December 22, 2024

Bhavana Tv

Its Your Channel

ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಾಸಕ ಡಾ ಕೆ ಅನ್ನದಾನಿ ಚಾಲನೆ

ಮಳವಳ್ಳಿ : ಒಂದು ಕೋಟಿ ೯೦ ಲಕ್ಷ ರೂ ವೆಚ್ಚದಲ್ಲಿ ಮಳವಳ್ಳಿ ತಾಲ್ಲೂಕಿನ ಏಳು ಗ್ರಾಮಗಳ ಮನೆ ಮನೆಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಾಸಕ ಡಾ ಕೆ ಅನ್ನದಾನಿ ಚಾಲನೆ ನೀಡಿದರು.
ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು ಈ ಗ್ರಾಮದ ೧೬೯ ಮನೆಗಳಿಗೆ ಸುಮಾರು ೩೯ ಲಕ್ಷ ರೂ ವೆಚ್ಚದಲ್ಲಿ ನಲ್ಲಿ ಸಂಪರ್ಕ ಕಲ್ಪಿಸ ಸಾಗುವುದು ಎಂದು ತಿಳಿಸಿದರು.
ಈವರೆವಿಗೂ ಸಾರ್ವಜನಿಕ ನಲ್ಲಿ ತೊಂಬೆಗಳ ಬಳಿ ನೀರಿಗಾಗಿ ಮಹಿಳೆಯರು ಗಂಟೆ ಗಟ್ಟಲೆ ಕಾಯುವ ಸ್ಥಿತಿ ಇತ್ತು ,ಆದರೆ ಜೆ ಜೆ ಎಂ ಯೋಜನೆಯಿಂದಾಗಿ ನೇರವಾಗಿ ಗ್ರಾಮೀಣ ಭಾಗದ ಮನೆಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು ಗ್ರಾಮಗಳ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಇದರ ಜೊತೆಗೆ ದೊಡ್ಡಬೂವಳ್ಳಿ, ಕಗ್ಗಳ, ಸೂರ್ಕಹಳ್ಳಿ, ಬಳ್ಳಗೆರೆ, ಹಾಲಗಟ್ಟಿ ಕೊಪ್ಪಲು, ಹಾನವಾಡಿ ಗ್ರಾಮಗಳಲ್ಲಿ ಸಹ ಜೆಜೆಎಂ ಯೋಜನೆಗೆ ಶಾಸಕ ಅನ್ನದಾನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಅಭಿಯಂತರ ಅಶೋಕ್, ಗುತ್ತಿಗೆದಾರ ಶಂಕರೇಗೌಡ, ಸೇರಿದಂತೆ ಗ್ರಾ ಪಂ ಸದಸ್ಯರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು
ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: