
ಕೃಷ್ಣರಾಜಪೇಟೆ:- ನಾಲ್ಕು ದಶಕಗಳ ರೈತರ ಹೋರಾಟವು ಈಡೇರುವ ಕಾಲವು ಸನ್ನಿಹಿತವಾಗುತ್ತಿದೆ. ಕ್ಷೇತ್ರದ ಶಾಸಕರು ರಾಜ್ಯದ ಸಚಿವರಾದ ಡಾ.ನಾರಾಯಣಗೌಡರ ಅವಿರತ ಹೋರಾಟದ ಫಲವಾಗಿ 265 ಕೋಟಿ ರೂಪಾಯಿ ವೆಚ್ಚದ ಕಟ್ಟಹಳ್ಳಿ ಏತನೀರಾವರಿ ಯೋಜನೆಯು ಆರಂಭವಾಗಿರುವುದು ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ರೈತರಿಗೆ ಸಂತೋಷ ತಂದಿದೆ..
ಐದು ಅಡಿ ವ್ಯಾಸದ ಬೃಹತ್ ಪೈಪುಗಳ ಮೂಲಕ ಕಟ್ಟಹಳ್ಳಿ ಬಳಿ ಹೇಮಾವತಿ ನದಿಯ ನೀರನ್ನು ಬೃಹತ್ ಜಾಕ್ ವೆಲ್ ಮೂಲಕ ಲಿಫ್ಟ್ ಮಾಡಿ ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ತುಂಬಿಸಿ ಜನಜಾನುವಾರುಗಳಿಗೆ ಹಾಗೂ ಬೇಸಾಯಕ್ಕೆ ಅನುಕೂಲ ಮಾಡಿಕೊಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ರೈತಮುಖಂಡರು ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ…
ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊAಡAತೆ ಕಟ್ಟಹಳ್ಳಿ ಬಳಿ ಹೇಮಾವತಿ ನದಿಯ ನೀರನ್ನು ಭಾರೀ ಪಂಪುಗಳ ಮೂಲಕ ಲಿಫ್ಟ್ ಮಾಡಿ ಕೆರೆಕಟ್ಟೆಗಳನ್ನು ತುಂಬಿಸುವ ಜಾಕ್ ವೆಲ್ ಕಾಮಗಾರಿಯು ಭರದಿಂದ ಸಾಗಿದೆ..
ಬೂಕನಕೆರೆ ಹಾಗೂ ಶೀಳನೆರೆ ಹೋಬಳಿಯ ಮಳೆಯಾಶ್ರಿತ ಪ್ರದೇಶಗಳ ರೈತ ಬಾಂಧವರು ಕಟ್ಟಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿಯನ್ನು ಸ್ವಾಗತಿಸಿದ್ದು, ಆದಷ್ಟು ಜಾಗ್ರತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಕೆರೆ ಕಟ್ಟೆಗಳನ್ನು ತುಂಬಿಸುವ ಮೂಲಕ ರೈತಬಾಂಧವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ..
ಅಭಿನವ ಭಗೀರಥನಂತೆ ಹೋರಾಟ ಮಾಡಿ ರಾಜ್ಯ ಸರ್ಕಾರದಿಂದ 265 ಕೋಟಿ ವೆಚ್ಚದಲ್ಲಿ ಕಟ್ಟಹಳ್ಳಿ ಏತನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಡಾ.ನಾರಾಯಣಗೌಡ ಅವರನ್ನು ಅಭಿನಂದಿಸಿದ್ದಾರೆ..
ವರದಿ; ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ. ಮಂಡ್ಯ

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ