May 5, 2024

Bhavana Tv

Its Your Channel

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಕೃಷ್ಣರಾಜಪೇಟೆ:– ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಪ್ರೀತಿಯಿಂದ ಆರೈಕೆ ಮಾಡಬೇಕು. ಮರಗಿಡಗಳ ಉಳಿವಿನಿಂದ ಪರಿಸರದ ಸಂರಕ್ಷಣೆ ಸಾಧ್ಯವಿದೆ ಎಂಬ ಸತ್ಯವನ್ನು ಅರಿಯಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಹೇಳಿದರು .

ಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ವಿವಿಧ ಬಗೆಯ ಹಣ್ಣು ಹಾಗೂ ಹೂವಿನ ಸಸಿಗಳನ್ನು ನೆಟ್ಟು ನೀರೆರೆದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು..
ಮಾನವರ ಜೀವನದಲ್ಲಿ ಪ್ರಕೃತಿಯು ಅವಿನಾಭಾವ ಸಂಬAಧವನ್ನು ಹೊಂದಿದೆ ಎಂಬ ವಾಸ್ತವ ಸತ್ಯವನ್ನು ನಾವು ಅರಿತಿದ್ದರೂ ಗಿಡಮರಗಳನ್ನು ಕಡಿದು ನಾಶ ಮಾಡುತ್ತಾ ಕಾಡನ್ನು ಸರ್ವನಾಶ ಮಾಡಿ ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದೇವೆ. ಕಾಡು ನಾಶವಾಗುತ್ತಿರುವುದರಿಂದ ಪರಿಸರವು ಅಸಮತೋಲನವಾಗಿ ಕಾಡಿನಲ್ಲಿರುವ ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬಂದು ಮನುಷ್ಯನಿಗೆ ತೊಂದರೆ ನೀಡುತ್ತಿವೆ. ನಾವು ಈಗಲಾದರೂ ಎಚ್ಚೆತ್ತು ಕಾಡನ್ನು ಸಂರಕ್ಷಣೆ ಮಾಡಿ ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಪ್ರೇಮವನ್ನು ಮೆರೆಯಬೇಕಾಗಿದೆ. ಮನೆಯ ಮುಂಭಾಗದಲ್ಲಿ ಕೈತೋಟ ಮಾಡಿ ಮನೆಗೆರಡು ಮರಗಳನ್ನು ಕಡ್ಡಾಯವಾಗಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ನ್ಯಾಯಾಧೀಶರಾದ ಸಮೀರ್ ಕರೆ ನೀಡಿದರು..

ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಓಂಕಾರಮೂರ್ತಿ ಮಾತನಾಡಿ ಗಿಡಮರಗಳು ಹಾಗೂ ಕಾಡನ್ನು ನಾಶಮಾಡುತ್ತಿರುವುದರಿಂದ ಜಾಗತಿಕ ತಾಪಮಾನವು ವ್ಯತ್ಯಯವಾಗಿ ಬಿಸಿಲಿನ ಜಳವು ಹೆಚ್ಚಾಗಿ ಮಾನವರಾದ ನಾವು ಹಾಗೂ ಪಶು ಪಕ್ಷಿಗಳು ತೊಂದರೆಗೆ ಸಿಲುಕಿವೆ. ಹಿಮವು ತುಂಬಿರುವ ದ್ವೀಪಗಳು ಬಿಸಿಲಿನ ಕಾವಿಗೆ ಕರಗಿ ಮುಳುಗುತ್ತಿರುವ ಕಾರಣ ಹಿಮಗಡ್ಡೆಗಳನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದ ಪೆಂಗ್ವಿನ್ ಗಳು ಸಂಕಷ್ಠಕ್ಕೆ ಸಿಲುಕಿವೆ. ಆದ್ದರಿಂದ ಪರಿಸರ ಸಮತೋಲನವನ್ನು ಕಾಪಾಡಲು ಗಿಡಮರಗಳನ್ನು ನೆಟ್ಟು ಬೆಳಸುವುದು ಇಂದಿನ ಅನಿವಾರ್ಯತೆಯಾಗಿದೆ. ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡಿ ಭೂಮಿಗೆ ಹಸಿರ ಹೊದಿಕೆಯನ್ನು ಹೊದಿಸಿ ಭೂಮಿ ಹಾಗೂ ಪರಿಸರವನ್ನು ಸಂರಕ್ಷಣೆ ಮಾಡಲು ಹೋರಾಟ ನಡೆಸಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ. ಪರಿಸರಕ್ಕೆ ಹೆಚ್ಚು ಆಮ್ಲಜನಕವನ್ನು ನೀಡುವ ಅರಳಿಮರ, ಬೇವು, ಮಾವು, ಹಿಪ್ಪೆ, ನೇರಳೆ ಮರಗಳನ್ನು ನೆಟ್ಟು ಬೆಳೆಸುವ ಬದ್ಧತೆಯನ್ನು ಬೆಳೆಸಿಕೊಂಡು ಮನುಕುಲಕ್ಕೆ ಅನಾಹುತ ಸಂಭವಿಸುವ ಮುನ್ನ ನಾವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಸರದ ಬಗ್ಗೆ ಕಾಳಜಿ ಹಾಗೂ ಪರಿಸರ ಪ್ರೇಮವನ್ನು ತುಂಬುವುದು ಇಂದಿನ ದಿನಮಾನದಲ್ಲಿ ಬಹಳ ಮುಖ್ಯವಾಗಿದೆ ಎಂದು ನ್ಯಾಯಾಧೀಶರಾದ ಓಂಕಾರಮೂರ್ತಿ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಹಾಗೂ ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಶಕುಂತಲಾ ಮಾತನಾಡಿ ಮಾನವರಾದ ನಾವು ಪರಿಸರದ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಾ ಕಾಡನ್ನು ಕಡಿದು ನಾಶಪಡಿಸುತ್ತಿರುವುದರಿಂದ ಕಾಲಕಾಲಕ್ಕೆ ಮಳೆಯಾಗಿ ಬೆಳೆಯಾಗದೇ ಜಾಗತಿಕ ತಾಪಮಾನವು ವ್ಯತ್ಯಯವಾಗಿ ಸಂಕಷ್ಠಕ್ಕೆ ಸಿಲುಕಿದ್ದೇವೆ. ಪರಿಸರದ ಜೊತೆ ಅವಿನಾಭಾವ ಸಂಬAಧವನ್ನು ಹೊಂದಿರುವ ನಾವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಗಿಡಮರಗಳ ಬಗ್ಗೆ ಅರಿವಿನ ಜಾಗೃತಿ ಮೂಡಿಸಿ ಪರಿಸರ ಪ್ರೇಮವನ್ನು ಬೆಳೆಸಬೇಕು ಎಂದು ಕರೆ ನೀಡಿದರು..
ತಾಲ್ಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ, ತಾಲ್ಲೂಕು ತೋಟಗಾರಿಕೆ ಅಧಿಕಾರಿ ಡಾ.ಜಯರಾಂ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಉಪಾಧ್ಯಕ್ಷ ಬಿ.ಸಿ.ದಿನೇಶ್, ಜಂಟಿಕಾರ್ಯದರ್ಶಿ ಸಿ.ನಿರಂಜನ್, ಖಜಾಂಚಿ ಜಗಧೀಶ್, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಜಿ.ಆರ್.ಅನಂತರಾಮಯ್ಯ, ಎಸ್.ಸಿ.ವಿಜಯಕುಮಾರ್, ಹೆಚ್.ರವಿ, ಬಂಡಿಹೊಳೆ ಗಣೇಶ್, ಗಂಜಿಗೆರೆ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: