ಮಳವಳ್ಳಿ : ಮಳವಳ್ಳಿ ಪಟ್ಟಣದ ಆಶ್ರಯ ಬಡಾವಣೆಯ ೧೪ ಎಕರೆ ಜಾಗದಲ್ಲಿ ಈಗಾಗಲೇ ನಿವೇಶನ ಹಂಚಿಕೆ ಮುಗಿದಿದ್ದು ಈ ಬಡಾವಣೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಫಲಾನು ಭವಿಗಳು ಮನೆಗಳನ್ನು ನಿರ್ಮಿಸಿ ಕೊಳ್ಳಲು ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಡಾ. ಕೆ ಅನ್ನದಾನಿ ಹೇಳಿದ್ದಾರೆ. ಪಟ್ಟಣದ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು ೪೬ ಲಕ್ಷ ರೂ ವೆಚ್ಚದಲ್ಲಿ ಪಟ್ಟಣದ ಎಲ್ಲಾ ೨೩ ವಾಡ್೯ ಗಳಲ್ಲಿ ರಸ್ತೆ ಮತ್ತು ಸಿ ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಈಗಾಗಲೇ ಈ ಬಡಾವಣೆಗೆ ಕುಡಿಯುವ ನೀರು ಸರಬರಾಜು ಸಂಪರ್ಕ ಕಲ್ಪಿಸಲು ೫ ಕೋಟಿ ರೂ ಬಿಡುಗಡೆ ಯಾಗಿದ್ದು ಇಷ್ಟರಲ್ಲೇ ಕಾಮಗಾರಿಗೆ ಚಾಲನೆ ನೀಡುವುದ ಜೊತೆಗೆ ಈ ಬಡಾವಣೆಗೆ ಮೂಲ ಸೌಕರ್ಯ ಒದಗಿಸಲು ಸಚಿವ ವಿ ಸೋಮಣ್ಣ ಅವರು ೨ ಕೋಟಿ ರೂ ಮಂಜೂರು ಮಾಡಿದ್ದು ಈ ಹಣ ಬಳಸಿಕೊಂಡು ಬಡಾವಣೆ ಗೆ ಅಗತ್ಯ ಸೌಕರ್ಯ ಒದಗಿಸ ಲಾಗುವುದು ಎಂದು ತಿಳಿಸಿದರು.
ಒಳಚರಂಡಿ ಮಂಡಳಿಯಿoದ ಪಟ್ಟಣಕ್ಕೆ ಒಟ್ಟು ೪೦೦ ಮನೆಗಳು ಮಂಜೂರಾಗಿದ್ದು ಈಗಾಗಲೇ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು ಇದರ ಜೊತೆಗೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ೩೩ ಎಕರೆ ನಿವೇಶನದ ಜಮೀನಿನ ರೈತರ ಜೊತೆ ಚೆರ್ಚಿಸಿ ಹಂಚಿಕೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಮುಖ್ಯಾಧಿಕಾರಿ ಪವನ್ ಕುಮಾರ್, ಸೇರಿದಂತೆ ಹಲವಾರು ಪುರಸಭಾ ಸದಸ್ಯರು, ಮುಖಂಡರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ