December 20, 2024

Bhavana Tv

Its Your Channel

ಜಮೀನಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಕೃಷಿಕ

ಮಳವಳ್ಳಿ : ಕೃಷಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕನೋರ್ವ ಕೆಲಸ ನಿರ್ವಹಿಸುತ್ತಿದ್ದಾಗಲೇ ಜಮೀನಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಯೊಂದು ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಗಿಬೊಮ್ಮನಹಳ್ಳಿ ಗ್ರಾಮದ ವಾಸಿಯಾದ ಕುಮಾರ್ ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದು ೩೮ ವರ್ಷ ವಯಸ್ಸಿನ ಇವರು ಹೃದಯ ಸಂಬAಧಿ ಕಾಯಿಲೆ ಯಿಂದ ಬಳಲುತ್ತಿದ್ದು ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು ಎಂದು ಗೊತ್ತಾಗಿದೆ.
ಹೀಗಿದ್ದರೂ ಸಹ ಬಡವನಾದ ಈತ ತನ್ನ ಕುಟುಂಬದ ನಿರ್ವಹಣೆ ಗಾಗಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದು ಇಂದು ಬೆಳಿಗ್ಗೆ ಸಹ ಗ್ರಾಮದ ಜಮೀನೊಂದರ ಭತ್ತದ ನಾಟಿ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ.
ಯಂತ್ರದ ಮೂಲಕ ನೇರವಾಗಿ ಭತ್ತವನ್ನು ನಾಟಿ ಮಾಡುವ ವೇಳೆ ಬೆಳಿಗ್ಗೆ ೧೧ಗಂಟೆ ಸಮಯವನ್ನು ಇದ್ದಕ್ಕಿದ್ದಂತೆ ನೀರಿನ ಗದ್ದೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ರೆಂದು ವರದಿಯಾಗಿದೆ.
ಮೃತ ಕುಮಾರ್ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು ಬದುಕಿಗೆ ಆಧಾರವನ್ನೇ ಕಳೆದುಕೊಂಡ ಬಡ ಕುಟುಂಬ ಕಂಗಾಲಾಗಿದೆ.
ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: