May 19, 2024

Bhavana Tv

Its Your Channel

ಮಹಾರಾಷ್ಟ್ರದ ಛತ್ರಪತಿ ಸಾಹೋ ಮಹಾರಾಜ್ ಅವರ ಜನ್ಮ ದಿನಾಚರಣೆ

ಮಳವಳ್ಳಿ : ಅಖಿಲ ಕರ್ನಾಟಕ ಬೌದ್ದ ಮಹಾಸಭಾದ ಮಳವಳ್ಳಿ ಶಾಖೆ ವತಿಯಿಂದ ದೇಶದಲ್ಲೇ ಪ್ರಪ್ರಥಮವಾಗಿ ಮೀಸಲಾತಿಯ ಜನಕ ಎಂದೇ ಕರೆಯಲಾಗುವ ಮಹಾರಾಷ್ಟ್ರದ ಛತ್ರಪತಿ ಸಾಹೋ ಮಹಾರಾಜ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಪಟ್ಟಣದ ಚೇತನ್ ಕಾಂಪ್ಲೆಕ್ಸ್ ನ ಸಂಘಟನೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಬೌದ್ಧ ಮಹಾಸಭಾದ ಪದಾಧಿಕಾರಿಗಳು ಪಾಲ್ಗೊಂಡು ಸಾಹೋ ಮಹಾರಾಜ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನೆಟ್ಕಲ್ ಚೇತನ್ ಕುಮಾರ್ ಅವರು ದೇಶದಲ್ಲಿ ಮೀಸಲಾತಿ ಎಂಬ ಪದದ ಪರಿಚಯವೇ ಇಲ್ಲದ ಆ ಕಾಲದಲ್ಲಿ ತಮ್ಮ ರಾಜಾಡಳಿತದ ಪ್ರಾಂತ್ಯದಲ್ಲಿ ಶೋಷಿತ ಸಮುದಾಯಗಳಿಗೆ ಆಡಳಿತದ ಎಲ್ಲಾ ಹಂತದಲ್ಲೂ ಮೀಸಲಾತಿ ನೀಡುವ ಮೂಲಕ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದ ಮೀಸಲಾತಿ ಜನಕ ಛತ್ರಪತಿ ಸಾಹೋ ಮಹಾರಾಜ್ ಎಂದು ಬಣ್ಣಿಸಿದರು.
ಬೌದ್ಧ ಮಹಾಸಭಾದ ಮಳವಳ್ಳಿ ಶಾಖೆ ಅಧ್ಯಕ್ಷ ಶಿವಣ್ಣ ಅವರು ಮೀಸಲಾತಿ ಮೂಲಕ ಅಂಬೇಡ್ಕರ್ ರಂತಹ ದೈತ್ಯ ಪ್ರತಿಭೆಯನ್ನು ಗುರುತಿಸಿ ಅವರ ವಿದೇಶದ ವ್ಯಾಸಂಗಕ್ಕೆ ನೆರವಾಗುವುದರೊಂದಿಗೆ ಅಂಬೇಡ್ಕರ್ ಅವರನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸಾಹೋ ಮಹಾರಾಜ್ ಅವರಿಗೆ ಸಲ್ಲುತ್ತದೆ ಎಂದರು ಅವರಿಂದ ಸ್ಪೂರ್ತಿಯಾದ ಅಂಬೇಡ್ಕರ್ ಅವರು ಮೀಸಲಾತಿಯನ್ನು ದೇಶವ್ಯಾಪಿ ದೊಡ್ಡ ಆಂದೋಲನವಾಗಿ ರೂಪಿಸಿ ಜಾರಿಗೆ ತಂದು ಎಲ್ಲಾ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ನೀಡಿದರು ಎಂದು ಸ್ಮರಿಸಿದರು.
ಕಾರ್ಯಕ್ರಮ ದಲ್ಲಿ ರಾಮಚಂದ್ರ, ಮಂಜು, ಮಹೇಶ್, ಪುಟ್ಟಸ್ವಾಮಿ, ವಿಷಕಂಠ ಮೂರ್ತಿ, ಮತ್ತಿತರರು ಹಾಜರಿದ್ದರು.

error: