May 8, 2024

Bhavana Tv

Its Your Channel

ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ನಡೆದ ಸ್ವಾತಂತ್ರ‍್ಯೋತ್ಸವ ದಿನಾಚರಣೆ

ಕೃಷ್ಣರಾಜಪೇಟೆ :- ಹಿರಿಯರ ತ್ಯಾಗ ಬಲಿದಾನದಿಂದ ಬ್ರಿಟೀಷರ ವಿರುದ್ಧ ಗಳಿಸಿದ ಸ್ವಾತಂತ್ರ‍್ಯವನ್ನು ದೇಶದ ಮುನ್ನಡೆಗೆ ಯುವಜನರು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು . ಪುರಸಭಾಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು

ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶದ ಸ್ವಾತಂತ್ರ‍್ಯಕ್ಕಾಗಿ ಲಕ್ಷಾಂತರ ಜನ ಮಹನೀಯರು ತ್ಯಾಗ, ಬಲಿದಾನ ಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರ‍್ಯವು ದೊರಕಿದೆ. ದೇಶಕ್ಕೆ ಸ್ವಾತಂತ್ರ‍್ಯ ದೊರೆತು 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಭಾರತ ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಮಾರಂಭವನ್ನು ದೇಶಾದ್ಯಂತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುತ್ತಿದೆ. ಭಾರತ ದೇಶವು ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವಕ್ಕೆ ಗುರುವಾಗಿ ಹೊರಹೊಮ್ಮುತ್ತಿದೆ. ಯುವಜನರು ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹಜ್ಜೆಹಾಕಬೇಕು ಎಂದು ಕೃಷ್ಣರಾಜಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ಕರೆ ನೀಡಿದರು..
ಅವರು ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ನಡೆದ ಭಾರತ ಸ್ವಾತಂತ್ರ‍್ಯದ 75ನೇ ವರ್ಷದ ಅಮೃತಮಹೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಧ್ವಜಸಂದೇಶ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ವಿ.ರೂಪ, ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್, ಬಿಇಓ ಸೀತಾರಾಮ್,
ಶೋಭಾ ದಿನೇಶ್, ಶುಭಾಗಿರೀಶ್, ಸದಸ್ಯರಾದ ಕೆ.ಎಸ್.ಪ್ರಮೋದ್, ಶಾಮಿಯಾನ ತಿಮ್ಮೇಗೌಡ, ಹೆಚ್.ಆರ್.ಲೋಕೇಶ್,ಯಶಸ್ವಿನಿಮಂಜುನಾಥ್, ಹನುಮಂತರಾಜ್, ಡಾ.ಕೆ.ಎಸ್.ರಾಜೇಶ್, ತಿಬೆಟ್ ಮಹೇಶ್, ಹೆಚ್.ಡಿ.ಅಶೋಕ್, ಗಿರೀಶ್, ಕಲ್ಪನಾದೇವರಾಜ್, ಕೆ.ಬಿ.ಮಹೇಶ್, ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಹೆಚ್.ಎನ್.ಪ್ರವೀಣ್, ಸೌಭಾಗ್ಯ ಉಮೇಶ್, ಖಮ್ಮರ್ ಬೇಗಂ, ಪಂಕಜಾ, ಸುವರ್ಣರಮೇಶ್ ಸೇರಿದಂತೆ ಪುರಸಭೆಯ ಸಿಬ್ಬಂಧಿಗಳು, ಪೌರಕಾರ್ಮಿಕರು ಭಾಗವಹಿಸಿದ್ದರು.

ವರದಿ: ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ.

error: