April 27, 2024

Bhavana Tv

Its Your Channel

ಮಹಿಳೆಯ ಮೇಲೆ ದಾಳಿ ನಡೆಸಿ ಚಿನ್ನ ಕದ್ದು ಪರಾರಿಯಾದ ಕಳ್ಳರು.

ಮಳವಳ್ಳಿ : ಹೊಲದಲ್ಲಿ ತಗಣಿಕಾಯಿ ಕೊಯ್ಯುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿರುವ ಮೂವರು ಯುವಕರ ಗುಂಪು ಆಕೆಯ ಕತ್ತಿನಲ್ಲಿದ್ದ ತಾಳಿ, ಚಿನ್ನದ ಗುಂಡುಗಳಿದ್ದ ಕರಿಮಣಿ ಸರ ಹಾಗೂ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಮಳವಳ್ಳಿ ತಾಲ್ಲೂಕಿನ ಮಂಚನಹಳ್ಳಿ ಗ್ರಾಮದ ಬಳಿ ಜರುಗಿದೆ.

ಒಡವೆ ಕಳೆದುಕೊಂಡ ‌ಮಹಾದೇವಮ್ಮ.

ಮಳವಳ್ಳಿ ಸುತ್ತಮುತ್ತ ಹೆಚ್ಚುತ್ತಿರುವ ಸರಗಳ್ಳತನ, ಮನೆಗಳ್ಳತನ, ದರೋಡೆ ಮುಂತಾದ ಅಪರಾಧ ಕೃತ್ಯಗಳಿಂದ ಜನ ಆತಂಕಕ್ಕೆ ಒಳಗಾಗಿರುವಾಗಲೇ ಹಾಡುಹಗಲೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೂ ದಾಳಿ ಮಾಡಿರುವ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಒಡವೆಗಳನ್ನು ದೋಚಿ ಪರಾರಿಯಾಗಿರುವುದು ಒಂಟಿಯಾಗಿ ಮಹಿಳೆಯರು ಹೊಲಗದ್ದೆಗಳಿಗೆ ಹೋಗುವುದು ಹೇಗೆ ಎಂಬ ಭಯ ಆತಂಕ ವನ್ನು ಸೃಷ್ಟಿಸಿದೆ.
ಮಂಚನಹಳ್ಳಿ ಗ್ರಾಮದ ಎಂ ಮಾದಯ್ಯ ಎಂಬುವರ ಪತ್ನಿಯಾದ ಮಹಾದೇವಮ್ಮ ಎಂಬಾಕೆ ನಿನ್ನೆ ಮಧ್ಯಾಹ್ನ ೧೨. ೩೦ ರ ಸಮಯದಲ್ಲಿ ತಮ್ಮ ಹೊಲದಲ್ಲಿ ತಗಣಿ ಕಾಯಿ ಕೊಯ್ಯುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ಪೈಕಿ ಒಬ್ಬಾತ ಆಕೆಯ ಬಳಿ ಬಂದು ನಾವು ಪಕ್ಕದ ತೋಟದಲ್ಲಿ ಎಳನೀರು ಕೊಯ್ಯುತ್ತಿದ್ದು ಎಳನೀರು ತುಂಬಿಕೊAಡು ಹೋಗಲು ಟೆಂಪು ಬರುತ್ತಿದ್ದು ಟೆಂಪೋ ತರಲು ಅಕ್ಕಪಕ್ಕ ದಾರಿ ಇದೆಯೇ ಎಂದು ಕೇಳಿದನಂತೆ.
ಇಲ್ಲಿ ಯಾವುದೇ ದಾರಿ ಇಲ್ಲ ಎಂದು ಮಹಾದೇವಮ್ಮ ಹೇಳುತ್ತಿರುವಾಗಲೇ ಅವರನ್ನು ತಳ್ಳಿ ಕೆಳಗೆ ಬೀಳಿಸಿ ಅವರ ಬಾಯಿ, ಕಣ್ಣುಗಳನ್ನು ಮುಚ್ಚಿದ ಆತ ಅವರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ.
ಮತ್ತೊಬ್ಬ ಅವರ ಕತ್ತಿನಲ್ಲಿದ್ದ ೩೫ ಚಿನ್ನದ ಗುಂಡುಗಳು, ತಾಳಿ ಇದ್ದ ಕರಿಮಣಿ ಸರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿ ದ್ದಾರೆ.
ಒಟ್ಟು ೮೫ ಸಾವಿರ ರೂ ಮೌಲ್ಯದ ೨೫ ಗ್ರಾಂ ಒಡವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದು ಈ ಸಂಬAಧ ಮಹಾದೇವಮ್ಮ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಕಾರ್ಯ ಕೈಗೊಂಡಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ ; ಮಲ್ಲಕಾರ್ಜುನ ಸ್ವಾಮಿ ಮಳವಳ್ಳಿ

error: