ಡಾ ಶ್ಯಾಮ್ ಪ್ರಸಾದ ಮುಖರ್ಜಿ ಈ ದೇಶ ಕಂಡ ಪ್ರಬುದ್ಧ ರಾಜಕಾರಣಿ ಜೊತೆಗೆ ಮಹಾನ್ ದೇಶ ಭಕ್ತರಾಗಿದ್ದರು ಎಂದು ಮೈಸೂರು ಅರಗು ಮತ್ತು ಬಣ್ಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಣೀಶ್ ಹೇಳಿದ್ದಾರೆ.
ಅವರು ಮಳವಳ್ಳಿ ಪಟ್ಟಣದ ಭಗವಾನ್ ಬುದ್ದ ಕಾಲೇಜು ಆವರಣದಲ್ಲಿ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ಮರಣಾರ್ಥ ತಾಲ್ಲೂಕು ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವೃಕ್ಷಾರೋಹಣ ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರಾಗಿ ಚಳುವಳಿಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದ ಮುಖರ್ಜಿ ಅವರು ತಮ್ಮ ಪ್ರಬುದ್ಧ ನಾಯಕತ್ವದ ಫಲವಾಗಿ ಪಶ್ಚಿಮ ಬಂಗಾಳ ಹಾಗೂ ಕಾಶ್ಮೀರ ಭಾರತದಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ವಿವರಿಸಿದರು.
ಅಂದು ಅವರು ದೂರದೃಷ್ಟಿಯನ್ನು ಇಟ್ಟಿಕೊಂಡು ಸ್ಥಾಪಿಸಿದ ಜನಸಂಘ ಇಂದು ಭಾರತೀಯ ಜನತಾ ಪಾರ್ಟಿಯಾಗಿದೆ ಎಂದು ಮಣೀಶ್ ತಿಳಿಸಿದರು. ನಮ್ಮದೇ ದೇಶದಲ್ಲಿದ್ದರೂ ಪ್ರತ್ಯೇಕ ಪ್ರಧಾನಿ, ಪ್ರತ್ಯೇಕ ಸಂವಿಧಾನ ಹೊಂದಿರುವ ಕಾಶ್ಮೀರಕ್ಕೆ ಹೋಗಲು ಪಾಸ್ ಪೋರ್ಟ್ ಕಡ್ಡಾಯಗೊಳಿಸಿದ ಕ್ರಮ ಖಂಡಿಸಿ ತಮ್ಮ ಸಾವಿರಾರು ಬೆಂಬಲಿಗರ ಜೊತೆ ಕಾಶ್ಮೀರ ಪ್ರವೇಶಿಸಿದ ಶ್ಯಾಮ್ ಪ್ರಕಾಶ್ ಮುಖರ್ಜಿ ಅವರನ್ನು ಕಾಶ್ಮೀರ ಸರ್ಕಾರ ಬಂಧಿಸಿ ಜೈಲಿನಲ್ಲಿರಿಸಿದ್ದ ವೇಳೆ ಜೈಲಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದರು.
ಅವರ ಸ್ಮರಣಾರ್ಥವಾಗಿ ಬಿಜೆಪಿ ದೇಶಾದ್ಯಂತ ವೃಕ್ಷಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಪ್ರತೀ ಮಂಡಲದಲ್ಲೂ ಹತ್ತು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಬಿಜೆಪಿ ಮುಖಂಡರು ಕಾರ್ಯಕರ್ತರು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಮುಖರ್ಜಿಯವರಿಗೆ ನಮನ ಸಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಗವಾನ್ ಬುದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾದ ಜೋಗಿಗೌಡ, ಉಪಾಧ್ಯಕ್ಷರು ಭಗವಾನ್ ಬುದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಯಮದೂರು ಸಿದ್ದರಾಜು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಎಂ ಸಿ ಕೃಷ್ಣ, ಮುಖಂಡರಾದ ಅಪ್ಪಾಜಿಗೌಡ ಸೇರಿದಂತೆ ಹಲವಾರು ಮುಖಂಡರುಪಾಲ್ಗೊAಡಿದ್ದರು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.
.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ