May 4, 2024

Bhavana Tv

Its Your Channel

ಹಿರೀಕಳಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾರ್ಗೋನಹಳ್ಳಿ ಕಾಳಮ್ಮ ನಿಂಗೇಗೌಡ ಹಾಗೂ ಉಪಾಧ್ಯಕ್ಷರಾಗಿ ತೇಗನಹಳ್ಳಿ ಮಂಜೇಗೌಡ ಆಯ್ಕೆ

ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಹಿರೀಕಳಲೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾರ್ಗೋನಹಳ್ಳಿ ಕಾಳಮ್ಮನಿಂಗೇಗೌಡ ಹಾಗೂ ಉಪಾಧ್ಯಕ್ಷರಾಗಿ ತೇಗನಹಳ್ಳಿ ಮಂಜೇಗೌಡ ಅವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ .

ಈ ಹಿಂದೆ ಅಧ್ಯಕ್ಷರಾಗಿದ್ದ ಹಿರೀಕಳಲೆ ಮಮತ ರಘು, ಉಪಾಧ್ಯಕ್ಷರಾಗಿದ್ದ ಅಣ್ಣೇಚಾಕನಹಳ್ಳಿ ಕಾಂತರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ 20 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾರ್ಗೋನಹಳ್ಳಿ ಕಾಳಮ್ಮನಿಂಗೇಗೌಡ ಅವರು 11 ಮತಗಳು ಆಯ್ಕೆಯಾದರು.
ಹಾಗೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷಕ್ಕೆ ಮಂಜೇಗೌಡ ಮತ್ತು ಜೆಡಿಎಸ್ ರತ್ನ ಅವರು ತಲಾ 10ಮತಗಳನ್ನು ಪಡೆದರು. ಆಗ ಚುನಾವಣಾಧಿಕಾರಿಗಳು ಫಲಿತಾಂಶಕ್ಕಾಗಿ ಲಾಟರಿ ಮೊರೆ ಹೋದಾಗ ತೇಗನಹಳ್ಳಿ ಮಂಜೇಗೌಡ ಅವರಿಗೆ ವಿಜಯಲಕ್ಷ್ಮಿ ಒಲಿದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಸಹಾಯಕ ಚುನಾವನಾಧಿಕಾರಿಗಳಾಗಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಓ ನವೀನ್ ನವೀನ್, ಕಾರ್ಯದರ್ಶಿ ರವಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಕಾಳಮ್ಮನಿಂಗೇಗೌಡ ಮತ್ತು ಉಪಾಧ್ಯಕ್ಷ ಮಂಜೇಗೌಡ ಅವರನ್ನು ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ.ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್, ಪುರಸಭೆ ಮಾಜಿ ಸದಸ್ಯ ಕೆ.ವಿನೋದ್‌ಕುಮಾರ್, ಮುಖಂಡರಾದ ಹಿರೀಕಳಲೆ ಚಿಕ್ಕೇಗೌಡ, ತೇಗನಹಳ್ಳಿ ನಂಜೇಗೌಡ, ಬೆಡದಹಳ್ಳಿ ಸುನೀಲ್, ಕಾಂತರಾಜು, ಎಂ.ಹೊಸೂರು ಸೋಮಣ್ಣ, ರಾಮನಹಳ್ಳಿ ಕುಮಾರ್ ಮತ್ತಿತತರು ಅಭಿನಂದಿಸಿದ್ದಾರೆ.

ಹಿರಿಕಳಲೆ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಹೆಚ್.ಸಿ.ಮಂಜುನಾಥ್, ರತ್ನಮ್ಮ, ಸುಂದರಮ್ಮ, ಪದ್ಮಮ್ಮ, ಕಾಂತರಾಜು, ಪುಷ್ಪಲತಾ, ಎನ್.ಆರ್.ಶಿಲ್ಪಾ, ಜಯರಾಂ, ಟಿ.ಎನ್.ಮಹೇಶ್, ಮಂಜೇಗೌಡ, ರಾಜಮ್ಮ, ಮಂಜಮ್ಮ, ಶಿವಯ್ಯ, ಪಿ.ಬಿ.ಸಂತೋಷ್, ಮರಿಯಮ್ಮ, ಶಿವರಾಮೇಗೌಡ, ಭಾಗ್ಯಮ್ಮ, ಕಾಳಮ್ಮ, ಮಮತಾ, ಕಾಂತರಾಜು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಹಿರಿಕಳಲೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಳಮ್ಮನಿಂಗೇಗೌಡ ಮಾತನಾಡಿ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ಸ್ವಚ್ಚತೆ ಉದ್ಯೋಗ ಖಾತ್ರಿ ಯೋಜನೆಗಳ ಯಶಸ್ವಿ ಜಾರಿ ಸೇರಿದಂತೆ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಬಹುದಾದ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಜನತೆಗೆ ಮಾಡಿಕೊಡುವ ಶ್ರಮಿಸುವುದಾಗಿ ಭರವಸೆ ನೀಡಿದರು.

ವರದಿ: ಡಾ.ಕೆ.ಆರ್.ನೀಲಕಂಠಕೃಷ್ಣರಾಜಪೇಟೆ. ಮಂಡ್ಯ

error: