ಮಳವಳ್ಳಿ ; ರೈತರ ಸಮರಶೀಲ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರವು ರದ್ದುಪಡಿಸಿದ ಕೃಷಿ ಕಾಯ್ದೆಗಳ ಮುಂದುವರೆದ ಭಾಗವಾಗಿ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸ ಬೇಕೆಂದು ಒತ್ತಾಯಿಸಿ ಡಿಸೆಂಬರ್ ೧೨ರಂದು ಪರ್ಯಾಯ ಕೃಷಿ ಧೋರಣೆಗಾಗಿ. ಚಳಿಗಾಲದ ಅಧಿವೇಶನಕ್ಕೆ ಮುನ್ನ. ರಾಜ್ಯಮಟ್ಟದ ರೈತರ ಅಧಿವೇಶನವನ್ನು. ಬೆಳಗಾವಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ತಿಳಿಸಿದರು.
ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ. ಡಿಸೆಂಬರ್ ೧೩ ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಜಾರಿಗೊಳಸಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಗಳನ್ನು ಹಿಂತೆಗೆದುಕೊಳ್ಳ ಬೇಕು., ಬೆಳೆ ನಷ್ಟ ಪರಿಹಾರ, ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು.
ರಾಜ್ಯದ ರೈತರು, ದಲಿತರು, ಕಾರ್ಮಿಕರು, ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ೫೦ ಕ್ಕೂ ಹೆಚ್ಚು ಸಂಘಟನೆಗಳ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟಿಸುತ್ತಿರುವ ಈ ರೈತರ ಅಧಿವೇಶನದ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರು ವಹಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ದ ರಾಷ್ಟ್ರೀಯ ನಾಯಕರಾದ ಯೋಗೇಂದ್ರ ಯಾದವ್. ಡಾ. ಆಶೋಕ್ ಧವಳೆ. ಅಧಿವೇಶನ ವನ್ನು ಉದ್ಘಾಟನೆ ಮಾಡಲಿದ್ದಾರೆ. ಬಡಗಲಪುರ ನಾಗೇದ್ರ. ಕೋಡಿಹಳ್ಳಿ ಚಂದ್ರಶೇಖರ.ಬಿ.ಎಸ್ ಸೊಪ್ಪಿನ್ .ಮಾವಳ್ಳಿ ಶಂಕರ್. ಕುರಬೂರು ಶಾಂತಕುಮಾರ್ .ಚುಕ್ಕಿ ನಂಜುAಡಸ್ವಾಮಿ. ನೂರ್ ಶ್ರೀಧರ್. ಡಾ.ಪ್ರಕಾಶ್ ಕಮ್ಮರಡಿ. ಮತ್ತು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅದ್ಯಕ್ಷರಾದ ದೇವಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟಿ, ಇತ್ಯಾದಿ ಕೃಷಿ ಸಂಬAಧಿತ ಎಲ್ಲಾ ಕ್ಷೇತ್ರಗಳನ್ನು ಜಗತ್ತಿನ, ದೇಶದ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲು ರೂಪಿಸಲಾಗಿದ್ದ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಶತಮಾನದ ಚಾರಿತ್ರಿಕ ರೈತರ ಹೋರಾಟಕ್ಕೆ ಮಣಿದು ಪ್ರಧಾನಿ ನರೇಂದ್ರ ಮೋದಿ ಹಿಂದಕ್ಕೆ ಪಡೆದಿರುವುದು ರೈತರ ಐಕ್ಯ ಶಾಂತಿ. ಹೋರಾಟಕ್ಕೆ ದೊರತ ವಿಜಯ ಎಂದರು.
ಮೋದಿಯಿಂದ ಶಬಾಶ್ ಗಿರಿ ಪಡೆಯಲು ರಾಜ್ಯ ಸರ್ಕಾರ ಅತುರತುರವಾಗಿ ಜಾರಿಗೆ ತಂದ ಕಾಯ್ದೆಗಳನ್ನ. ಈ ಅಧಿವೇಶನದಲ್ಲಿ ಕೂಡಲೇ ಹಿಂತೆಗೆದುಕೊಳ್ಳಬೇಕು, ಅಲ್ಲದೆ ವಿಪರೀತ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, ಆಹಾರ ಧಾನ್ಯ ಬೆಳೆಗಳಿಗೆ. ಎಕರೆಗೆ ಕನಿಷ್ಠ ೨೫,೦೦೦ ರೂ, ತರಕಾರಿ, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಟ ೧ ಲಕ್ಷ ರೂ. ಬೆಳೆ ನಷ್ಟ ಪರಿಹಾರವನ್ನು ನೀಡಬೇಕು. ಸಂಕಷ್ಟದಲ್ಲಿ ಇರುವ ಹೈನುಗಾರಿಕೆ ರೈತರ ರಕ್ಷಿಸಲು ಲೀಟರ್ ಹಾಲಿಗೆ ೩೫.ರೂಗಳ ನಿಗದಿಗೋಳಿಸಿ. ಜೊತೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ೫ ರಿಂದ ೧೫ ರೂ.ಗೆ ಏರಿಸಬೇಕು .ಟನ್ ಕಬ್ಬಿಗೆ ೪೫೦೦ ನೀಡಬೇಕು
ಬಗರ್ ಹುಕ್ಕಂ, ಅರಣ್ಯ ಭೂಮಿ ಸಕ್ರಮಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿಗಳನ್ನು ರೂಪಿಸಬೇಕು. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೃಷಿ ಭೂಮಿ ಖರೀದಿ ಮಾಡಲು ರಾಜ್ಯದ ಬಜೆಟ್‌ನಲ್ಲಿ ಕನಿಷ್ಠ ೨೦೦೦ ಕೋಟಿ ರೂ. ಗಳನ್ನು ಮೀಸಲಿಡಬೇಕು, ಗ್ರಾಮೀಣ ಬಡವರ ಮನೆ ನಿವೇಶನದ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಬಿ.ಡಿ.ಎ. ಮಾದರಿಯಲ್ಲಿ ಭೂ ಸ್ವಾಧೀನ ಮಾಡಿ, ಉಚಿತವಾಗಿ ನಿವೇಶನ, ವಸತಿ ನೀಡಬೇಕು”
ಕೃಷಿಗೆ ಯೋಗ್ಯವಲ್ಲದ ದನ, ಕರುಗಳನ್ನು ಮಾರುಕಟ್ಟೆ ದರದಲ್ಲಿ ರಾಜ್ಯ ಸರ್ಕಾರವೇ ಖರೀದಿ ಮಾಡಬೇಕು, ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹತ್ತಾರು ‘ಕಿಸಾನ್ ಮಹಾ ಪಂಚಾಯತ್’ಗಳನ್ನು ಸಂಘಟಿಸಿ, ‘ದೆಹಲಿ ಮಾದರಿ’ಯ ಹೋರಾಟಗಳನ್ನು ಹಮ್ಮಿಕೊಳ್ಳಲು ಸಂಯುಕ್ತ ಹೋರಾಟ-ಕರ್ನಾಟಕ ನಿರ್ಧರಿಸಿದೆ ಎಂದು ತಿಳಿಸಿದರು ಗೋಷ್ಠಿಯಲ್ಲಿ ಗುರುಸ್ವಾಮಿ. ಸತೀಶ್ ಉಪಸ್ಥಿತರಿದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ