May 4, 2024

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ಎಂ.ಎಂ.ಎಸ್ ರೆಸಿಡೆನ್ಸಿ ಮತ್ತು ಕೆ.ಜಿ.ಎಫ್ ರೆಸ್ಟೋರೆಂಟ್ ಆರಂಭ..ಸಚಿವ ನಾರಾಯಣಗೌಡ ಅವರಿಂದ ನೂತನ ಉದ್ಯಮ ಲೋಕಾರ್ಪಣೆ ..

ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ಹಾಲು ಶೀಥಲೀಕರಣ ಕೇಂದ್ರದ ಪಕ್ಕದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಜನರು ಒಗ್ಗೂಡಿ ಆರಂಭಿಸಿದ ಎಂ.ಎA.ಎಸ್ ರೆಸಿಡೆನ್ಸಿ ಹಾಗೂ ಕೆಜಿಎಫ್ ರೆಸ್ಟೋರೆಂಟ್ ಅನ್ನು ಯುವಜನ ಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಉದ್ಘಾಟನೆ ಮಾಡಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು…

ಯುವಜನರು ಸರ್ಕಾರಿ ಉದ್ಯೋಗಕ್ಕಾಗಿ ಕಾದು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡಿಕೊಳ್ಳದೇ ತಮ್ಮಲ್ಲಿನ ವೃತ್ತಿ ಕೌಶಲ್ಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಂತ ಉದ್ದಿಮೆಯನ್ನು ಆರಂಬಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಕೃಷ್ಣರಾಜಪೇಟೆ ಪಟ್ಟಣವು ಇಂದು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಹೊಸಹೊಳಲು ಹೊಯ್ಸಳ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಸೇರಿದಂತೆ ಭೂವರಹನಾಥಸ್ವಾಮಿ ದೇವಾಲಯವು ನಮ್ಮ ತಾಲೂಕಿನಲ್ಲಿರುವುದರಿಂದ ಪ್ರವಾಸೋದ್ಯಮ ಸೇರಿದಂತೆ ಇತರೆ ವ್ಯಾಪಾರ ವ್ಯವಹಾರಗಳ ಉನ್ನತಿಗೆ ಹೆಚ್ಚಿನ ಅವಕಾಶವಿದೆ. ಆದ್ದರಿಂದ ಯುವಜನರು ಸೋಮಾರಿಗಳಾಗಿ ಕಾಲಹರಣ ಮಾಡದೇ ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು..

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಪುರಸಭೆಯ ಸದಸ್ಯರಾದ ಹೆಚ್.ಆರ್.ಲೋಕೇಶ್, ಶೋಭಾದಿನೇಶ್, ಶುಭಾಗಿರೀಶ್, ಮುಂಬೈನ ಜಯಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಂಗಪ್ಪ, ಗೂಳಿಹೊನ್ನೇನಹಳ್ಳಿಯ ಶಶಿಕುಮಾರ್, ಹಿರಿಕಳಲೆಯ ಹೆಚ್.ಕೆ.ಮಂಜೇಗೌಡ, ಉಂಗ್ರಿಗೆರೆಯ ಮಂಜುನಾಥ್ ರಾಜೇಗೌಡ ಸೇರಿದಂತೆ ಸ್ನೇಹಿತರು ಹಾಗೂ ಬಂಧುಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: