May 9, 2024

Bhavana Tv

Its Your Channel

38ಲಕ್ಷರೂ ವೆಚ್ಚದ ಆರ್ಚ್ ನಿರ್ಮಾಣಕ್ಕೆ ಭೂಮಿಪೂಜೆ ನೆರೆವೇರಿಸಿದ ಸಚಿವ ಡಾ.ನಾರಾಯಣಗೌಡ

ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದ ಬಳಿ ಹೊಸಹೊಳಲು ರಸ್ತೆಯಲ್ಲಿ ಭಾರೀ ವಿರೋಧದ ನಡುವೆಯೂ ಹೊಯ್ಸಳ ವಾಸ್ತುವೈಭವದ ಶ್ರೀ.ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಸ್ವಾಗತ ಕೋರುವ 38ಲಕ್ಷರೂ ವೆಚ್ಚದ ಆರ್ಚ್ ನಿರ್ಮಾಣಕ್ಕೆ ಸಚಿವ ಡಾ.ನಾರಾಯಣಗೌಡ’ರಿಂದ ಭೂಮಿಪೂಜೆ ನರೆವೇರಿಸಿದರು.

ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಯ್ಸಳ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಸ್ವಾಗತ ಕೋರುವ 38 ಲಕ್ಷರೂ ವೆಚ್ಚದ ಬೃಹತ್ ಆರ್ಚ್ ನಿರ್ಮಾಣಕ್ಕೆ ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದ ಸಮೀಪ ಭೇರ್ಯ ರಸ್ತೆಯಲ್ಲಿ ಸಚಿವ ಡಾ.ನಾರಾಯಣಗೌಡ ಅವರು ಸ್ಥಳ ಗುರುತಿಸಿ ಕಾಮಗಾರಿಗೆ ಭೂಮಿಪೂಜೆ ಮಾಡಿದರು…

ಈಗಾಗಲೇ ಎರಡು ಬಾರಿ ಭೂಮಿಪೂಜೆಯಾಗಿ ರಾಜಕೀಯ ದುರುದ್ಧೇಶದಿಂದಾಗಿ ಆರ್ಚ್ ನಿರ್ಮಾಣಕ್ಕೆ ತಡೆಯಾಗಿದ್ದ ಹಿನ್ನೆಲೆಯಲ್ಲಿ ಹೊಸಹೊಳಲು ಗ್ರಾಮಸ್ಥರು, ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ, ಪುರ ಪ್ರಮುಖರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಮುಖಂಡರ ಮನವೊಲಿಸಿ ರಸ್ತೆಯನ್ನು ಅಳತೆ ಮಾಡಿಸಿ ಸ್ಥಳ ನಿಗಧಿ ಮಾಡಿಸಿದ ಸಚಿವ ನಾರಾಯಣಗೌಡ ಅವರು ಸರ್ವಸಮ್ಮತವಾದ ಶ್ರೀಸಾಮಾನ್ಯರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗದAತೆ ಸ್ವಾಗತ ಕಮಾನು ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದರು..

ಹೊಸಹೊಳಲು ಗ್ರಾಮದಲ್ಲಿ ಬೇಲೂರು-ಹಳೇಬೀಡಿನಲ್ಲಿರುವ ಭವ್ಯವಾದ ದೇವಾಲಯದ ಮಾದರಿಯ ಅದ್ಬುತವಾದ ದೇವಾಲಯವಿದ್ದರೂ ಪ್ರವಾಸಿಗರು ಹಾಗೂ ಜನಸಾಮಾನ್ಯರ ಕಣ್ಣಿಗೆ ಕಾಣದೇ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯವು ಕಗ್ಗತ್ತಲಿನಲ್ಲಿಯೇ ಇಂದಿಗೂ ಉಳಿದಿರುವುದರಿಂದ ದೇವಾಲಯವನ್ನು ಹೊರಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 38 ಲಕ್ಷರೂ ವೆಚ್ಚದಲ್ಲಿ ಆರ್ಚ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಿಸಲಾಗಿದೆ. ಹೊಸಹೊಳಲು ಚಿಕ್ಕಕೆರೆಯಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬೋಟಿಂಗ್ ಸೌಲಭ್ಯ ಸೇರಿದಂತೆ ಕಾರಂಜಿಗಳು ಹಾಗೂ ಪುಷ್ಪೋಧ್ಯಾನವನ್ನು ನಿರ್ಮಿಸಲು ಅಸಣ್ಣ ನೀರಾವರಿ ಇಲಾಖೆಯ ವತಿಯಿಂದ 10ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ. ಕೆರೆ ಅಭಿವೃದ್ಧಿಗೆ ಸಂಬAದಪಟ್ಟAತೆ ಟೆಂಡರ್ ಪ್ರಕ್ರಿಯೆಯು ಮುಗಿದಿದ್ದು ಕಾಮಗಾರಿಯು ಆರಂಭವಾಗಲಿದೆ. ಆರು ತಿಂಗಳಲ್ಲಿ ಆರ್ಚ್ ನಿರ್ಮಾಣ ಹಾಗೂ ಕೆರೆ ಅಭಿವೃದ್ಧಿ ಕೆಲಸವು ಸಂಪೂರ್ಣವಾಗಲಿದೆ. ಗುಣಮಟ್ಟದ ಕೆಲಸವು ಆಗುವಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನೋಡಿಕೊಳ್ಳಬೇಕು ಎಂದು ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು..

ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆರ್ಚ್’ನ ನಿರ್ಮಾಣ ಕಾರ್ಯದ ಭೂಮಿಪೂಜೆಯಲ್ಲಿ ಪುರಸಭಾ ಅಧ್ಯಕ್ಷೆ ಮಹಾದೇವಿ, ಸದಸ್ಯರಾದ ಹೆಚ್.ಆರ್.ಲೋಕೇಶ್, ತೇಜಸ್ವಿನಿ ಮಂಜುನಾಥ್, ಕೆ.ಎಸ್.ಸಂತೋಷ್, ಪಂಕಜಾಪ್ರಕಾಶ್, ಹೆಚ್.ಡಿ. ಅಶೋಕ್, ಹೆಚ್.ಎನ್.ಪ್ರವೀಣ್, ಶಾಮಿಯಾನತಿಮ್ಮೇಗೌಡ, ಡಾ.ರಾಜೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಬಿಜೆಪಿ ಮುಖಂಡ ರಾಜು, ಮುಖ್ಯಾಧಿಕಾರಿ ಕುಮಾರ್, ಮಹಿಳಾ ಹೋರಾಟಗಾರ್ತಿ ಜಯಮ್ಮ, ದಲಿತ ಮುಖಂಡ ಹೊಸಹೊಳಲು ದೇವರಾಜು, ಭೂಸೇನಾ ನಿಗಮದ ಎಇಇ ಗೋಪಾಲಯ್ಯ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.. ಪಟ್ಟಣ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಸಬ್ ಇನ್ಸ್ ಪೆಕ್ಟರ್ ಸುನಿಲ್ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: