May 4, 2024

Bhavana Tv

Its Your Channel

ಜೇನುನೊಣಗಳು ಕಡಿದು ಅಕಾಲಿಕವಾಗಿ ಮೃತರಾದ ಬ್ರಹ್ಮರಾಜು ಕುಟುಂಬಕ್ಕೆ ರಾಜ್ಯ ಸಂಘದ ವತಿಯಿಂದ ಪರಿಹಾರ ವಿತರಣೆ

ಕೆ.ಆರ್.ಪೇಟೆ :- ಜೇನು ನೊಣಗಳು ಕಡಿದು ಅಕಾಲಿಕವಾಗಿ ಸಾವಿಗೆ ಶರಣಾದ ಕೆ.ಆರ್.ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಭಾಗದ ಗ್ರಾಮ ಸಹಾಯಕ ಬ್ರಹ್ಮರಾಜು ಕುಟುಂಬಕ್ಕೆ ೨೫ ಲಕ್ಷರೂ ಪರಿಹಾರ ನೀಡಿ ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ದೇವರಾಜು ಹಾಗೂ ಜಿಲ್ಲಾಧ್ಯಕ್ಷ ರಾಜು ಆಗ್ರಹ ..

ಬ್ರಹ್ಮರಾಜು ಅಕಾಲಿಕ ಸಾವಿಗೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವೇ ಕಾರಣ ಗ್ರಾಮ ಸಹಾಯಕರ ಸಂಘದ ಗಂಭೀರ ಆರೋಪ…

ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸ್ವಚ್ಛತಾ ಕಾರ್ಯಕ್ಕೆ ಗ್ರಾಮ ಸಹಾಯಕರನ್ನು ನೇಮಿಸಿ ಆದೇಶ ಹೊರಡಿಸಿದ್ದ ತಹಶೀಲ್ದಾರ್ ಅವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಮಿನಿ ವಿಧಾನಸೌಧದ ಆವರಣದಲ್ಲಿದ್ದ ಹೆಜ್ಜೆನು ಗೂಡುಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಬ್ರಹ್ಮರಾಜು ಸೇರಿದಂತೆ ಇತರೆ ಏಳೆಂಟು ಜನರು ಗ್ರಾಮ ಸಹಾಯಕರ ಮೇಲೆ ದಾಳಿ ಮಾಡಿದ್ದ ಹೆಜ್ಜೇನುಗಳು ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದ್ದವು. ಗ್ರಾಮ ಸಹಾಯಕರನ್ನು ರಾತ್ರಿ ಪಾಳಿಯಲ್ಲಿ ಮಿನಿ ವಿಧಾನಸೌಧದ ಕಾವಲು ಕಾಯುವುದು, ಗೇಟ್ ಕೀಪರ್ ಕೆಲಸ ಮಾಡಿಸುವುದು ಸೇರಿದಂತೆ ಕಾನೂನು ಬಾಹಿರವಾದ ಸೇವಾ ಕೆಲಸಗಳಿಗೆ ಬಳಸಿಕೊಂಡು ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಿ ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದ ಗ್ರಾಮ ಸಹಾಯಕರ ಸಂಘದ ರಾಜ್ಯ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಮನವಿ ನೀಡಿದ್ದೇವೆ. ಜೀವನಾಧಾರವಾಗಿದ್ದ ಕುಟುಂಬದ ಮುಖ್ಯಸ್ಥ ಗ್ರಾಮಸಹಾಯಕ ಬ್ರಹ್ಮರಾಜು ಅವರ ಪತ್ನಿ ವರಲಕ್ಷ್ಮಿ ಸೇರಿದಂತೆ ಮೂವರು ಮಕ್ಕಳು ಹಾಗೂ ಕುಟುಂಬ ಅನಾಥವಾಗಿದೆ. ರಾಜ್ಯ ಸರ್ಕಾರವು ಗ್ರಾಮ ಸಹಾಯಕರ ಸೇವೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಖಾಯಂ ಮಾಡಬೇಕು. ಕೇವಲ ಗ್ರಾಮ ಲೆಕ್ಕಾಧಿಕಾರಿಗಳ ಸಹಾಯಕರಾಗಿ ಕೆಲಸ ಮಾಡುವಂತೆ ಆದೇಶ ಹೊರಡಿಸಿ ಸಹಾಯ ಮಾಡಬೇಕು. ಈ ಕೂಡಲೇ ಮೃತ ಬ್ರಹ್ಮರಾಜು ಕುಟುಂಬಕ್ಕೆ ೨೫ ಲಕ್ಷರೂ ಸಹಾಯ ಧನ ಹಾಗೂ ೦೫ ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಕೊಡುವ ಮೂಲಕ ಜಿಲ್ಲಾಡಳಿತವು ನೆರವಿಗೆ ಧಾವಿಸಿ ಬರಬೇಕು ಎಂದು ರಾಜ್ಯಾಧ್ಯಕ್ಷ ದೇವರಾಜು ಆಗ್ರಹಿಸಿದರು..

ಇದೇ ಸಂದರ್ಭದಲ್ಲಿ ಜೇನುನೊಣಗಳು ಕಡಿದು ಅಕಾಲಿಕವಾಗಿ ಮೃತರಾದ ಬ್ರಹ್ಮರಾಜು ಅವರ ಕುಟುಂಬಕ್ಕೆ ರಾಜ್ಯ ಸಂಘದ ವತಿಯಿಂದ ಪರಿಹಾರವನ್ನು ವಿತರಿಸಿದರು.

ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತರ ವಾರಸುದಾರರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು. ವೈದ್ಯಾಧಿಕಾರಿ ಡಾ.ಗಿರೀಶ್ ಶವದ ಮರಣೋತ್ತರ ಪರೀಕ್ಷೆ ನಡೆಸಿದರು.

ತಹಶೀಲ್ದಾರ್ ಎಂ.ವಿ.ರೂಪ, ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ದಲಿತ ಮುಖಂಡರಾದ ಡಿ.ಪ್ರೇಮಕುಮಾರ್, ಸೋಮಸುಂದರ್, ರಾಜಯ್ಯ, ಬಂಡಿಹೊಳೆ ರಮೇಶ್, ತಾಲ್ಲೂಕು ಛಲವಾಧಿ ಮಹಾಸಭಾದ ಅಧ್ಯಕ್ಷ ಊಚನಹಳ್ಳಿ ನಟರಾಜ್, ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಂ, ಹರಿಹರಪುರ ನರಸಿಂಹ, ಚಿಕ್ಕಗಾಡಿಗನಹಳ್ಳಿ ಚೆಲುವರಾಜು, ಗೋವಿಂದರಾಜು, ಹೊಸಹೊಳಲು ಪುಟ್ಟರಾಜು, ವಕೀಲ ಗಂಜಿಗೆರೆ ಲೋಕೇಶ್ ಸೇರಿದಂತೆ ನೂರಾರು ದಲಿತ ಮುಖಂಡರು ಉಪಸ್ಥಿತರಿದ್ದು ಮೃತ ಬ್ರಹ್ಮರಾಜು ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: