May 4, 2024

Bhavana Tv

Its Your Channel

ಜೆಡಿಎಸ್ ಯುವ ಆಲೇನಹಳ್ಳಿ ಕಿಶೋರ್ ರೈತಸಂಘಕ್ಕೆ ಸೇರ್ಪಡೆ

ಕೃಷ್ಣರಾಜಪೇಟೆ ಜೆಡಿಎಸ್ ಯುವ ಆಲೇನಹಳ್ಳಿ ಕಿಶೋರ್ ರೈತಸಂಘಕ್ಕೆ ಸೇರ್ಪಡೆ..ಹಸಿರುಶಾಲು ಹೊದಿಸಿ ರೈತರ ಸ್ವಾಭಿಮಾನದ ಚಳವಳಿಗೆ ಸ್ವಾಗತಿಸಿದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಮಂದಗೆರೆ ಕೆ.ಆರ್.ಜಯರಾಂ ..

ಕಳೆದ 40 ವರ್ಷಗಳಿಂದ ನೊಂದ ಜನರ ಧ್ವನಿಯಾಗಿ, ರೈತರ ಆತ್ಮಾಭಿಮಾನವನ್ನು ಎತ್ತಿಹಿಡಿದು ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಾ ರೈತರ ಉಸಿರಾಗಿ ಕೆಲಸ ಮಾಡುತ್ತಿರುವ ರೈತ ಸಂಘದ ಹೋರಾಟವು ರಾಜ್ಯದಾದ್ಯಂತ ಸಂಚಲನವನ್ನು ಉಂಟು ಮಾಡಿದೆ ಎಂದು ತಿಳಿಸಿದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಮಂದಗೆರೆ ಜಯರಾಂ ಕೆ.ಆರ್.ಪೇಟೆ ತಾಲ್ಲೂಕಿನ ರೈತರ ಹೋರಾಟವು ಜಿಲ್ಲೆಯ ಎಲ್ಲಾ ಏಳೂ ತಾಲ್ಲೂಕಿನ ಜನತೆಗೆ ಸ್ಪೂರ್ತಿಯ ಚಿಲುಮೆಯಾಗಿದೆ. ಭ್ರಷ್ಠ ಅಧಿಕಾರಿಗಳಿಗೆ ರೈತರ ಹೋರಾಟವು ನಡುಕ ಉಂಟುಮಾಡಿದೆ. ಅನ್ಯಾಯ, ಅಕ್ರಮಗಳು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದಾಗಿ ಎಷ್ಟೇ ವಿರೋಧಗಳು ವ್ಯಕ್ತವಾದರೂ ರೈತ ಸಂಘ ಹಾಗೂ ಕಾರ್ಯಕರ್ತರು ಜಗ್ಗದೇ, ಕುಗ್ಗದೆ ಜನಪರವಾಗಿ ಕೆಲಸ ಮಾಡುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ ಜಯರಾಂ ಇಂದು ಯುವಮುಂದಾಳು ಆಲೇನಹಳ್ಳಿ ಕಿಶೋರ್ ಹಾಗೂ ಹಿರಿಯರಾದ ಹಂಗರಮುದ್ದನಹಳ್ಳಿ ಶಿವಣ್ಣ ಅವರು ರೈತ ಸಂಘಕ್ಕೆ ಸೇರ್ಪಡೆಗೊಂಡು ತಮ್ಮ ಹೆಗಲಮೇಲೆ ಹಸಿರುಶಾಲನ್ನು ಹಾಕಿಕೊಂಡಿದ್ದಾರೆ. ಸಮಾಜದಲ್ಲಿ ನಿರಂತರವಾಗಿ ರೈತರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ರೈತಸಂಘವು ನಡೆಸುತ್ತಿರುವ ಸ್ವಾಭಿಮಾನಿ ಹೋರಾಟವನ್ನು ಮೆಚ್ಚಿ ರೈತಸಂಘವನ್ನು ಸೇರಿರುವುದಾಗಿ ಕಿಶೋರ್ ಮತ್ತು ಶಿವಣ್ಣ ತಿಳಿಸಿದರು.

ಅಗಲಿದ ರೈತ ನಾಯಕ ಹನಕೆರೆ ಕಾಡಪ್ಪ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿದ ರೈತರು …

ಮಂಡ್ಯ ಜಿಲ್ಲೆಯಲ್ಲಿ ರೈತರ ಹೋರಾಟಕ್ಕೆ ಧೀಶಕ್ತಿಯಾಗಿದ್ದ ಹಿರಿಯ ರೈತ ಮುಖಂಡ ಹನಕೆರೆ ಕಾಡಪ್ಪ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.. ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಿ, ಮೃತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಸಭೆಯಲ್ಲಿ ರೈತಸಂಘದ ಹಿರಿಯ ಮುಖಂಡರಾದ ಮರುವನಹಳ್ಳಿ ಶಂಕರ್, ತಾಲ್ಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೌಡೇನಹಳ್ಳಿ ಲತಾಕೇಶವ, ರೈತಸಂಘದ ಪದಾಧಿಕಾರಿಗಳಾದ ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ನಾರಾಯಣಸ್ವಾಮಿ, ನಗರೂರು ಕುಮಾರ್, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ಲಕ್ಷ್ಮೀಪುರ ಜಗಧೀಶ್, ರಾಚಪ್ಪಗೌಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: