
ಕೃಷ್ಣರಾಜಪೇಟೆ :- ಹಿರಿಯ ನಾಗರೀಕರನ್ನು ಗೌರವಿಸಿ ಅವರ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಕೆ.ಆರ್.ಪೇಟೆ ಪಟ್ಟಣದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಹೇಳಿದರು …
ಅವರು ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿ ಗ್ರಾಮದ ಬಳಿ ಇರುವ ಮಾತೃಭೂಮಿ ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಅನಾಥರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ, ಸವಲತ್ತುಗಳು ಹಾಗೂ ಬಟ್ಟೆಬರೆಗಳನ್ನು ವಿತರಿಸಿ ಮಾತನಾಡಿದರು…
ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರು ಹಾಗೂ ತಂದೆತಾಯಿಗಳನ್ನು ಮಕ್ಕಳು ಜೋಪಾನವಾಗಿ ನೋಡಿಕೊಳ್ಳಬೇಕು. ತಂದೆ ತಾಯಿಗಳ ಯೋಗಕ್ಷೇಮವನ್ನು ವಿಚಾರಿಸಿ ಅವರನ್ನು ನೋಡಿಕೊಳ್ಳದೇ ಕೇವಲ ಆಸ್ತಿಗೆ ಹಣಕ್ಕೆ ಆಸೆಪಡುವ ಮಕ್ಕಳೇ ಇಂದಿನ ನಾಗರಿಕ ಸಮಾಜದಲ್ಲಿ ಹೆಚ್ಚಾಗಿದ್ದಾರೆ. ವಯಸ್ಸಾದ ತಂದೆತಾಯಿಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಕ್ಕಳ ಜವಾಬ್ಧಾರಿಯಾಗಿದೆ ಎಂದು ಹೇಳಿದ ನ್ಯಾಯಾಧೀಶರು ಹಿರಿಯ ನಾಗರಿಕರು ಸೇರಿದಂತೆ ತಂದೆತಾಯಿಗಳು ಹಾಗೂ ಮಕ್ಕಳಿಂದ ದೂರವಾಗಿ ಒಬ್ಬಂಟಿಗಳಾಗಿ ಜೀವನ ನಡೆಸುತ್ತಿರುವ ಜನರ ಆರೋಗ್ಯವನ್ನು ಕಾಪಾಡುವುದು. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಅನಾಥಾಶ್ರಮಗಳಿಗೆ ಸೇರಿಸಿ ಜೋಪಾನ ಮಾಡುವ ಕೆಲಸವನ್ನು ನಾಗರಿಕ ಸಮಾಜದ ಪ್ರತಿಯೊಬ್ಬರೂ ಮಾಡಬೇಕು ಎಂದು ನ್ಯಾಯಾಧೀಶ ಸಮೀರ್ ಪಿ.ನಂಧ್ಯಾಲ್ ಕರೆ ನೀಡಿದರು..
ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯ ಪ್ರಾಂಶುಪಾಲರಾದ ಹುದಾ ಫಾತಿಮಾ ಶಿಕ್ಷಕರು ಹಾಗೂ ಮಕ್ಕಳಿಂದ ಸಂಗ್ರಹಿಸಿದ ದೇಣಿಗೆ ಹಣ ಹಾಗೂ ಆಹಾರ ಪದಾರ್ಥಗಳನ್ನು ಮಾತೃಭೂಮಿ ಅನಾಥಾಶ್ರಮದ ವ್ಯವಸ್ಥಾಪಕ ನಾಗಣ್ಣ ಅವರಿಗೆ ಹಸ್ತಾಂತರಿಸಿದರು..
ಅಪರ ನ್ಯಾಯಾಲಯದ ನ್ಯಾಯಾಧೀಶರಾದ ಶಕುಂತಲಾ, ಕಿರಿಯಶ್ರೇಣಿ ನ್ಯಾಯಾಧೀಶರಾದ ಹೆಚ್.ಓಂಕಾರಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ತಹಶೀಲ್ದಾರ್ ಎಂ.ವಿ.ರೂಪ, ಆಚಾರ್ಯ ಶಾಲೆಯ ಆಡಳಿತಾಧಿಕಾರಿ ತಬ್ರೇಜ್ ನದೀಮ್, ವಕೀಲರ ಸಂಘದ ಪದಾಧಿಕಾರಿಗಳಾದ ಆರ್.ಕೆ.ರಾಜೇಗೌಡ, ಸಿ.ಆರ್.ಜಗಧೀಶ್, ಸಿ.ನಿರಂಜನ್, ಬಿ.ಸಿ.ದಿನೇಶ್, ಎಂ.ರಾಣಿ, ಸುಜಾತ, ಯೋಗೇಂದ್ರ, ಪ್ರಭಾಕರ್, ಸರ್ಕಾರಿ ಅಭಿಯೋಜಕ ಬಿ.ಸಿ.ರಾಜೇಶ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿರುವ 50ಕ್ಕೂ ಹೆಚ್ಚಿನ ವಯೋವೃದ್ಧರು ಹಾಗೂ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ