May 6, 2024

Bhavana Tv

Its Your Channel

ನೂತನವಾಗಿ ಆರಂಭವಾದ ಕೃಷ್ಣರಾಜಪೇಟೆ ಪಟ್ಟಣದ ನಾಗರಿಕರ ಹಿತರಕ್ಷಣಾ ಸಮಿತಿ ಉದ್ಘಾಟನೆ

ಕೃಷ್ಣರಾಜಪೇಟೆ :- ಪಟ್ಟಣದ ನಾಗರೀಕರು ಸಂಘಟಿತರಾಗಿ ತಮಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವುದು ಪುರಸಭೆಯ ಆಧ್ಯ ಕರ್ತವ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕುಮಾರ್ ಹೇಳಿದರು

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನ ಸುಲೋಚನಮ್ಮ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಆರಂಭವಾದ ಕೃಷ್ಣರಾಜಪೇಟೆ ಪಟ್ಟಣದ ನಾಗರಿಕರ ಹಿತರಕ್ಷಣಾ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು…

ಕೆ.ಆರ್.ಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಪಟ್ಟಣದ ಜನತೆಗೆ ಅಗತ್ಯವಾಗಿ ಬೇಕಾದ ಚರಂಡಿ, ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಬದ್ಧವಾಗಿದೆ. ಪಟ್ಟಣದ ಅಭಿವೃದ್ಧಿಗೆ ನಾಗರಿಕರು ತಮ್ಮ ಸಂಪೂರ್ಣ ಸಹಕಾರ ನೀಡುವ ಮೂಲಕ ಪುರಸಭೆಯ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕಾರ ನೀಡಬೇಕು. ಮನೆಯ ಮುಂಭಾಗದಲ್ಲಿ ಗಿಡಮರಗಳನ್ನು ನೆಟ್ಟಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನವೀನ್ ಕುಮಾರ್, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ರಾಜಶ್ವನಿರೀಕ್ಷಕಿ ಚಂದ್ರಕಲಾ, ನಿವೃತ್ತ ಉಪನ್ಯಾಸಕ ಹರಿಚರಣತಿಲಕ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..

ಕೃಷ್ಣರಾಜಪೇಟೆ ಪಟ್ಟಣದ ನಾಗರಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಬಸವೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟಣದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ನಾಗರಿಕ ಹಿತರಕ್ಷಣಾ ಸಮಿತಿಯನ್ನು ರಚಿಸಲಾಗಿದೆ. ಪಟ್ಟಣದ ಸಮಗ್ರವಾದ ಅಭಿವೃದ್ಧಿ ಹಾಗೂ ಶ್ರೀ ಸಾಮಾನ್ಯನ ಸಮಸ್ಯೆಗಳ ನಿವಾರಣೆಗೆ ಹೋರಾಡುವುದು, ನಿಗಧಿತ ಅವಧಿಯೊಳಗೆ ಪಟ್ಟಣದ ಜನತೆಯ ಕಾನೂನು ಬದ್ಧವಾದ ಕೆಲಸಗಳನ್ನು ಮಾಡಿಸಿಕೊಡುವುದು ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಬಸವೇಗೌಡ ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುರೇಶ್ ಕುಮಾರ್, ರೈತಮುಖಂಡ ಮಂದಗೆರೆ ಜಯರಾಂ, ದಲಿತ ಮುಖಂಡ ಬಸ್ತಿರಂಗಪ್ಪ, ಸಮಿತಿಯ ಕಾನೂನು ಸಲಹೆಗಾರ ಧನಂಜಯಕುಮಾರ್, ಖಜಾಂಚಿ ಚಾಶಿ ಜಯಕುಮಾರ್, ಸಭೆಯಲ್ಲಿ ಮಾತನಾಡಿದರು. ನಾಗರಿಕ ಹಿತರಕ್ಷಣಾ ಸಮಿತಿಯ ನೂರಾರು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: