May 4, 2024

Bhavana Tv

Its Your Channel

ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ :- ರಾಜಕಾರಣದಲ್ಲಿ ಅಧಿಕಾರ ನೀರ ಮೇಲಿನ ಗುಳ್ಳೆಯಿದ್ದಂತೆ..ಅಧಿಕಾರ ಶಾಶ್ವತವಲ್ಲ ಎಂಬ ಸತ್ಯ ನನಗೆ ಗೊತ್ತಿದೆ ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ನನ್ನ ಜೀವದ ಕೊನೆಯ ಉಸಿರಿನವರೆಗೂ ಒಬ್ಬ ಸಾಮಾನ್ಯ ಸೇವಕನಂತೆ ತಾಲ್ಲೂಕಿನ ಜನತೆಯ ಸೇವೆ ಮಾಡುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು ..

ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಬಿ.ಜಯಶ್ರೀ ರಂಗಮAದಿರದಲ್ಲಿ ಜಿಲ್ಲಾಡಳಿತವು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು..

ನಾನು ತಂದೆತಾಯಿಗಳನ್ನು ಕಳೆದುಕೊಂಡಿದ್ದು ಕ್ಷೇತ್ರದ ಜನತೆಯನ್ನೇ ತಂದೆತಾಯಿಗಳ ರೂಪದಲ್ಲಿ ಕಾಣುತ್ತಿದ್ದೇನೆ. ಕ್ಷೇತ್ರದ ಜನತೆಯ ಆರೋಗ್ಯ ಸಂವರ್ಧನೆಗಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಬೃಹತ್ ಆರೋಗ್ಯ ಮೇಳವನ್ನು ಆಯೋಜಿಸಿ 25 ಸಾವಿರಕ್ಕೂ ಹೆಚ್ಚಿನ ಜನರಿಗೆ ಉಚಿತ ತಪಾಸಣೆ ಮಾಡಿ ಔಷಧಗಳನ್ನು ವಿತರಿಸಿದ್ದೇನೆ. ಆರೋಗ್ಯ ಮೇಳ ನಡೆಸಿದ ಸಂದರ್ಭದಲ್ಲಿ ನೇತ್ರ ಪರೀಕ್ಷಾ ವಿಭಾಗದಲ್ಲಿ ನೂಕುನುಗ್ಗಲು ಉಂಟಾದ್ದರಿAದ ಈಗ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ನೇತ್ರ ಪರೀಕ್ಷೆ ಮಾಡಿಸಿ ಉಚಿತ ಕನ್ನಡಕಗಳ ವಿತರಣೆ ಸೇರಿದಂತೆ ಅಗತ್ಯವಿರುವ ಜನರಿಗೆ ತಜ್ಞವೈದ್ಯರ ಶಿಫಾರಸ್ಸಿನಂತೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿಕೊಡಲಾಗುತ್ತಿದೆ. ದಯಮಾಡಿ ಕ್ಷೇತ್ರದ ಜನರು ಹಾಗೂ ಹಿರಿಯ ನಾಗರೀಕರು ಶಿಬಿರಕ್ಕೆ ಆಗಮಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಚಿವ ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು…

ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕವಾಗಿದೆ. ಹಣ ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದವರು ಸಮಾಜಸೇವೆ ಮಾಡುತ್ತಿದ್ದ ನನ್ನನ್ನು ಎಂಜಲು ಲೋಟ ತೊಳೆಯುವ ಹೈದಾ ರಾಜಕಾರಣ ಮಾಡಲು ಸಾಧ್ಯವೇ, ಅವನನ್ನು ಗಂಟುಮೂಟೆ ಕಟ್ಟಿಸಿ ಮುಂಬೈಗೆ ಓಡಿಸುತ್ತೇನೆ ಎಂದು ಮನನೋಯುವಂತೆ ಟೀಕೆ ಮಾಡಿದ್ದರಿಂದ ಅವರ ಟೀಕೆಟಿಪ್ಪಣಿಯನ್ನೇ ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಜನತೆಯ ಆಶೀರ್ವಾದದ ಫಲವಾಗಿ ಸತತವಾಗಿ ಮೂರು ಭಾರಿ ಶಾಸಕನಾಗಿ ಪ್ರಸ್ತುತ ಸಚಿವನಾಗಿ ಇಡೀ ರಾಜ್ಯವೇ ಮೆಚ್ವುವಂತೆ ದಕ್ಷ ಪ್ರಾಮಾಣಿಕ ಆಡಳಿತ ನೀಡುತ್ತಿದ್ದೇನೆ. ನನ್ನನ್ನು ಟೀಕೆ ಮಾಡಿದವರು ಸತತವಾಗಿ ಮೂರು ಬಾರಿ ಸೋತು ಮೂಲೆ ಸೇರಿದ್ದಾರೆ ಎಂದು ನಾರಾಯಣಗೌಡ ತಮ್ಮ ಮನದಾಳದ ಮಾತುಗಳನ್ನು ಹೇಳಿದರು .

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1700 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅಭಿವೃದ್ಧಿ ಕೆಲಸಗಳ ಅನುಷ್ಠಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ ..

ಜುಲೈ 21ರಂದು ಸಿಎಂ ಬಸವರಾಜಬೊಮ್ಮಾಯಿ ಅವರು ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದು 1700ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭೂಮಿಪೂಜೆ ಮಾಡಿ, ಸಂಪೂರ್ಣವಾಗಿರುವ ಕೆಲವು ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ನನ್ನ ವಿರುದ್ಧ ಟೀಕೆ ಮಾಡುವ ಟೀಕಾಕಾರರು ಹಾಗೂ ವಿರೋಧಿಗಳಿಗೆ ನಾನು ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಉತ್ತರ ನೀಡಲಿವೆ. ಟೀಕೆಗಳು ಸಾಯುತ್ತವೆ ಆದರೆ ನಾವು ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಜೀವಂತ ಸ್ಮಾರಕಗಳಾಗಿ ಶಾಶ್ವತವಾಗಿ ಉಳಿಯಲಿವೆ ಎಂದು ಹೇಳಿದ ಸಚಿವರು ವಿಪಕ್ಷಗಳ ಮುಖಂಡರು ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೇ ತಮಗೆ ಸಹಕಾರ ನೀಡಬೇಕು. ಉಪಚುನಾವಣೆಯ ಸಂದರ್ಭದಲ್ಲಿ ನಾನು ತಾಲ್ಲೂಕಿನ ಜನತೆಗೆ ಕೊಟ್ಟ ಮಾತಿನಂತೆ ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲ್ಲೂಕನ್ನಾಗಿ ಮಾಡಿ ಎರಡನೇ ಶಿಕಾರಿಪುರದ ಮಾದರಿಯಲ್ಲಿ ಅಭಿವೃದ್ಧಿ ಮಾಡಿ ಸಾಧಿಸಿ ತೋರಿಸುತ್ತೇನೆ ಎಂದು ನಾರಾಯಣಗೌಡ ಹೇಳಿದರು..

ಅಕ್ಕಿಹೆಬ್ಬಾಳು ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು..

ತಹಶೀಲ್ದಾರ್ ಎಂ.ವಿ.ರೂಪ, ಡಿ.ಹೆಚ್.ಓ ಡಾ.ಧನಂಜಯ, ತಾ.ಪಂ ಇಓ ಸತೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್, ತಾ.ಪಂ ಮಾಜಿಅಧ್ಯಕ್ಷ ನಂಜುAಡೇಗೌಡ, ತ್ರಿವೇಣಿ ಸಂಗಮದ ಕುಂಭಮೇಳದ ಸಂಚಾಲಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ, ಮುಖಂಡರಾದ ಎ.ಜೆ.ದಿವಾಕರ, ಕೆ.ಜಿ.ತಮ್ಮಣ್ಣ, ರಕ್ಷಿತದಿನೇಶ್, ಅಕ್ಕಿಹೆಬ್ಬಾಳು ಗ್ರಾಪಂ ಉಪಾಧ್ಯಕ್ಷ ರಾಜ್ ಕುಮಾರ್, ಮಾಜಿಅಧ್ಯಕ್ಷ ಟಿ.ಅಣ್ಣಯ್ಯ, ಮಹೇಶನಾಯಕ, ಆರ್.ವಾಸು, ಉಪತಹಶೀಲ್ದಾರ್ ಜಯಪ್ಪ, ಲಕ್ಷ್ಮೀಕಾಂತ್, ಸಿಡಿಪಿಓ ಅರುಣ್ ಕುಮಾರ್, ರಾಮಕೃಷ್ಣೇಗೌಡ, ಪರಮೇಶ್ ಅರವಿಂದ್, ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: