December 22, 2024

Bhavana Tv

Its Your Channel

ಸರ್ಕಾರಿ ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಅಗಸನಪುರ ಗ್ರಾಮದ ಗ್ರಾಮಸ್ಥರಿಂದ ಪ್ರತಿಭಟನೆ

ಳವಳ್ಳಿ : ಸರ್ಕಾರಿ ಆಸ್ಪತ್ರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ ತಾಲ್ಲೂಕಿನ ಅಗಸನಪುರ ಗ್ರಾಮದ ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.
ಅಗಸನಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಶಾಮಿಯಾನ ಹಾಕಿ ಪ್ರತಿಭಟನೆ ಅರಂಭಸಿದ ಗ್ರಾಮದ ಮುಖಂಡರು ಒತ್ತುವರಿಯಾಗಿ ರುವ ಆಸ್ಪತ್ರೆ ಜಾಗವನ್ನು ಅಳತೆ ಮಾಡಿ ಒತ್ತುವರಿಯನ್ನು ತೆರವು ಗೊಳಿಸುವಲ್ಲಿ ವಿಫಲವಾಗಿರುವ ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಪುಟ್ಟರಾಮು, ಮುದ್ದಂಕೇಗೌಡ ಅವರುಗಳು ಈ ಆಸ್ಪತ್ರೆಗೆ ಒಟ್ಟು ೩೫ ಗುಂಟೆ ಜಾಗ ನಿಗದಿಯಾಗಿದ್ದು ಇದರಲ್ಲಿ ೧೬ ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಗ್ರಾಮದ ಪ್ರಭಾವಿ ವ್ಯಕ್ತಿಯೋರ್ವ ಸದರಿ ಆಸ್ಪತ್ರೆ ಜಾಗವನ್ನು ಆಕ್ರಮಿಸಿ
ಕೊಂಡು ಈಗಾಗಲೇ ಮನೆ ನಿರ್ಮಿಸಿ ಕೊಂಡಿದ್ದಾರೆ ಎಂದು ವಿವರಿಸಿದರು.
ಸದರಿ ಆಸ್ಪತ್ರೆ ಜಾಗವನ್ನು ಅಳತೆ ಮಾಡಿಸಿ ಹದ್ದು ಬಸ್ತು ನಿಗದಿಗೊಳಿಸಿ ಕೊಡುವಂತೆ ತಹಸೀಲ್ದಾರ್ ಅವರಿಗೆ ಹಲವಾರು ಭಾರಿ ಮನವಿ ಸಲ್ಲಿಸಲಾಗಿದ್ದು ಅಳತೆಗೆ ಗ್ರಾಮಸ್ಥರೇ ಹಣ ಸಂದಾಯ ಮಾಡಲು ಮುಂದಾದಾಗ ಇದಕ್ಕೆ ಒಪ್ಪದ ತಹಸೀಲ್ದಾರ್ ಅವರು ಸಂಬAಧಿಸಿದ ಇಲಾಖೆಯವರು ಹಣ ಕಟ್ಟಿದರೆ ಮಾತ್ರ ಅಳತೆ ಮಾಡಿಸಿ ಕೊಡುವುದಾಗಿ ತಿಳಿಸಿದರು.
ಅದರಂತೆ ಆಸ್ಪತ್ರೆ ಯಿಂದಲೇ ಹಣ ಸಂದಾಯ ಮಾಡಿದ್ದು ಜೊತೆಗೆ ಗ್ರಾಮ ಪಂಚಾಯತಿ ಯಿಂದಲೂ ನಿರ್ಣಯ ಮಾಡಿ ಕಳುಹಿಸಿದ್ದು ಇಷ್ಟಾದರೂ ರಾಜಕೀಯ ಒತ್ತಡಕ್ಕೆ ಮಣಿದಿರುವ ತಹಸೀಲ್ದಾರ್ ಅವರು ಆಸ್ಪತ್ರೆ ಜಾಗ ಹದ್ದು ಬಸ್ತ್ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಗೆ ಕ್ಷೇತ್ರದ ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಒತ್ತುವರಿ ದಾರನಿಗೆ ಬೆಂಬಲವಾಗಿ ನಿಂತು ಆಸ್ಪತ್ರೆ ಜಾಗ ಅಳತೆ ಮಾಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಆಸ್ಪತ್ರೆ ಜಾಗವನ್ನು ಅಳತೆ ಮಾಡಿ ಹದ್ದುಬಸ್ತ್ ನಿಗದಿ ಪಡಿಸದಿದ್ದಲ್ಲಿ ಪ್ರತಿಭಟನೆ ಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿದ್ದಪ್ಪ, ಅಪ್ಪಯ್ಯ, ರಾಜಣ್ಣ, ನಾಗರಾಜು, ಸುರೇಶ, ಚನ್ನಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: