ಮಳವಳ್ಳಿ : ಒಕ್ಕಲಿಗರ ಸಂಘ ಮಳವಳ್ಳಿ ಶಾಖೆ ವತಿಯಿಂದ ನಾಡ ಪ್ರಭು ಕೆಂಪೇಗೌಡರ ೫೧೨ನೇ ಜಯಂತೋತ್ಸವವನ್ನು ಪಟ್ಟಣದ ಮೈಸೂರು ರಸ್ತೆಯಲ್ಲಿನ ಸಂಘದ ಕಛೇರಿ ಆವರಣದಲ್ಲಿ ಆಚರಿಸಲಾ ಯಿತು.
ಸಂಘದ ಮಳವಳ್ಳಿ ಶಾಖೆ ಅಧ್ಯಕ್ಷರು, ಮಾಜಿ ತಾ ಪಂ ಅಧ್ಯಕ್ಷರು ಆದ ವಿ ಎಂ ನಾಗೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಪಾಲ್ಗೊಂಡು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದ ರೊಂದಿಗೆ ಕೆಂಪೇಗೌಡ ರಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಶ್ ಅವರು ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮದ ಬದಲಾಗಿ ಕಚೇರಿಯಲ್ಲಿ ಸರಳವಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿ ಪಂ ಸದಸ್ಯರು ಸಂಘದ ನಿರ್ಧೇಶಕರು ಆದ ಬಿ ರವಿ ಅವರು ಇಡೀ ವಿಶ್ವದಲ್ಲೇ ಸಿಲಿಕಾನ್ ಸಿಇ ಎಂದು ಪ್ರಸಿದ್ಧಿ ಯಾಗಿರುವ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರ ಬದುಕು ನಮಗೆಲ್ಲ ಸ್ಪೂರ್ತಿ ಯಾಗಿದ್ದು ಅವರ ಆದರ್ಶ ದಂತೆ ಸಮೃದ್ಧ ಕನ್ನಡ ನಾಡು ಕಟ್ಟಲು ಎಲ್ಲರು ಶ್ರಮಿಸೋಣ ಎಂದು ಕರೆ ನೀಡಿದರು.
ಸಂಘದ ಉಪಾಧ್ಯಕ್ಷರಾದ ಕೆ ವಿ ಪ್ರಕಾಶ್, ಖಜಾಂಚಿ ಮಾದೇಶ, ನಿರ್ಧೇಶಕರಾದ ಬಸವೇಶ, ಪ್ರಕಾಶ, ಜಯಮ್ಮ, ರುದ್ರಸ್ವಾಮಿ, ಮುಂತಾದವರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ