May 4, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯು ಬಿ’ ಪ್ಲಸ್ ಗ್ರೇಡ್

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯು ಬಿ’ ಪ್ಲಸ್ ಗ್ರೇಡ್ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಸಂಭ್ರಮಾಚರಣೆ ನಡೆಸಿದರು …

ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಇದೇ ಪ್ರಪ್ರಥಮ ಬಾರಿಗೆ ಭಾರತ ಸರ್ಕಾರದ ನ್ಯಾಕ್ ಪೀರ್ ಸಮಿತಿಯು ಭೇಟಿ ನೀಡಿ ಕಾಲೇಜಿನ ಗುಣಮಟ್ಟದ ಅಧ್ಯಯನ ನಡೆಸಿ ಬಿ’ ಪ್ಲಸ್ ಗ್ರೇಡ್ ನೀಡಿದ್ದು ಕಾಲೇಜಿನ ಹಿರಿಮೆಯು ಬೆಳಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಕಾಲೇಜು ಅತ್ಯುತ್ತಮ ಗುಣಮಟ್ಟದ ಬೋಧನೆ ಹಾಗೂ ಶಿಕ್ಷಣದ ಜ್ಞಾನವನ್ನು ನೀಡುವ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿಯೇ ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ಖ್ಯಾತಿಗಳಿಸಿತ್ತು..

ನ್ಯಾಕ್ ಪೀರ್ ಕಮಿಟಿಯು ಕಾಲೇಜಿಗೆ ಭೇಟಿ ನೀಡಿ, ಗುಣಮಟ್ಟವನ್ನು ಅಧ್ಯಯನ ಮಾಡಿ ಇರುವ ವ್ಯವಸ್ಥೆಯಲ್ಲಿಯೇ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡಿ, ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರ ಶೈಕ್ಷಣಿಕ ವಿಕಾಸಕ್ಕೆ ನೆರವಾಗಿದೆ ಎಂಬ ಅಂಶವನ್ನು ಮನಗಂಡು ಬಿ’ಫ್ಲಸ್ ಗ್ರೇಡನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಾಂಶುಪಾಲರಾದ ಡಾ.ಟಿ.ಎಂ.ದೇವರಾಜು ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿದ ವಿದ್ಯಾರ್ಥಿನಿಯರು ಉಪನ್ಯಾಸಕರು ಹಾಗೂ ಸಹಪ್ರಾಧ್ಯಾಪಕರ ಸಂಭ್ರಮದಲ್ಲಿ ಭಾಗಿಯಾದರು..

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಐಕ್ಯುಎಸ್ ಸಿ ಸಂಚಾಲಕರಾದ ಶ್ಯಾಮ್, ಪ್ರಾಧ್ಯಾಪಕರಾದ ಮಹದೇವ್, ರೀನಾ, ಪೂರ್ಣಿಮಾ ಅಧೀಕ್ಷಕರು ಗಳಾದ ಶಿವಕುಮಾರ್, ಎಂ.ಎಸ್.ಪುರುಷೋತ್ತಮ್, ನವೀದ್, ಸಿದ್ಧೀಕ್, ಗ್ರಂಥಪಾಲಕ ಪುಟ್ಟಮಾದಪ್ಪ, ಪ್ರಾಧ್ಯಸಪಕರಾದ ಡಾ.ಪಿ.ಕೆ.ಧನಂಜಯ, ಎಸ್.ವಿನಯ್, ಕೆ.ಸಿ.ರಾಜಣ್ಣ, ಡಿ.ಆರ್.ನಾಗೇಶ್, ಚಂದ್ರು, ಮತ್ತಿತರರು ಭಾಗವಹಿಸಿದ್ದರು..

ಇದೇ ಪ್ರಥಮ ಬಾರಿಗೆ ನ್ಯಾಕ್ ಗುಣಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜು ಬಿ.ಫ್ಲಸ್ ಗ್ರೇಡ್ ಪಡೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಸಂಭ್ರಮವು ಮುಗಿಲು ಮುಟ್ಟಿತ್ತು..

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ, ಮಂಡ್ಯ

error: