ಮಾಡಿದರು..

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ತಹಶೀಲ್ದಾರ್ ರೂಪ ಅವರ ನೇತೃತ್ವದಲ್ಲಿ ಐವರು ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡಿ ಸನ್ಮಾನಿಸಿ ಗೌರವಿಸಲಾಯಿತು..

ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್ ಮಾತನಾಡಿ ಪುರಾಣ ಪ್ರಸಿದ್ಧವಾದ ಭೃಗು ಮಹರ್ಷಿಗಳ ತಪೋಭೂಮಿಯಾದ ಹೇಮಗಿರಿ ಬೆಟ್ಟ ಹಾಗೂ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಕ್ಷೇತ್ರವು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದೆ. ಶಿಥಿಲವಾಗಿರುವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಕಲ್ಯಾಣ ಮಂಟಪವನ್ನು ಕೆಡವಿ ಹೊಸದಾಗಿ ಸಮುದಾಯ ಭವನವನ್ನು ನಿರ್ಮಿಸಬೇಕು. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ತಾಲ್ಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆಯು ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು .

ಚೆಸ್ಕಾಂನ ಕೃಷ್ಣರಾಜಪೇಟೆ ತಾಲ್ಲೂಕಿನ ವಿಭಾಗ ಕಛೇರಿಯ ಕಾರ್ಯಪಾಲಕ ಎಂಜಿನಿಯರ್ ಪ್ರತಿಭಾ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಸಿಡಿಪಿಓ ಅರುಣಕುಮಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಪರಶಿವನಾಯಕ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷೆ ಜಯಮ್ಮ, ಪಿಡಿಓ ಬಿ.ಪಿ.ಚಂದ್ರು, ಕಾರ್ಯದರ್ಶಿ ಸಿ.ಪಿ.ಕೃಷ್ಣ, ಸದಸ್ಯರಾದ ದರ್ಶನ್, ಮೋಹನ್, ಲೀಲಾವತಿ, ರಾಮಯ್ಯ, ಹೇಮಂತಕುಮಾರ್, ಪುಷ್ಪ, ಗೀತಾಮಣಿ ಮತ್ತು ನೂರಾರು ಗ್ರಾಮಸ್ಥರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಸಬಾ ಹೋಬಳಿಯ ರಾಜಶ್ವನಿರೀಕ್ಷಕಿ ಬಿ.ಎಲ್. ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಪೂಜಾ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: