April 27, 2024

Bhavana Tv

Its Your Channel

ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ

ಮಳವಳ್ಳಿ : ಪ್ರತಿಯೊಬ್ಬ ಸದಸ್ಯರಿಗೆ ರೋಟರಿ ಸಂಸ್ಥೆ ಕನ್ನಡಿ ಇದ್ದಂತೆ, ನಮ್ಮ ವ್ಯಕ್ತಿತ್ವವನ್ನು ನಮಗೆ ಪರಿಚಯಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ರೋಟರಿ ಸಂಸ್ಥೆಯ ವಲಯ ಗರ್ವನರ್ ಆದ ಹೊನ್ನೇಗೌಡ ಹೇಳಿದ್ದಾರೆ.
ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಆಯೋಜಿಸ ಲಾಗಿದ್ದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿ ಜೊತೆಗೆ ರೋಟರಿ ಸಂಸ್ಥೆಯ ನೂತನ ವರ್ಷದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಸೇವಾ ಗುಣಗಳು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಇನ್ನಷ್ಟು ವಿಕಸನಗೊಳಿಸಲಿದ್ದು ಸಮುದಾಯದ ಸೇವೆಯೇ ಮೂಲ
ಗುರಿಯಾಗಿಸಿ ಕೊಂಡಿರುವ ಅಂತರ ರಾಷ್ಟ್ರೀಯ ರೋಟರಿ ಸಂಸ್ಥೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಬೆಳೆಸುವುದರ ಜೊತೆಗೆ ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಬೆಳೆಸುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಗೆ ೨೦೨೧ನೇ ವರ್ಷ ಸದಸ್ಯತ್ವ ಆಂದೋಲನದ ವರ್ಷವಾಗಿದ್ದು ಇದರ ಅಂಗವಾಗಿ ಮಂಡ್ಯ ಜಿಲ್ಲೆಯಲ್ಲಿ ೨೦೨೧ ಮಂದಿ ಹೊಸ ಸದಸ್ಯರನ್ನು ಸೇರ್ಪಡೆ ಗೊಳಿಸುವ ಗುರಿ ಹೊಂದಲಾಗಿದ್ದು ಇದಕ್ಕೆ ಪ್ರತಿಯೊಬ್ಬ ಸದಸ್ಯರು ಕೈ ಜೋಡಿಸಬೇಕೆಂದು ಕರೆ ನೀಡಿದರು.
ಮಳವಳ್ಳಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮಹಮದ್ ಜಬೀಉಲ್ಲಾ, ಕಾರ್ಯದರ್ಶಿಯಾಗಿ ಎಂ ನಾಗರಾಜು ಅವರುಗಳು ಅಧಿಕಾರ ಸ್ವೀಕರಿಸಿದರು. ಜೊತೆಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಆಯ್ದ ೯ ಸರ್ಕಾರಿ ಪ್ರೌಢಶಾಲೆಗಳಿಗೆ ರೋಟರಿ ಸಂಸ್ಥೆ ವತಿಯಿಂದ ವಿಜ್ಞಾನ ವಿಭಾಗದ ಪರಿಕರಗಳನ್ನು ವಿತರಿಸುವುದರ ಜೊತೆಗೆ ಕೋವಿಡ್‌ಗೆ ಬಲಿಯಾದ ರೋಟರಿ ಶಾಲೆಯ ಬಸ್ ಚಾಲಕ ಶ್ರೀಕಾಂತ್ ಅವರ ಪತ್ನಿ ಲಕ್ಷ್ಮಿ ಅವರಿಗೆ ೧೦ ಸಾವಿರ ರೂಗಳ ಚೆಕ್ ವಿತರಿಸಲಾಯಿತು.
ಸಮಾರಂಭದಲ್ಲಿ ಸಹಾಯಕ ಜಿಲ್ಲಾ ಗೌರ್ನರ್ ಪ್ರಶಾಂತ್, ನಿರ್ಗಮಿತ ಅಧ್ಯಕ್ಷ ಮಹಮದ್ ಆಲಿಖಾನ್, ಎಂ ಜೆ ಸುರೇಶ್, ರೋಟರಿ ಶಾಲಾ ಅಧ್ಯಕ್ಷ ಗೌತಮ್ ಚಂದ್, ಘನ್ ಶ್ಯಾಮ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

error: