November 21, 2024

Bhavana Tv

Its Your Channel

ನವೆಂಬರ್ 5ಕ್ಕೆ ಕೆ.ಆರ್.ಪೇಟೆಯಲ್ಲಿ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಬೈಕ್ ಮೆರವಣಿಗೆ.

ಕೆ.ಆರ್.ಪೇಟೆ:- ರಾಜ್ಯದ ಬಿಜೆಪಿ ಸರ್ಕಾರವು ರೈತ ವಿರೋಧಿ ಸರ್ಕಾರವಾಗಿದ್ದು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿ.ಎಸ್.ಪಿ ಮುಖಂಡರು ನವೆಂಬರ್ 5 ರ ಶನಿವಾರ ಕೆ.ಆರ್.ಪೇಟೆಯಲ್ಲಿ ಬೈಕ್ ಗಳ ಮೆರವಣಿಗೆ ಹಾಗೂ ಎಸ್.ಎಂ.ಲಿAಗಪ್ಪ ಸಹಕಾರ ಭವನದಲ್ಲಿ ಸಂವಿಧಾನದ ಉಳಿವಿಗೆ ಆಗ್ರಹಿಸಿ ಬೃಹತ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ

ಸಂವಿಧಾನದ ರಕ್ಷಣೆಗಾಗಿ ಕರ್ನಾಟಕ ರಾಜ್ಯವ್ಯಾಪಿ ಜೈಭೀಮ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ನವೆಂಬರ್ 5ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಬೈಕ್ ಮೆರವಣಿಗೆ ಹಾಗೂ ಎಸ್.ಎಂ.ಲಿAಗಪ್ಪ ಸಹಕಾರ ಭವನದಲ್ಲಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್ ಹೇಳಿದರು..

ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನವೆಂಬರ್ 5 ರ ಶನಿವಾರ ಬಹುಜನ ಸಮಾಜ ಪಾರ್ಟಿಯು ಹಮ್ಮಿಕೊಂಡಿರುವ ಬೈಕ್ ಮೆರವಣಿಗೆ ಹಾಗೂ ಕಾರ್ಯಕರ್ತರ ಸಭೆ ಕುರಿತು ಮಾಹಿತಿ ನೀಡಿ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಬಹುಜನರು ಸಭೆಯಲ್ಲಿ ಭಾಗವಹಿಸುವ ಮೂಲಕ ಜಹುಜನ ಸಮಾಜ ಪಾರ್ಟಿಯ ಜನಪರ ಹೋರಾಟಕ್ಕೆ ಶಕ್ತಿತುಂಬಬೇಕು ಎಂದು ಪ್ರದೀಪ್ ಬಸ್ತಿ ಮನವಿ ಮಾಡಿದರು..

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಸರ್ಕಾರವು ಬಹುಜನರ ಹಿತವನ್ನು ಕಡೆಗಣಿಸಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದೆ. ಬಹುಸಂಖ್ಯಾತ ಹಿಂದುಗಳು ಮತ್ತು ಮುಸ್ಲಿಂ ಬಂಧುಗಳ ನಡುವೆ ವಿಷಜ್ವಾಲೆಯನ್ನು ಬಿತ್ತುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯು ದೂರಾಗಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿರುವ ಕೋಮುವಾಧಿ ಪಕ್ಷವಾದ ಬಿಜೆಪಿಯು ಜಾತಿಜಾತಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರದೀಪ್ ವಿಶ್ವಮಾನ್ಯವಾದ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಬದಲಿಗೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನದ ತಿದ್ದುಪಡಿ ಮಾಡಲು ಎಂಬ ಬೇಜವಾಬ್ಧಾರಿ ಹೇಳಿಕೆಯನ್ನು ನೀಡುತ್ತಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡದ ಬಿಜೆಪಿ ಸರ್ಕಾರವು ಜಾತಿ ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುತ್ತಾ, ಮತೀಯ ಭಾವನೆಗಳನ್ನು ಕೆರಳಿಸುತ್ತಿದೆ. ರಾಜ್ಯದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು ಬದಲಾವಣೆಯನ್ನು ಬಯಸಿದ್ದಾರೆ. ಸರ್ವ ಜನಾಂಗದ ತೋಟದ ಮಾದರಿಯಲ್ಲಿ ಹೊಂಗನಸನ್ನು ಹೊತ್ತು ರಾಜ್ಯದ ಸಮಗ್ರವಾದ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡಿರುವ ಬಹುಜನರ ಪಕ್ಷವಾದ ಬಿ.ಎಸ್.ಪಿ ಯನ್ನು ಹರಸಿ ಆಶೀರ್ವದಿಸುವ ಮೂಲಕ ಒಂದು ಅವಕಾಶ ನೀಡಬೇಕು ಎಂದು ಪ್ರದೀಪ್ ಮನವಿ ಮಾಡಿದರು..
ಬಿ.ಎಸ್.ಪಿ ಜಿಲ್ಲಾ ಉಸ್ತುವಾರಿಗಳಾದ ಚೆಲುವರಾಜು ಮಾತನಾಡಿ ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡ ಅವರು ಬಹುಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪರಿಶಿಷ್ಠ ಜಾತಿಯ ಜನರ ಮೇಲೆ ಸವರ್ಣೀಯರು ದಬ್ಬಾಳಿಕೆ ನಡೆಸಿ ದೌರ್ಜನ್ಯ ಮಾಡುತ್ತಿದ್ದರೂ ದಲಿತರ ಹಿತವನ್ನು ಕಡೆಗಣಿಸಿರುವ ಸಚಿವರು ಮೇಳಗಳು, ಜಾತ್ರೆಗಳು ಹಾಗೂ ಶಿಬಿರಗಳನ್ನು ನಡೆಸಿ ತಾಲ್ಲೂಕಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹರಿಹರಪುರ ಶಿವಕುಮಾರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: