December 22, 2024

Bhavana Tv

Its Your Channel

ಅರಣ್ಯ ಇಲಾಖೆಯ ವಿರುದ್ದ ಕಾಡಂಚಿನ ಗ್ರಾಮಗಳ ರೈತರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿOದ ಸೋಮವಾರ ಪ್ರತಿಭಟನೆ

ಮಳವಳ್ಳಿ : ಆನೆ ದಾಳಿ. ಹಂದಿ ಕೂಳೆ. ಕಾಡು ಪ್ರಾಣಿಗಳ ದಾಳಿಯನ್ನು ತಡೆಗಟ್ಟಿ ರೈತರ ಬೆಳೆಗಳ ರಕ್ಷಸಿ ಅನ್ನದಾತನ ಕಾಪಾಡಲು ವಿಪಲವಾಗಿರುವ ಅರಣ್ಯ ಇಲಾಖೆಯ ವಿರುದ್ದ. ಕಾಡಂಚಿನ ಗ್ರಾಮಗಳ ರೈತರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿAದ ಮಳವಳ್ಳಿ ಅರಣ್ಯ ಇಲಾಖೆ ಕಛೇರಿ ಮುಂದೆ ಸೋಮವಾರ ಪ್ರತಿಭಟ
ನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ತಿಳಿಸಿದರು
ಅವರು ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡುತ್ತ
ತೆಂಗು, ಬಾಳೆ, ಭತ್ತ, ಜೋಳ, ರಾಗಿ, ಕಬ್ಬು, ಬೆಳೆಗಳು . ಪೈಪ್‌ಲೈನ್ ಐ.ಪಿ. ಸೆಟ್ ಗಳು ಸೋಲಾರ್ ಬೇಲಿ ಮುಂತಾದವುಗಳನ್ನ ಕಾಡು ಪ್ರಾಣಿಗಳು ಹಾಳುಮಾಡಿವೆ ಅರಣ್ಯ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರೆ ಜೀಪ್ ಇಲ್ಲ ವಾಚರ್ ಗಳು ಇಲ್ಲ ಮೀಟಿಂಗ್ ಇದೆ ಎಂದು ತಿಂದು ಲೂಟಿ ಮಾಡಿದ ಮೇಲೆ ಬರುತ್ತಾರೆ ರೈತರ ರಕ್ಷಿಸಲು ವಿಫಲರಾದ ಆರ್.ಎಫ್.ಓ., ಎ.ಸಿ.ಎಫ್., ಡಿ.ಸಿ.ಎಫ್. ಗಳ ವರ್ಗ ಮಾಡಿ ದಕ್ಷ ಅಧಿಕಾರಿಗಳ ನೇಮಕ ಮಾಡಬೇಕು,
ಕಾಡು ಪ್ರಾಣಿಗಳಿಂದ ನಷ್ಟಕ್ಕೆ ಒಳಗಾದ ರೈತರ ಬೆಳೆಗಳಿಗೆ ಸರ್ಕಾರದಿಂದ ಬೆಂಬಲ ಬೆಲೆ ಆಧಾರದಲ್ಲಿ ಸೂಕ್ತ ಪರಿಹಾರ ನೀಡಬೇಕು.
ಅಗತ್ಯ ಸ್ಥಳಗಳಲ್ಲಿ ಗೇಟ್ ನಿರ್ಮಿಸಬೇಕು, ಟ್ರಂಚ್ & ರೈಲ್ವೆ ಕಂಬಿ, ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ರೈತರ ಜಮೀನಿಗೆ ಬಾರದಂತೆ ತಡೆಯಬೇಕು.
ಅಗತ್ಯಕ್ಕೆ ಅನುಗುಣವಾಗಿ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ರಾತ್ರಿ ಪಾಳಿಯು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು.
ನಷ್ಟಕ್ಕೆ ಒಳಗಾದ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಇನ್ನು ಪರಿಹಾರ ದೊರಕಿಲ್ಲ, ಅವರಿಗೆ ಶ್ರೀಘ್ರ ಪರಿಹಾರ ನೀಡಬೇಕು.
ಅರಣ್ಯ ಇಲಾಖೆಯಲ್ಲಿ ನಡೆಯುವ ಭ್ರಷ್ಟಚಾರ ತಡೆಗಟ್ಟಿ ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಬ್ಬಣಿ ಬಬ್ರುವಾಹನ. ಡಿ.ಮಹಾದೇವಯ್ಯ ಎಮ್.ಈ.ಪುಟ್ಟರಾಜ್ ದಬ್ಬಳ್ಳಿ.ನಾಗರಾಜ್ ಸತೀಶ್ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: