May 5, 2024

Bhavana Tv

Its Your Channel

ಗ್ರಾಜುಯೇಟ್ ಕೋ ಆಪರೇಟಿವ್ ಸೊಸೈಟಿಯ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ರೆಸ್ಟೋರೆಂಟ್ ನ ಸುಲೋಚನಮ್ಮ ಸಭಾಂಗಣದಲ್ಲಿ ಗ್ರಾಜುಯೇಟ್ ಕೋ ಆಪರೇಟಿವ್ ಸೊಸೈಟಿಯ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಡಾ.ಅಂಚಿ.ಸಣ್ಣಸ್ವಾಮಿಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು…

ಸೊಸೈಟಿಯ ಅಭಿವೃದ್ಧಿಗೆ ಸದಸ್ಯರು ಪೂರಕವಾದ ಸಹಕಾರವನ್ನು ನೀಡಬೇಕು. ಹಣದ ಉಳಿತಾಯ, ನಿಶ್ಚಿತ ಠೇವಣಿ ಸೇರಿದಂತೆ ಬ್ಯಾಂಕುಗಳಲ್ಲಿ ಮಾಡುವ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಿಮ್ಮದೇ ಸೊಸೈಟಿಯಲ್ಲಿ ಮಾಡುವ ಮೂಲಕ ಸೊಸೈಟಿಯು ಆರ್ಥಿಕವಾಗಿ ಬಲವರ್ಧನೆಯಾಗಲು ಸಹಕರಿಸಬೇಕು ಎಂದು ಅಧ್ಯಕ್ಷ ಸಣ್ಣಸ್ವಾಮಿಗೌಡ ಮನವಿ ಮಾಡಿದರಲ್ಲದೇ ಷೇರುದಾರರು ಸೊಸೈಟಿಯಲ್ಲಿ ಪಡೆದಿರುವ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು, ತಮ್ಮ ಸ್ನೇಹಿತರು ಸಾಲ ಪಡೆದುಕೊಳ್ಳಲು ಜಾಮೀನು ನೀಡಿರುವ ಜಾಮೀನುದಾರರು ಸಾಲವು ಸುಸ್ತಿಯಾಗದಂತೆ ನೋಡಿಕೊಂಡು ಸಕಾಲದಲ್ಲಿ ಸಾಲದ ಹಣವು ಮರುಪಾವತಿಯಾಗುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಕೈ ಮುಗಿದು ಮನವಿ ಮಾಡಿದರು..

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಧರ್ಮಪ್ಪ ಮಾತನಾಡಿ ಸಹಕಾರ ಸಂಘಗಳ ಬೆಳವಣಿಗೆಗೆ ಸದಸ್ಯರ ಕೊಡುಗೆಯು ಅಪಾರವಾಗಿದೆ. ಸಾಲ ಪಡೆದ ಹಣವನ್ನು ನಿಗಧಿತ ಅವಧಿಯೊಳಗೆ ಮರುಪಾವತಿ ಆಗುವಂತೆ ಜಾಮೀನುದಾರರು ನಿಗಾ ವಹಿಸಬೇಕು ಎಂದು ಮನವಿ ಮಾಡಿದ ಅವರು ಗ್ರಾಜುಯೇಟ್ ಕೋ ಆಪರೇಟಿವ್ ಸೊಸೈಟಿಗೆ ಕನಿಷ್ಠ ಒಂದು ಸಾವಿರ ಪದವೀಧರರಾದರೂ ಶೇರುದಾರರಾಗಬೇಕು. ಸೊಸೈಟಿಯು ಬೆಳೆದು ಹೆಮ್ಮರವಾಗುವ ನಿಟ್ಟಿನಲ್ಲಿ ಸದಸ್ಯರು ಸೊಸೈಟಿಯ ಜೊತೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡು ವ್ಯವಹರಿಸಬೇಕು ಎಂದು ಕರೆ ನೀಡಿದರು..

ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮೀಮಂಜೇಗೌಡ ವಾರ್ಷಿಕ ವರದಿ ಮಂಡಿಸಿ ಸಂಘವು 1,21,957 ರೂ ನಿವ್ವಳ ಲಾಭಗಳಿಸಿದ್ದು ಒಟ್ಟಾರೆ 57,91,972 ರೂಪಾಯಿ ಸಾಲವನ್ನು ಸದಸ್ಯರಿಗೆ ನೀಡಿದೆ. ಇದರಲ್ಲಿ ಬಹುತೇಕ ಸದಸ್ಯರು ಸುಸ್ತಿದಾರರಾಗಿದ್ದು ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡದೇ ಸಂಘದ ಅಭಿವೃದ್ಧಿಗೆ ತೊಡಕಾಗಿದ್ದಾರೆ ಎಂದು ಹೇಳಿದರು..

ಶೇರುದಾರರಾದ ಚಾ.ಶಿ.ಜಯಕುಮಾರ್, ಕರೀಗೌಡ ನಿಂಗೇಗೌಡ, ಮಾಕವಳ್ಳಿ ವಸಂತಕುಮಾರ್, ಕುಪ್ಪಳ್ಳಿ ಮಂಜುನಾಥ್, ಶೀಳನೆರೆ ಶಿವಕುಮಾರ್, ಚಂದ್ರಮೋಹನ್ ಮಾತನಾಡಿ ಸೊಸೈಟಿಯಿಂದ ಸಾಲ ಪಡೆದು ಮರುಪಾವತಿ ಮಾಡದ ಸದಸ್ಯರ ಹೆಸರನ್ನು ಬಹಿರಂಗಪಡಿಸಿ ಸುಸ್ತಿದಾರರಿಂದ ಸಾಲ ವಸೂಲಿಗೆ ಕ್ರಮವಹಿಸಬೇಕು, ಸೊಸೈಟಿಗೆ ಸ್ವಂತ ನಿವೇಶನವನ್ನು ಪಡೆದುಕೊಂಡು ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿಯು ಮುಂದಾಗಬೇಕು ಎಂದು ಒತ್ತಾಯಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
.

error: