May 3, 2024

Bhavana Tv

Its Your Channel

ಹೊಸಹೊಳಲು ಚಿಕ್ಕಕೆರೆಯ ಸಮಗ್ರವಾದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ

ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಚಿಕ್ಕಕೆರೆಯ ಅಭಿವೃದ್ಧಿ ಕಾಮಗಾರಿಯು ಆರಂಭವಾಗಿದ್ದು 05ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆರೆಯು ಜೀರ್ಣೋದ್ಧಾರಗೊಳ್ಳಲಿದ್ದು ಹೊಸಹೊಳಲಿನ ಹೊಯ್ಸಳ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ .

ಹೊಸಹೊಳಲು ಚಿಕ್ಕಕೆರೆಯು ಹೇಮಾವತಿ ಜಲಾಶಯ ಯೋಜನೆಯ ಜಲಾನಯನ ಪ್ರದೇಶದ ವ್ಯಾಪ್ತಿಗೆ ಸೇರಲಿದ್ದು ಹೇಮಾವತಿ ಎಡದಂಡ ನಾಲಾ ಕಾಲುವೆಯು ನೀರು ಹಾಗೂ ನಾಲೆಯ ಜೌಗು ನೀರು ಕೆರೆಗೆ ಸರಾಗವಾಗಿ ಹರಿದು ಬರುವುದರಿಂದ ವರ್ಷವಿಡೀ ಕೆರೆಯು ತುಂಬಿದAತಿದ್ದು ಜಲರಾಶಿಯ ಸೊಬಗು ಕಾಣುವುದು ಈ ಕೆರೆಯ ವೈಶಿಷ್ಟ್ಯವಾಗಿದೆ.

ಕೆರೆಯ ಹೂಳು ಹಾಗೂ ಗೋಡು ಮಣ್ಣನ್ನು ತೆಗೆದು, ಗಿಡಗೆಂಟೆಗಳು, ಮುಳ್ಳಿನ ಪೊದೆಗಳು ಸೇರಿದಂತೆ ಕೆರೆಯ ಅಂಗಳವನ್ನು ಒತ್ತುವರಿ ಮಾಡಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಪ್ರಭಾವಿಗಳಿಂದ ಒತ್ತುವರಿಯನ್ನು ತೆರವುಗೊಳಿಸಿ ಕಾಮಗಾರಿಗೆ ಚಾಲನೆ ನೀಡಬೇಕಾಗಿರುವುದರಿಂದ 28 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯ ಕೋಡಿಯನ್ನು ಒಡೆದು ಕೆರೆಯಲ್ಲಿ ಸಂಗ್ರಹವಿದ್ದ ನೀರನ್ನು ಹೊರಗೆ ಕಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆರೆಯ ಸುತ್ತಲೂ ಜಾಗಿಂಗ್ ಟ್ರಾಕ್ ನಿರ್ಮಾಣ, ಕೆರೆಯ ಮಧ್ಯದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿ ಗಿಡಮರಗಳನ್ನು ನೆಟ್ಟು ಹಸುರೀಕರಣಕ್ಕೆ ಚಾಲನೆ ನೀಡುವುದು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಬೋಟಿಂಗ್ ಸೌಲಭ್ಯವನ್ನು ಒದಗಿಸಿಕೊಡಲು ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಜನ ಸಬಲೀಕರಣ ಕ್ರೀಡೆ ಮತ್ತು ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರು ಚಿಕ್ಕ ಕೆರೆಯ ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವುದು ಫಲಪ್ರದವಾಗಿದ್ದು ಸಧ್ಯದಲ್ಲಿಯೇ ಜಲಸಾಹಸ ಕ್ರೀಡೆಗಳ ಬಗ್ಗೆ ಯುವಜನರಿಗೆ ತರಬೇತಿ ನೀಡಲು ತರಬೇತುದಾರರ ತಂಡವು ಆಗಮಿಸುತ್ತಿದ್ದು ಯುವಜನರಿಗೆ ಜಲಸಾಹಸ ಕ್ರೀಡೆಗಳ ಪರಿಚಯ ಮಾಡಿಕೊಡಲಿದ್ದಾರೆ ಎಂದು ವಿವರಿಸಿದ ಹೇಮಾವತಿ ಜಲಾಶಯ ಯೋಜನೆಯ ನಂ.20 ಉಪವಿಭಾಗ ಕಛೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಸ್ವಾಮಿ ಹೊಸಹೊಳಲು ಚಿಕ್ಕಕೆರೆಯನ್ನು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಾಗೂ ಕೃಷ್ಣರಾಜಪೇಟೆ ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯನ್ನು 10ಕೋಟಿ ರೂಗಳ ವೆಚ್ಚದಲ್ಲಿ ಹೂಳು ತೆಗೆಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು..

ಕೆ.ಆರ್.ಪೇಟೆ ಪುರಸಭೆ ಸದಸ್ಯ ಹಾಗೂ ಜನಪರ ಹೋರಾಟಗಾರರಾದ ಕೆ.ಆರ್.ನೀಲಕಂಠ ಮಾತನಾಡಿ ಕೆರೆ ಕಟ್ಟೆಗಳ ಒತ್ತುವರಿಯನ್ನು ತೆರವು ಮಾಡಿಸಿ ಹೂಳು ಮತ್ತು ಜೇಡಿಮಣ್ಣು ತುಂಬಿಕೊAಡು ಮುಚ್ಚಿಹೋಗುತ್ತಿರುವ ಕೆರೆಗಳನ್ನು ಹೂಳು ತೆಗೆಸಿ ಅಭಿವೃದ್ಧಿಪಡಿಸುವ ಸಲುವಾಗಿ ಪಡಿಸುತ್ತಿರುವುದರಿಂದ ಅಂತರ್ಜಲದ ಮರುಪೂರಣವಾಗುವುದಲ್ಲದೇ ನೀರಿಲ್ಲದೇ ಒಣಗುತ್ತಿರುವ ಕೊಳೆವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟವು ಹೆಚ್ಚಾಗಿ ರೈತಬಂಧುಗಳ ಕೊಳವೆ ಬಾವಿಗಳು ಗ್ಯಾಪ್ ಹೊಡೆಯದೇ ನಿರಂತರವಾಗಿ ನೀರೆತ್ತುವ ಮೂಲಕ ಒಣಗುತ್ತಿರುವ ಬೆಳೆಗಳನ್ನು ಕಾಪಾಡಲಿವೆ. ಸಚಿವ ಡಾ.ನಾರಾಯಣಗೌಡರ ದೂರದೃಷ್ಠಿಯ ಫಲವಾಗಿ ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ನಿರ್ಧಾರ ಮಾಡಿ ಕೆರೆಗಳ ಅಭಿವೃದ್ಧಿಗಾಗಿ ವಿಶೇಷವಾಗಿ ಅನುದಾನವನ್ನು ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಆರಂಬಿಸಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ ಎಂದು ನೀಲಕಂಠ ತಿಳಿಸಿದರು.

ಕೆರೆಗಳ ಹೂಳು ತೆಗೆಸಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವಂತೆ ಮಾಡಿಸಿ, ಬೋಟಿಂಗ್ ಸೌಲಭ್ಯ ಸೇರಿದಂತೆ ಕೆರೆಯ ಸುತ್ತಲೂ ಜಾಗಿಂಗ್ ಮತ್ತು ವಾಕಿಂಗ್ ಟ್ರ‍್ಯಾಕ್ ನಿರ್ಮಿಸುತ್ತಿರುವುದರಿಂದ ಪಟ್ಟಣದ ನಿವಾಸಿಗಳು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಕಿಂಗ್ ಮಾಡಲು ಸಹಾಯವಾಗಲಿದೆ. ಆದ್ದರಿಂದ ಆದಷ್ಟು ಜಾಗ್ರತೆ ಕಾಮಗಾರಿಯನ್ನು ಆರಂಬಿಸಿ, ಜಲಚರಗಳು, ಪಶು, ಪಕ್ಷಿ ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಿದಂತಾಗುತ್ತದೆ ಎಂದು ತಿಳಿಸಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಕೆರೆ ಅಭಿವೃದ್ಧಿ ಕೆಲಸವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ. ಐತಿಹಾಸಿಕ ಗ್ರಾಮವಾದ ಹೊಸಹೊಳಲು ಗ್ರಾಮದ ಅಂದವನ್ನು ಹೆಚ್ಚಿಸಿ ಪ್ರವಾಸಿಗರನ್ನು ಆಕರ್ಷಿಸಲು ಕೆರೆ ಅಭಿವೃದ್ಧಿ ಕಾಮಗಾರಿಯು ವರದಾನವಾಗಿದೆ ಎಂದು ಅಶೋಕ್ ಹೇಳಿದರು..

ಹೊಸಹೊಳಲು ಗ್ರಾಮಕ್ಕೆ ಪ್ರವೇಶ ನೀಡುವ ಮುಖ್ಯರಸ್ತೆಯ ಪಕ್ಕದಲ್ಲಿಯೇ ಈ ಚಿಕ್ಕಕೆರೆಯು ಇರುವುದರಿಂದ ಗ್ರಾಮದ ಜನರು ಬಹಿರ್ದೆಷೆಗೆ ಹಾಗೂ ಶೌಚಕ್ಕೆ ಹೋಗಲು ಕೆರೆಯ ಏರಿ ಹಾಗೂ ಪಕ್ಕದ ರಸ್ತೆಯನ್ನು ಬಳಸುತ್ತಿರುವುದರಿಂದ ಕೆರೆ ಅಭಿವೃದ್ಧಿ ಕಾಮಗಾರಿಯು ಗ್ರಾಮದ ಪ್ರವಾಸೋದ್ಯಮಕ್ಕೆ ಇರುವ ಅಡ್ಡಿ ಆತಂಕಗಳನ್ನು ದೂರಮಾಡಲಿದೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: