May 4, 2024

Bhavana Tv

Its Your Channel

ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾದ ಹೆಚ್ ಟಿ ಮಂಜು ಅವರು ಆರ್ಥಿಕ ನೆರವು ನೀಡಿದರು

ನೂತನವಾಗಿ ನಿರ್ಮಿಸಲಾಗುತ್ತಿರುವ ಆನೆಗೊಳ ಗ್ರಾಮದ ದೇವಾಲಯ ಜೀರ್ಣೋದ್ಧಾರಕ್ಕೆ ಮನ್ ಮುಲ್ ನಿರ್ದೇಶಕ, ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾದ ಹೆಚ್ ಟಿ ಮಂಜು ಅವರು ಆರ್ಥಿಕ ನೆರವು ನೀಡಿದರು

ಕೆ.ಆರ್.ಪೇಟೆ ; ತಾಲೂಕಿನ ಕಿಕ್ಕೇರಿ ಹೋಬಳಿ ಆನಗೊಳ ಗ್ರಾಮದಲ್ಲಿ ಲಕ್ಷ್ಮೀದೇವಿ (ಆನಗೊಳಮ್ಮ) ದೇವಾಲಯ ನಿರ್ಮಾಣಕ್ಕಾಗಿ ಹೆಚ್ ಟಿ ಮಂಜು 50,000ರೂಗಳನ್ನು ದೇಣಿಗೆಯಾಗಿ ನೀಡಿದರು.
ಗ್ರಾಮದ ಮುಖಂಡರಾದ ನಾಗೇಂದ್ರಪ್ಪ ಮಾತನಾಡಿ ನಮ್ಮ ಆನಗೊಳ ಗ್ರಾಮದಲ್ಲಿ ನೂತನವಾಗಿ ಲಕ್ಷ್ಮೀದೇವಿ ದೇವಾಲಯವನ್ನು ಗ್ರಾಮಸ್ಥರು ಸೇರಿ ನಿರ್ಮಿಸುತ್ತಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿಗೆ ಸ್ಪಂದಿಸಿದ ಹೆಚ್ ಟಿ ಮಂಜು ಅವರು ನಮ್ಮ ಗ್ರಾಮಕ್ಕೆ ಆಗಮಿಸಿ ಅವರ ಕೈಲಾದ ಸಹಾಯವನ್ನು ಮಾಡಿದ್ದಾರೆ. ಅದ್ದರಿಂದ ಅವರಿಗೆ ಭಗವಂತ ನಮ್ಮ ತಾಲ್ಲೂಕಿಗೆ ಇನ್ನಷ್ಟು ಹೆಚ್ಚಿನ ಸಹಾಯ ಮಾಡಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಮ್ಮೂರಿನ ದೇವಾಲಯಗಳ ಬಗ್ಗೆ ಅಪಾರವಾದ ಗೌರವ,ಭಕ್ತಿ ಇರಬೇಕು. ನಾವುಗಳು ಬೇರೆ ಎಲ್ಲೆ ನೆಲಸಿದ್ದರೂ ನಮ್ಮ ಹಳ್ಳಿಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಾಗೂ ಪುನರ್ ನಿರ್ಮಾಣಕ್ಕೆ ಪಕ್ಷಾತೀತವಾಗಿ ಪಾಲ್ಗೊಂಡು ನಮ್ಮ ಕೈಲಾದ ಸೇವೆ ಹಾಗೂ ಆರ್ಥಿಕ ನೆರವನ್ನು ನೀಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು. ಏಕೆಂದರೆ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವ ಕೇಂದ್ರಗಳಾಗಿವೆ. ನಮ್ಮೆಲ್ಲರ ಕಷ್ಟಗಳು ದೂರವಾಗಿ ಸಂತೋಷ ಕೊಡುತ್ತದೆ ಎಂಬ ಭಾವನೆಯಿಂದ ದೇವಾಲಯಗಳಿಗೆ ಭೇಟಿ ನೀಡುವ ಉದ್ದೇಶವಾಗಿದೆ. ಆದ್ದರಿಂದ ಉಳ್ಳವರು ಪಕ್ಷಾತೀತವಾಗಿ ಯಾವುದೇ ಸಮುದಾಯದ ದೇವಾಲಯಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಇವರಿಗೆ ಇನ್ನೂ ಹೆಚ್ಚಿನ ರಾಜಕೀಯವಾಗಿ ಶಕ್ತಿ ನೀಡಬೇಕಿದೆ ಎಂದರು..

ಈ ಸಂದರ್ಭದಲ್ಲಿ ಜಿಲ್ಲಾ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್, ಮುಖಂಡರಾದ ಚಿಕ್ಕತರಹಳ್ಳಿ ಪರ್ವತ್, ಲಕ್ಷ್ಮೀಪುರ ಬಬ್ರು, ಬಾರೆ ಮಂಜು, ಪಾಪಣ್ಣಿ, ಪ್ರತಾಪ್ ಸೇರಿದಂತೆ ಮತ್ತಿತ್ತರರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: