
ಕೃಷ್ಣರಾಜಪೇಟೆ :- ಜೀವ ಜಲವಾದ ನೀರು ಅಮೂಲ್ಯವಾದದ್ದಲ್ಲದೇ ಚಿನ್ನಕ್ಕಿಂತ ಶ್ರೇಷ್ಠವಾಗಿದೆ. ಮುಂದೆ ವಿಶ್ವದಲ್ಲಿ ಕುಡಿಯುವ ನೀರಿಗಾಗಿ ವಿಶ್ವದ ಮೂರನೇ ಮಹಾಯುದ್ಧವು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಮಾವತಿ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷ ಆರ್.ಎ.ನಾಗಣ್ಣ ಹೇಳಿದರು …
ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಹೇಮಾವತಿ ಕಛೇರಿಯಲ್ಲಿ ನಡೆದ ಮಹಾಮಂಡಲದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು…
ನೀರು ಅಮೂಲ್ಯವಾದದ್ದು ಆದ್ದರಿಂದ ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಹಿತವಾಗಿ ಮಿತವಾಗಿ ಬಳಸಬೇಕು. ಜೀವಸಂಕುಲಗಳು, ಪಶು ಪಕ್ಷಿ ಪ್ರಾಣಿಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನೀರು ಅಗತ್ಯವಾಗಿ ಬೇಕಾಗಿದೆ. ನೀರಿನ ಬಳಕೆ ಹಾಗೂ ಮಹತ್ವದ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾಮಂಡಲವು ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ರೈತ ಬಾಂಧವರು ನೀರು ಬಳಕೆದಾರರ ಸಂಘಗಳಿಗೆ ಸದಸ್ಯರಾಗುವ ಜೊತೆಗೆ ನೀರಿನ ಕರವನ್ನು ಪಾವತಿಸುವ ಮೂಲಕ ಸರ್ಕಾರದ ಕಾರ್ಯಕ್ರಮಗಳ ಯಶಸ್ಸಿಗೆ ಕೈಜೋಡಿಸಬೇಕು ಎಂದು ನಾಗಣ್ಣ ಮನವಿ ಮಾಡಿದರು..
ಮೈಸೂರಿನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಾಡಾದ ಆಡಳಿತಾಧಿಕಾರಿ ದಿವಾಕರನಾಯಕ್, ಹೇಮಾವತಿ ಜಲಾಶಯ ಯೋಜನೆಯ ಚನ್ನರಾಯಪಟ್ಟಣ ವಿಭಾಗದ ಸೂಪರಿಂಟೆAಡೆAಟ್ ಎಂಜಿನಿಯರ್ ಮಂಜುನಾಥ್, ಎಕ್ಸಿಕ್ಯುಟಿವ್ ಎಂಜಿನಿಯರ್ ಕಿಝರ್ ಅಹಮದ್, ಭೂ ಅಭಿವೃದ್ಧಿ ಅಧಿಕಾರಿಗಳಾದ ವಿಜಯಭಾರತಿ, ಹೆಚ್.ಟಿ.ಚಂದ್ರಕಲಾ, ನೋಡೆಲ್ ಅಧಿಕಾರಿಗಳಾದ ಚಂದ್ರಕುಮಾರ್, ಶ್ರೀನಿವಾಸ್, ನೀರು ಬಳಕೆದಾರರ ಸಂಘದ ನಿರ್ದೇಶಕರಾದ ಮಡವಿನಕೋಡಿ ಗಂಗಾಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜೆ.ಕುಮಾರ್, ಸಹ ಕಾರ್ಯದರ್ಶಿ ಕೆ.ಎನ್.ಲಕ್ಷ್ಮೀಶ ಕಾರ್ಯಕಾರಿ ಮಂಡಳಿಯ ನಿರ್ದೇಶಕರಾದ ಹೆಚ್.ಎನ್.ಲವಣ್ಣ, ಹೆಚ್.ರಾಜಶೇಖರ್, ಮರೀಗೌಡ, ಸಿದ್ಧೇಗೌಡ, ಪ್ರಕಾಶ್, ವಿಷ್ಣುವರ್ಧನ್, ಭೈರೇಗೌಡ, ಡಿ.ಕೆ.ಮಾದೇಗೌಡ, ಬಿ.ಕೆ.ಹೊನ್ನೇಗೌಡ ಸೇರಿದಂತೆ ನೂರಾರು ರೈತರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ