December 22, 2024

Bhavana Tv

Its Your Channel

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಖಂಡಿಸಿ ಪ್ರಾಂತ ರೈತ ಸಂಘದಿoದ ಪ್ರತಿಭಟನೆ

ಮಳವಳ್ಳಿ : ಕೃಷಿ ವಿರೋಧಿ ಕಾಯ್ದೆ ವಿರುದ್ದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ದಲ್ಲಾಳಿಗಳ ಹೋರಾಟ ಎಂದು ಜರಿದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಇಂದು ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಇಲ್ಲಿನ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು ಶೋಭಾ ಕರಂದ್ಲಾಜೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಅವರು ಕಾರ್ಪೊರೇಟ್ ಕಂಪನಿಗಳ ಹಣ ಸಹಾಯದಿಂದಲೇ ಅಧಿಕಾರಕ್ಕೆ ಬಂದಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ದವ ಸರ್ಕಾರ ಕೃಷಿ ವಲಯಕ್ಕೆ ಮಾರಕವಾದ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಪೊರೇಟ್ ಕಂಪನಿಗಳ ಸಿಇಓ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನಿ ಅವರು ಈ ಕಂಪನಿಗಳಿಗೆ ನೆರವಾಗುವ ಸಲುವಾಗಿ ಕೃಷಿ ವಲಯಕ್ಕೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಇದನ್ನು ವಿರೋಧಿಸಿ ಕಳೆದ ಆರು ತಿಂಗಳಿAದ ದೆಹಲಿಯಲ್ಲಿ ರೈತರು ಐತಿಹಾಸಿಕವಾದ ಹೋರಾಟ ನಡೆಸುತ್ತಿದ್ದು ಈ ಹೋರಾಟದಲ್ಲಿ ೬೦ ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು ಈ ಹೋರಾಟವನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದು ತಿಳಿಸಿದರು.
ಇಂತಹ ಅಭೂತಪೂರ್ವ ಹೋರಾಟವನ್ನು ದಲ್ಲಾಳಿಗಳ ಹೋರಾಟ ಎಂದಿರುವ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.
ಎAದೂ ಸಹ ಜನಪರ ಹೋರಾಟ ನಡೆಸದ ಬ್ರಿಟಿಷ್ ರ ಬ್ರೋಕರ್ ಆಗಿದ್ದ ಬಿಜೆಪಿ ಯವರು ರೈತ ಚಳುವಳಿಸ್ಥಾನಕ್ಕೆ ಬ್ರೋಕರ್ ಗಳು ಎಂದು ಕರೆದಿರುವುದು ಖಂಡನೀಯ ವಾಗಿದ್ದು ಈ ಕೂಡಲೇ ಸಚಿವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿ ಪಂ ಸದಸ್ಯರಾದ ಎಂ ಎನ್ ಜಯರಾಜು, ದಲಿತ ಸಂಘರ್ಷ ಸಮಿತಿಯ ಯತೀಶ್, ಟಿಎಪಿಸಿಎಂಎಸ್ ನಿರ್ಧೇಶಕರಾದ ಲಿಂಗರಾಜು, ಸಂಘಟನೆಯ ಮುಖಂಡರಾದ ಲಿಂಗರಾಜಮೂರ್ತಿ ಆನಂದ್ ಮತ್ತಿತರರು ಪಾಲ್ಗೊಂಡಿದ್ದರು.

ರದಿ: ಮಲ್ಲಿಕಾರ್ಜುನ ಸ್ವಾಮಿಒ ಮಳವಳ್ಳಿ

error: