May 4, 2024

Bhavana Tv

Its Your Channel

ಮಾಸ್ತಿವೆಂಕಟೇಶ್ ಅಯ್ಯಂಗಾರ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿಂಥನ ಮಂಥನ ವೈಚಾರಿಕ ಕಾರ್ಯಕ್ರಮ

ಕೃಷ್ಣರಾಜಪೇಟೆ :– ಕನ್ನಡ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿಯೂ ಸರ್ವಶ್ರೇಷ್ಠ ಸಾಧನೆ ಮಾಡಿ ಮಾಸ್ತಿ ಕನ್ನಡದ ಆಸ್ತಿ ಎಂಬ ಹಿರಿಮೆಗೆ ಭಾಜನರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜೀವನದ ಸಾಧನೆಯನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ಅಭ್ಯಾಸ ಮಾಡಿ ಸಾಧಕರಾಗಿ ಹೊರಹೊಮ್ಮಬೇಕು ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಕರೆ ನೀಡಿದರು .

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಾಡಿನ ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಮಾಸ್ತಿವೆಂಕಟೇಶ್ ಅಯ್ಯಂಗಾರ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿಂಥನ ಮಂಥನ ವೈಚಾರಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು..

ಕಥೆ, ಕವನ, ವಿಡಂಭನೆ, ಸಣ್ಣ ಕಥೆಗಳು ಸೇರಿದಂತೆ ಕನ್ನಡ ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವಶ್ರೇಷ್ಠ ಸಾಧನೆ ಮಾಡಿ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮಾಸ್ತಿ ಕನ್ನಡದ ಆಸ್ತಿಯೆಂಬ ಹಿರಿಮೆಗೆ ಭಾಜನರಾಗಿರುವ ಮಾಸ್ತಿ ಅವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಆಸಕ್ತಿಯಿಂದ ಓದುವ ಮೂಲಕ ವಿಚಾರವಂತರಾಗಿ, ಈ ನಾಡನ್ನು ಸುಭದ್ರವಾಗಿ ಕಟ್ಟುವ ಶಿಸ್ತಿನ ಸಿಪಾಯಿಗಳಂತೆ ಹೊರಹೊಮ್ಮಬೇಕು. ಕನ್ನಡದ ನೆಲ,ಜಲ ಹಾಗೂ ಸಾಹಿತ್ಯವನ್ನು ಪ್ರೀತಿಸಿ ಗೌರವಿಸುವ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುವ ಮೂಲಕ ನೈಜ ಕನ್ನಡಿಗರಾಗಿ ಹೊರಹೊಮ್ಮಬೇಕು ಎಂದು ರವಿಕುಮಾರ್ ಕರೆ ನೀಡಿದರು..

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಬಳ್ಳೇಕೆರೆ ಮಂಜುನಾಥ್ ಮಾತನಾಡಿ ರವಿಕುಮಾರ್ ಚಾಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಮ್ಮನ ತೇರನ್ನು ಯಶಸ್ವಿಯಾಗಿ ಎಳೆಯುವ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರಾದ ನಾವು ಕನ್ನಡ ಭಾಷೆ ಹಾಗೂ ನೆಲಜಲದ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡವನ್ನು ಪ್ರೀತಿಸುವ ಕನ್ನಡವನ್ನು ಕಟ್ಟುವ ಕಾಯಕದಲ್ಲಿ ನಮ್ಮನ್ನು ತೊಡಗಿಸಿಕೊಂಡು ನೈಜ ಕನ್ನಡಿಗರಾಗಿ ದುಡಿಯೋಣ ಎಂದು ಮನವಿ ಮಾಡಿದರು..

ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ರೇವಣ್ಣ ಮಾಸ್ತಿ ಅವರ ಜೀವನ ಸಾಧನೆಗಳು ಹಾಗೂ ಕನ್ನಡ ಭಾಷೆಯ ಸಾರ್ವಭೌಮತೆಯನ್ನು ಕುರಿತು ಮಾತನಾಡಿದರು..

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಜಿಲ್ಲಾ ಉಪಾಧ್ಯಕ್ಷ ಎಸ್.ಕೆ.ರವಿಕುಮಾರ್, ಮಂಜುನಾಥ್, ಸವಿತಾ ರಮೇಶ್, ಕನ್ನಡ ಪ್ರಾಧ್ಯಾಪಕ ನಂಜುAಡಯ್ಯ, ಮಂಜುನಾಥ್, ಪತ್ರಕರ್ತ ಸೈಯ್ಯದ್ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: