April 26, 2024

Bhavana Tv

Its Your Channel

ಕರೋನಾ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯಕ್ರಮ

ಮಂಡ್ಯ ನಿವೃತ ಶಿಕ್ಷಕ ಕೆ ಮಾಯಿಗ ಶೆಟ್ಟಿ ಸೇವಾ ಸಮಿತಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಪ್ರವಾಸಿತಾಣ ಮಂಡ್ಯ ಪತ್ರಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ನಗರದ ಗುತ್ತಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಗುತ್ತಲು ಪ್ರಾಥಮಿಕ ಆರೋಗ್ಯ ಕೇಂದ್ರದ ಕೋವಿಡ್ ವಾರಿಯರ್ಸ್ಗಳನ್ನು ಮತ್ತು ವಿವಿಧ ಸಮಾಜ ಸೇವಕರನ್ನು ಅಭಿನಂದಿಸಲಾಯಿತು ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಹಾಗೂ ನಿವೃತ್ತ ಶಿಕ್ಷಕ ಕೆ ಮಾಯಿಗ ಶೆಟ್ಟಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಂ ಲೋಕೇಶ್ ಮಾತನಾಡಿ ಗುತ್ತಲು ಭಾಗದಲ್ಲಿ ಕೋವಿಡ್ ಸಂದರ್ಭದಲ್ಲಿ ತಮ್ಮೆಲ್ಲರ ಸೇವೆ ಬಹಳ ಅನನ್ಯವಾಗಿದೆ ಹಾಗಾಗಿ ತಮ್ಮಗಳನ್ನು ಅಭಿನಂದಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದರು ಉದ್ಘಾಟನಾ ಭಾಷಣವನ್ನು ಚಿದಂಬರ್ ರಾಜ್ಯ ಉಪಾಧ್ಯಕ್ಷರು ಕಾ.ರ. ವೆ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಎಲ್ಲಾ ವಾರಿಯರ್ಸ್ಗಳು ತಮ್ಮಜೀವದ ಹಂಗನ್ನು ತೊರೆದು ಉತ್ತಮ ಸೇವೆ ಸಲ್ಲಿಸಿದರು ಹಾಗಾಗಿ ತಮ್ಮ ಸೇವೆಯ ನಿರಂತರವಾಗಿರಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಇಂತಹ ಪ್ರೋತ್ಸಾಹಿಸುವಂತದು ಮತ್ತು ಅಭಿನಂದಿಸುವ ಅಂತದ್ದು ಸಮಾಜದಲ್ಲಿ ಸಂಘ-ಸAಸ್ಥೆಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು ನಂತರ ಪ್ರೇಮ ಹಂದೆ ಮಾತನಾಡಿ ತಮ್ಮೆಲ್ಲರ ಸೇವೆ ಬಹಳ ಪ್ರಮುಖವಾಗಿದೆ ನಿಮಗೆಲ್ಲ ಶುಭವಾಗಲಿ ಎಂದು ತಿಳಿಸಿದರು ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾಕ್ಟರ್ ತಾಲೂಕು ವೈದ್ಯಾಧಿಕಾರಿಗಳಾದ ಜವರೇಗೌಡರು ಕೋವಿಡ್ ಬಂದಾಗಿAದ ವೈದ್ಯರ ಸೇವೆ ಆರೋಗ್ಯ ಇಲಾಖೆ ಸೇವೆ ಬಹಳ ಪ್ರಮುಖವಾಗಿ ಸೇವೆ ಸಲ್ಲಿಸಿದೆ ಅದರಂತೆ ಸಂಘ-ಸAಸ್ಥೆಗಳು ಮತ್ತು ಜನಪ್ರತಿನಿಧಿಗಳು ನಮ್ಮೆಲ್ಲರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಹಾಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿ ಮೂರನೇ ಅಲೆಗೆ ಯಾರು ಸಹ ಹೆದುರುಕೊಳ್ಳಬಾರದು ಬಹಳ ಜಾಗರೂಕತೆಯಿಂದ ಕೆಲಸ ನಿರ್ವಹಿಸೋಣ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು ನಂತರ ವಾರಿಯರ್ಸ್ ಗಳನ್ನು ಮತ್ತು ಸಮಾಜ ಸೇವಕರನ್ನು ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಶೇಖರ್ ಹೊಸಳ್ಳಿ ಯುವ ಮುಖಂಡವರ ಜನ್ಮದಿನವನ್ನು ಆಚರಿಸಿ ಕೇಕ್ ಕತ್ತರಿಸಿ ಎಲ್ಲರಿಗೂ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಕೆಬಿ ಜವರೇಗೌಡ ಎಂ ಲೋಕೇಶ ಚಿದಂಬರA ಡಾಕ್ಟರ್ ಚಂದ್ರಶೇಖರ್ ಶೇಖರ್ ಪ್ರೇಮ ಹಂದೆ ಶ್ರೀಮತಿ ಜಯಲಕ್ಷ್ಮಿ ಮತ್ತು ಸುಂಡಹಳ್ಳಿ ಗಂಗಾಧರ್ ಸುಮಿತ್ರ ಪುಟ್ಟಸಿದ್ದಮ್ಮ ಮಲ್ಲಿಕಾರ್ಜುನ್ ವನಿತಾ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು ಪ್ರಕಟನೆಗಾಗಿ

ವರದಿ: ಲೋಕೇಶ ಮಳವಳ್ಳಿ

error: