ಮಳವಳ್ಳಿ : ಬಾಳೆ ಬೆಳೆದು ಬಾಳನ್ನ ಬಂಗಾರ ಮಾಡಿಕೊಳ್ಳಲು ಹೊರಟ ರೈತನ ಮನೆ ಹಾಳಾಗಿದೆ ಇವರ ಗೋಳನ್ನ ಯಾರು ಕೇಳುತ್ತಿಲ್ಲ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆಲ್ಲ ಬರಿ ಓಳು. ಮನುಷ್ಯತ್ವ ಇದ್ದರೆ ಈಗಲಾದರು ಕೇಳಿ ರೈತರ ಗೋಳು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದ್ದಾರೆ
ಒಂದು ಎಕರೆ ಬಾಳೆ ಬೆಳೆಯಲು ಕನಿಷ್ಠ ಎಪ್ಪತ್ತೈದು ಸಾವಿರದಿಂದ ಒಂದು ಲಕ್ಷ ಖರ್ಚಾಗುತ್ತದೆ, ಬಾಳೆ ಸಸಿಗಳನ್ನ ಬೆಂಗಳೂರುನಿAದ ಒಂದು ಸಸಿಗೆ ಹದಿನೈದು ಇಪ್ಪತ್ತು ರೂಗಳನ್ನ ಕೊಟ್ಟು ತಂದು ನಾಟಿ ಮಾಡಬೇಕು, ಎಕರೆಗೆ ಸಾವಿರದ ಇನ್ನೂರು ಸಸಿಯಂತೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂ ಸಸಿಗಳಿಗೆ ಖರ್ಚಾಗುತ್ತದೆ ಹನ್ನೊಂದರಿAದ ಹನ್ನೆರಡು ತಿಂಗಳು ಗಿಡ ಬೆಳೆಸಿ ಉತ್ತಮ ಗೋನೆ ಬಂದಿದ್ದರು ಕೊಂಡು ಕೊಳ್ಳುವವರಿಲ್ಲದೆ ಹಣ್ಣುಗಳು ಕೊಳತೆ ಬೀಳುತ್ತಿವೆ ಮಾರುಕಟ್ಟೆಯಲ್ಲಿ ಕೆಜಿಗೆ ಇಪ್ಪತ್ತು ರೂಗಳಿಗೆ ಮಾರಾಟ ಮಾಡುತ್ತಿದ್ದರು. ಹಾಪ್ ಕಮ್ಸ್ ನಲ್ಲಿ ಕೆಜಿ ಬಾಳೆ ಹಣ್ಣಿಗೆ ಏಳೆಂಟು ರೂಪಾಯಿಗಳ ಬೆಲೆ ಇದ್ದರು. ನಮ್ಮ ಹತ್ತಿರ ಕೇವಲ ಮೂರು ನಾಲ್ಕು ರೂಪಾಯಿಗಳಿಗೆ ಕೇಳುತ್ತಾರೆ ಅದನ್ನು ಬೇಗ ಬಂದು ಕಡಿದು ಕೊಳ್ಳುವುದಿಲ್ಲ ಹಾಗಾಗಿ ಉಚಿತವಾಗಿ ಜನರಿಗೆ ಕೊಟ್ಟು ಬಿಟ್ಟಿದ್ದೇವೆ ಎನ್ನುತ್ತಾರೆ ಕಿರಗಸೂರಿನ ಪ್ರವೀಣ್ . ಕೆಪಿ ದ್ರುವ . ರವಿ ಎಂಬ ಬಾಳೆ ಬೆಳೆಗಾರರು.
ನೆಲಮಾಕನಹಳ್ಳಿಯ ಎನ್ ಟಿ ಮಲ್ಲೇಶ್ ಎಂಬ ರೈತ ಹಣ್ಣು ಬೆಳೆದು ನಮ್ಮ ಬಾಳು ಹುಣ್ಣಾಗಿದೆ ರೈತನ ಬಾಳು ಮಣ್ಣಾಗಿದೆ ಬಾಳೆ ಪಪ್ಪಾಯಿ ಯಾರು ಕೇಳುತ್ತಿಲ್ಲ ಕೊಳೆತು ಬೀಳುತ್ತವೆ ಮಾಡಿದ ಖರ್ಚು ಇಲ್ಲ , ಸರ್ಕಾರಗಳು ಧನ ಸಹಾಯ. ನಷ್ಟ ಪರಿಹಾರವನ್ನ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ನೀಡಬೇಕು ಐದತ್ತು ಎಕರೆ ಜಮೀನು ವ್ಯವಸಾಯ ಮಾಡುವ ಬದಲು ವಾಚ್ ಮ್ಯಾನ್ ಕೆಲಸ ಉತ್ತಮ ಅನ್ನಿಸಿ ಬಿಟ್ಟಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು
ಚುನಾವಣೆ ಸಂದರ್ಭದಲ್ಲಿ ನಾನು ರೈತನ ಮಗ ಮಣ್ಣಿನ ಮಗ ಎಂದು ಬುರುಡೆ ಬಿಡುವ ರಾಜಕಾರಣಿಗಳು ಇಂದು ರೈತ ಸಂಕಷ್ಟ ದಲ್ಲಿದ್ದರು ಕೇಳುವವರು ಯಾರು ಇಲ್ಲ ರೈತ ಸಾಲಗಾರನಾಗಿ ಸತ್ತಾಗ ನಾಟಕೀಯವಾಗಿ ಪರಿಹಾರ ಕೊಟ್ಟು ಲಾಭ ಮಾಡಿಕೊಳ್ಳಲು ಯತ್ನಿಸುವ ಕಪಟಿಗಳಿದ್ದಾರೆ, ಅಧಿಕಾರಿಗಳಿಗೆ ತಿಂಗಳ ಸಂಬಳ ಕಮಿಶನ್ ಕಲೆಕ್ಷನಲ್ಲೆ ಕಾಲಕಳೆಯುತ್ತಾರೆ ಜನಪ್ರತಿನಿದಿಗಳು. ಗುದ್ದಲಿ ಪೂಜೆ. ಗುಡಿ ಪೂಜೆ. ಕಮಿಷನ್. ಕಲೆಕ್ಷನ್. ಎಲೆಕ್ಷನ್ .ಸೆಲೆಕ್ಚನ್ .ಗೆ ಶೀಮಿತವಾಗಿದ್ದಾರೆ ಬೆಂಬಲ ಬೆಲೆಗಾಗಿ ಹೋರಾಟವಿಲ್ಲ. ರಾಜಕಾರಣಿಗಳ. ಡೊಂಗಿತನ. ಅಧಿಕಾರಿಗಳ ಗೋಸುಂಬೆತನದ ವಿರುದ್ದ ರೈತರು ಹೋರಾಟಕ್ಕೆ ಇಳಿಯಬೇಕು ಪುಡಗಾಸು ಪರಿಹಾರಕ್ಕಾಗಿ ಲಂಚ ನೀಡಬೇಕು ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಮುಲಾಜಿಲ್ಲದೆ ಹೇಳುತ್ತಾರೆ ನಾನು ಲಂಚಕೊಟ್ಟೆ ಈ ಹುದ್ದೆಗೆ ಬಂದಿರೋದು ಎಂದು ಅಲ್ಪ ಸ್ವಲ್ಪ ಮನುಷ್ಯತ್ವ ಇದ್ದರೆ ಇವರ ಗೋಳನ್ನ ಆಲಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ