May 4, 2024

Bhavana Tv

Its Your Channel

ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಚಂಡಿಕಾಹೋಮ ಮತ್ತು ಗಣಪತಿ ಹೋಮ ಕಾರ್ಯಕ್ರಮ

ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಚಂಡಿಕಾಹೋಮ ಮತ್ತು ಗಣಪತಿ ಹೋಮ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಭಾಗವಹಿಸಿದ್ದರು ..

ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಪೂಜಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪದ್ಮಭೂಷಣ ಜಗದ್ಗುರು ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ನಾರಾಯಣಗೌಡ ಶ್ರೀಗಳ ಪುತ್ಥಳಿಗೆ ಪುಷ್ಪಾಭಿಷೇಕ ಮಾಡಿದರು..

ಚಂಡಿಕಾಹೋಮದ ವಿಶೇಷ ಪೂಜೆಗೆಂದೇ ದಸರೀಘಟ್ಟದ ಶ್ರೀ ಚೌಡೇಶ್ವರಿ ಅಮ್ಮನವರ ಕ್ಷೇತ್ರದಿಂದ ಆಗಮಿಸಿದ್ದ ತಾಯಿಯ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಸಚಿವ ನಾರಾಯಣಗೌಡ ಅವರು ತಾಯಿಯ ಪಾದಗಳಿಗೆ ಶಿರಬಾಗಿ ನಮಿಸಿ ಭಕ್ತಿಯ ಪರಾಕಾಷ್ಠೆಯನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು..

ದಸರೀಘಟ್ಟ ಕ್ಷೇತ್ರದ ಶ್ರೀ ಚಂದ್ರಶೇಖರನಾಥ ಶ್ರೀಗಳು ಚಂಡಿಕಾಹೋಮದಲ್ಲಿ ಭಾಗವಹಿಸಿ ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಹಾಗೂ ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಹೊಂದುವ ಜೊತೆಗೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಠವಾದರೂ ಯುವಜನರು ಹಾಗೂ ವಿದ್ಯಾರ್ಥಿಗಳು ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ದಾರಿಯಲ್ಲಿಯೇ ಸಾಗಿ ಗುರಿ ಮುಟ್ಟಬೇಕು ಎಂದು ಕರೆ ನೀಡಿದರು.

ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠ ಹಾಗೂ ಕೆ.ಆರ್.ಪೇಟೆ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ ಶಿಕ್ಷಣ ಕಾಶಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಕೆ.ಆರ್.ಪೇಟೆಯ ಬಿಜಿಎಸ್ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣ ರೂಪಿಸಿ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಕಲಿಕೆಗೆ ಪೂರಕವಾದ ಉತ್ತಮವಾದ ವಾತಾವರಣ ನಿರ್ಮಿಸಲು ಒತ್ತು ನೀಡಿ ನಾಲ್ಕು ಅಂತಸ್ತಿತ ಹೈಟೆಕ್ ಕಟ್ಟಡ, ವಿಶಾಲವಾದ ಹೂದೋಟ ಹಾಗೂ ಕ್ರೀಡಾ ಮೈದಾನವನ್ನು ನಿರ್ಮಿಸಲಾಗಿದ್ದು ಶಾಲಾ ಆವರಣದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ ಎಂದು ರಾಮಕೃಷ್ಣೇಗೌಡ ಹೇಳಿದರು.

ಪುರಸಭೆ ಸದಸ್ಯರಾದ ಶಾಮಿಯಾನತಿಮ್ಮೇಗೌಡ, ಕೆ.ಆರ್.ನೀಲಕಂಠ, ಡಿ.ಪ್ರೇಮಕುಮಾರ್, ರವೀಂದ್ರಬಾಬು, ಸಚಿವರ ಆಪ್ತಸಹಾಯಕರಾದ ದಯಾನಂದ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಮುಖಂಡರಾದ ರವಿಕುಮಾರ್, ಬೇಲದಕೆರೆ ಪಾಪೇಗೌಡ, ಎಸ್.ಸಿ.ವಿಜಯಕುಮಾರ್, ರಾಮದಾಸ್, ಶೀಳನೆರೆ ಅಂಬರೀಶ್, ಕೆ.ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: