May 2, 2024

Bhavana Tv

Its Your Channel

ತೆರವು ಕಾರ್ಯಾಚರಣೆಯನ್ನು ಮುಂದೂಡಿಕೆ ಕ್ರಮ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಪಂಚಾಯಿತಿ ಕಚೇರಿಗೆ ಬೀಗ

ಮಳವಳ್ಳಿ: ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ಹಳ್ಳಿಸಂತೆ ನಿರ್ಮಾಣ ಸಂಬAಧ ಪೆಟ್ಟಿಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಮುಂದೂಡಿಕೆ ಮಾಡಿರುವ ಕ್ರಮ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಪಂಚಾಯಿತಿ ಮುಂಭಾಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಸ್.ಪ್ರಮೀಳಾ ನೇತೃತ್ವದಲ್ಲಿ ಇತರೆ ಆರು ಮಂದಿ ಸದಸ್ಯರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ನಿಗದಿಯಾಗಿರುವ ಸ್ಥಳದಲ್ಲಿಯೇ ಹಳ್ಳಿಸಂತೆ ನಿರ್ಮಾಣವಾಗಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ಹಾಗೂ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಉಪಾಧ್ಯಕ್ಷೆ ಎಸ್.ಪ್ರಮೀಳಾ ಮಾತನಾಡಿ, ಪಂಚಾಯಿತಿ ಮುಂಭಾಗದ ಖಾಲಿ ನಿವೇಶನದಲ್ಲಿ ಎಪಿಎಂಸಿ ವತಿಯಿಂದ ೫೦ ಲಕ್ಷ ರೂ.ವೆಚ್ಚದಲ್ಲಿ ಹಳ್ಳಿಸಂತೆ ನಿರ್ಮಾಣಕ್ಕೆ ಬಿಜಿಪುರ ಗ್ರಾಮದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕ ಡಾ.ಕೆ.ಅನ್ನದಾನಿ ಅವರು ಕೆಲ ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿದರು. ಆದರೆ ಖಾಲಿ ನಿವೇಶನದಲ್ಲಿ ಇರುವ ಪೆಟ್ಟಿಅಂಗಡಿಗಳನ್ನು ತೆರವು ಮಾಡಲು ಮಂಗಳವಾರ ಕಾರ್ಯಾಚರಣೆಗೆ ಸಮಯ ನಿಗದಿಯಾಗಿತ್ತು. ಅಧಿಕಾರಿಗಳ ಮೇಲೆ ಶಾಸಕರು ಒತ್ತಡ ಹೇರಿ ಉದ್ದೇಶಪೂರ್ವಕವಾಗಿ ಮುಂದೂಡಿಕೆ ಮಾಡಿಸಿದ್ದು, ತೆರವು ಮಾಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸದಸ್ಯೆ ರಜನಿ ಮಾತನಾಡಿ, ಎರಡು ಬಾರಿ ಪಂಚಾಯಿತಿಯಿAದ ಹಳ್ಳಿಸಂತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಅಲ್ಲಿನ ಪೆಟ್ಟಿಅಂಗಡಿಗಳ ತೆರವಿಗೆ ನಾಲ್ಕು ಬಾರಿ ಸಮಯ ನಿಗದಿ ಮಾಡಿ ಯಾವುದೇ ಕಾರಣ ನೀಡದೇ ಮುಂದೂಡಿಕೆ ಮಾಡಲಾಗಿದೆ. ಸೋಮವಾರ ನಮಗೆ ಕರೆ ಮಾಡಿ ಅಧಿಕಾರಿಗಳು ಮಂಗಳವಾರ ತೆರವು ಕಾರ್ಯಾಚರಣೆ ಇದೆ ಎಂದು ಮಾಹಿತಿ ನೀಡಿದರು. ಆದರೆ ಬೆಳಿಗ್ಗೆ ಬಂದರೆ ಮುಂದೂಡಿಕೆಯಾಗಿದೆ ಎನ್ನುತ್ತಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ, ದ್ವಂದ್ವ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ತಾ.ಪಂ.ಯೋಜನಾಧಿಕಾರಿ ದೀಪು, ಪಿಡಿಒ ಸಿದ್ದರಾಜು ಅವರಿಂದ ಮಾಹಿತಿ ಪಡೆದು ಹಬ್ಬದ ಹಿನ್ನಲೆಯಲ್ಲಿ ೩-೪ ದಿನಗಳ ಕಾಲ ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆ ಮುಂದೂಡಿಕೆ ಮಾಡಲಾಗಿದೆ ಎಂದು ಸದಸ್ಯರ ಮನವೊಲಿಕೆಗೆ ನಡೆಸಿದ ಯತ್ನ ವಿಫಲವಾಯಿತು. ಸ್ಥಳಕ್ಕೆ ತಾ.ಪಂ.ಇಒ ಬಂದು ಸ್ಪಷ್ಟ ಉತ್ತರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸದಸ್ಯರಾದ ಕೋಮಲಾ, ಅನಿತಾ, ಶಿವರುದ್ರಸ್ವಾಮಿ, ಜಯರಾಮು, ಮಂಚೇಗೌಡ, ಮುಖಂಡರಾದ ಕೃಷ್ಣ, ಎಚ್.ಬಿ.ನಾಗರಾಜು, ರವಿ, ಮಹೇಶ್, ಸ್ವಾಮಿ, ವೀರೇಗೌಡ, ಮಂಚೇಗೌಡ, ರವಿ ಸೇರಿದಂತೆ ಹಲವರು ಇದ್ದರು.

ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: