December 22, 2024

Bhavana Tv

Its Your Channel

ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಡಾ. ಕೆ ಅನ್ನದಾನಿ

ಮಳವಳ್ಳಿ : ಅಧಿಕಾರಿಗಳ ಹೊಣೆಗೇಡಿತನ ದಿಂದಾಗಿ ಬೆಳೆ ಸಮೀಕ್ಷೆಗೆ ಸಂಬAಧಿಸಿದAತೆ ತಾಲೂಕಿನ ರೈತರಿಗೆ ಭಾರಿ ಅನ್ಯಾಯವಾಗುತ್ತದೆ ಎಂದು ಶಾಸಕ ಡಾ. ಕೆ ಅನ್ನದಾನಿ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಅಭಿಯಾನ ೨೦೨೧-೨೨ ಕಾರ್ಯಕ್ರಮದ ಅಂಗವಾಗಿ ಕೃಷಿ ಚಟುವಟಿಕೆಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳಿಂದ ರೈತರಿಗೆ ದೊರಕುವ ಸವಲತ್ತುಗಳ ಕುರಿತ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೆಳೆ ಸಮೀಕ್ಷೆ ನಡೆಸುವ ಕಾರ್ಯಭಾರವನ್ನು ಸರ್ಕಾರ ಕೃಷಿ ಬಗ್ಗೆ ಯಾವುದೇ ಅನುಭವ ಇಲ್ಲದ ಕಂದಾಯ ಅಧಿಕಾರಿ ಗಳಿಗೆ ವಹಿಸಿದೆ. ಸದ್ಯ ನಮಗೆ ಕೆಲಸ ಕಡಿಮೆಯಾಯಿತು ಎಂದುಕೊAಡಿರುವ ಕೃಷಿ , ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಗೂ ತಮಗೂ ಸಂಬAಧ ಇಲ್ಲದಂತೆ ವರ್ತಿಸುತ್ತ ಕಂದಾಯ ಅಧಿಕಾರಿಗಳು ಕೊಡುವ ವರದಿಯನ್ನೇ ಕಾಯುತ್ತ ಕುಳಿತಿರುತ್ತಾರೆ.
ಬೆಳೆ ಸಮೀಕ್ಷೆ ನಡೆಸುವ ಕಂದಾಯ ಅಧಿಕಾರಿಗಳು ಪ್ರತೀ ಜಮೀನಿಗೆ ಖುದ್ದಾ ತೆರಳಿ ವರದಿ ತಯಾರಿಸುವ ಬದಲಾಗಿ ಗ್ರಾಮದ ಯಾರೋ ತಮ್ಮ ಹಿಂಬಾಲಕನ ಮನೆಯಲ್ಲಿ ಕುಳಿತು ಆತ ಹೇಳುವ ಸುಳ್ಳನ್ನೇ ಆಧರಿಸಿ ವರದಿ ನೀಡುತ್ತಿದ್ದು ಇದರಿಂದ ಖಾಲಿ ಬಿದ್ದಿರುವ ಜಮೀನಿನಲ್ಲಿ ಬೆಳೆ ಬೆಳೆಯಲಾ ಗಿದೆ ಎಂದೂ ಬೆಳೆ ಬೆಳೆದಿರುವ ಜಮೀನು ಖಾಲಿ ಬಿದ್ದಿದೆ ಎಂದು, ಭತ್ತ ಬೆಳೆದ ಜಮೀನಿನಲ್ಲಿ ಕಬ್ಬು ಬೆಳೆದಿದೆ ಎಂದು ಕಬ್ಬು ಬೆಳೆದ ಜಮೀನಿನಲ್ಲಿ ರಾಗಿ ಬೆಳೆದಿದೆ ಎಂದು ಸುಳ್ಳು ಸುಳ್ಳು ವರದಿ ನೀಡುತ್ತಿದ್ದು ಇದರಿಂದ ನಿಜವಾಗಿ ಬೆಳೆ ಬೆಳೆದ ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು
ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಬೆಳೆ ಸಮೀಕ್ಷೆ ನಡೆಸುವ ಕಾರ್ಯವನ್ನು ಕೃಷಿ ಅಧಿಕಾರಿಗಳಿಗೆ ವಹಿಸ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಶಾಸಕರು ರೈತರ ವಿಚಾರದಲ್ಲಿ ಇಂತಹ ತಪ್ಪುಗಳು ಮರುಕಳಿಸಿದರೆ ನಾನು ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಕಾರ್ಯಕ್ರಮ ದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು. ಉಪಾಧ್ಯಕ್ಷ ನಂದಕುಮಾರ್ , ಕೃಷಿ ಸಮಾಜದ ಅಧ್ಯಕ್ಷ ಹಾಡ್ಲಿ ತಮ್ಮಯ್ಯ, ತಾ ಪಂ ಇಒ ರಾಮಲಿಂಗಯ್ಯ, ಕೃಷಿ ಉಪ ನಿರ್ಧೇಶಕರಾದ ಶೈಲಜ, ಸಹಾಯಕ ನಿರ್ಧೇಶಕ ಪರಮೇಶ್ ಸೇರಿದಂತೆ ಹಲವಾರು ಅಧಿಕಾರಿಗಳು, ಪುರಸಭಾ ಸದಸ್ಯರು ಮತ್ತಿತರರು ಹಾಜರಿದ್ದರು.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ.

error: